ಕೆರಿಬಿಯನ್ ರಾಷ್ಟ್ರಗಳಿಗೆ 150 ಮಿಲಿಯನ್ ಡಾಲರ್ ಸಾಲ: ಪ್ರಧಾನಿ ಮೋದಿ ಘೋಷಣೆ

ವಿಶ್ವಸಂಸ್ಥೆಯಲ್ಲಿ ನಡೆದ ಭಾರತ- ಕ್ಯಾರಿಕೊಮ್ ನಾಯಕರ ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆರಿಬಿಯನ್ ಮುಖಖಂಡರನ್ನು ಭೇಟಿ ಮಾಡಿದ್ದು, ಹವಾಮಾನ ವೈಫರೀತ್ಯ ವಿರುದ್ಧ ಹೋರಾಟ ಹಾಗೂ ಈ ಗುಂಪಿನಲ್ಲಿ ಭಾರತ ಹೆಚ್ಚಿನ ರೀತಿಯಲ್ಲಿ ಪಾಲ್ಗೊವಿಕೆ ಕುರಿತಂತೆ ಚರ್ಚಿಸಲಾಗಿದೆ.
ಕ್ಯಾರಿಕೊಮ್ ನಾಯಕರೊಂದಿಗೆ ಮೋದಿ
ಕ್ಯಾರಿಕೊಮ್ ನಾಯಕರೊಂದಿಗೆ ಮೋದಿ

ನ್ಯೂಯಾರ್ಕ್ : ವಿಶ್ವಸಂಸ್ಥೆಯಲ್ಲಿ ನಡೆದ ಭಾರತ- ಕ್ಯಾರಿಕೊಮ್ ನಾಯಕರ ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆರಿಬಿಯನ್ ಮುಖಖಂಡರನ್ನು ಭೇಟಿ ಮಾಡಿದ್ದು, ಹವಾಮಾನ ವೈಫರೀತ್ಯ ವಿರುದ್ಧ ಹೋರಾಟ ಹಾಗೂ ಈ ಗುಂಪಿನಲ್ಲಿ ಭಾರತ ಹೆಚ್ಚಿನ ರೀತಿಯಲ್ಲಿ ಪಾಲ್ಗೊವಿಕೆ ಕುರಿತಂತೆ ಚರ್ಚಿಸಲಾಗಿದೆ

ಈ ಸಂದರ್ಭದಲ್ಲಿ  ಕ್ಯಾರಿಕಾಮ್ ಸಮುದಾಯ ಅಭಿವೃದ್ದಿ ಯೋಜನೆಗಾಗಿ 14 ಮಿಲಿಯನ್ ಅಮೆರಿಕನ್ ಡಾಲರ್ ಅನುದಾನ ಪ್ರಕಟಿಸಿದ ಪ್ರಧಾನಿ ಮೋದಿ, ಸೌರಶಕ್ತಿ, ನವೀಕರಿಸಬಹುದಾದ ಇಂಧನ, ಹವಾಮಾನ ವೈಫರೀತ್ಯಕ್ಕೆ ಸಂಬಂಧಿಸಿದ ಯೋಜನೆಗಳಾಗಿ ಮತ್ತೆ 150 ಮಿಲಿಯನ್ ಡಾಲರ್ ಸಾಲವನ್ನು ಪ್ರಕಟಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. 

ಕ್ಯಾರಿಕೋಮ್ ಗುಂಪಿನಲ್ಲಿ 15 ರಾಷ್ಟ್ರಗಳ ಸದಸ್ಯರು ಹಾಗೂ ಇತರ ಐವರು ಸಹಾಯಕ ಸದಸ್ಯರಿದ್ದಾರೆ. ಪ್ರಾದೇಶಿಕ ಆರ್ಥಿಕ ಬೆಳವಣಿಗೆ ಹಾಗೂ ವ್ಯಾಪಾರ ನೀತಿಗಳ  ರಚನೆಗಾಗಿ 1973ರಲ್ಲಿ ಕ್ಯಾರಿಕೋಮ್ ರಾಷ್ಟ್ರಗಳು ಆರ್ಥಿಕ  ಮತ್ತು ರಾಜಕೀಯ ಸಮುದಾಯವನ್ನು ರಚಿಸಿಕೊಂಡಿವೆ.

 ವಿಶ್ವಸಂಸ್ಥೆ ಸಾಮಾನ್ಯ ಸಭೆಯ 74ನೇ ಅಧಿವೇಶನದ ಭಾಗವಾಗಿ ನಡೆದ ಸಭೆಯಲ್ಲಿ ಅಂಟಿಗುವಾ ಮತ್ತು ಬಾರ್ಬುಡಾ, ಬಹಮಾಸ್, ಬರ್ಬೊಡಾಸ್, ಬೆಲಿಜಿ, ಡೊಮಿನಿಕಾ, ಗ್ರೆನಾಡಾ, ಗಯಾನಾ, ಹೈಟಿ, ಜಮೈಕಾ, ಸೆಂಟ್ ಕಿಟ್ಟಿಸ್, ಮತ್ತು ನೇವಿಸ್, ಸೆಂಟ್  ಲೂಸಿಯಾ, ಸೆಂಟ್  ವಿಂಸೆಟ್ , ಗ್ರೇನಾಡಿನೇಸ್, ಟ್ರಿನಿಡಾಡ್ ಮತ್ತು ತೊಬಾಗೊ ರಾಷ್ಟ್ರಗಳ ಮುಖಂಡರು ಪಾಲ್ಗೊಂಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಕೆರಿಬಿಯನ್ ರಾಷ್ಟ್ರಗಳ ಮುಖಂಡರೊಂದಿಗೆ ಸಭೆಯಲ್ಲಿ ಪಾಲ್ಗೊಂಡಿರುವ ಚಿತ್ರವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ. ಕೆರಿಬಿಯನ್ ರಾಷ್ಟ್ರಗಳೊಂದಿಗೆ ಐತಿಹಾಸಿಕ ಹಾಗೂ ದೃಢ ಸಂಬಂಧಗಳನ್ನು ಇದು ಒತ್ತಿ ಹೇಳುತ್ತದೆ. 14 ರಾಷ್ಟ್ರಗಳ ಮುಖಂಡರು ಇದರಲ್ಲಿ ಪಾಲ್ಗೊಂಡಿದ್ದರು ಎಂಬುದಾಗಿ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com