ಭಯೋತ್ಪಾದನೆ ನಿಗ್ರಹಕ್ಕೆ ಪಾಕಿಸ್ತಾನ ವಾಸ್ತವ ದಿಟ್ಟ ಕ್ರಮ ತೆಗೆದುಕೊಳ್ಳಬೇಕು: ಭಾರತ 

ಭಯೋತ್ಪಾದನೆಯನ್ನು ಹತ್ತಿಕ್ಕುವ ವಿಷಯದಲ್ಲಿ ಪಾಕಿಸ್ತಾನ ಪ್ರಯತ್ನ ಬದಲಾಗಿಲ್ಲ ಎಂದು ತನ್ನ ನಿಲುವನ್ನು ಪ್ರತಿಪಾದಿಸಿದ ಭಾರತ, ಸಮಸ್ಯೆಯನ್ನು ನಿವಾರಿಸಲು ಪಾಕಿಸ್ತಾನ ತಳಮಟ್ಟದ ದಿಟ್ಟ ಕ್ರಮ ಕೈಗೊಳ್ಳಬೇಕು ಎಂದು ಮತ್ತೆ ಒತ್ತಾಯಿಸಿದೆ.
ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್
ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್

ನ್ಯೂಯಾರ್ಕ್: ಭಯೋತ್ಪಾದನೆಯನ್ನು ಹತ್ತಿಕ್ಕುವ ವಿಷಯದಲ್ಲಿ ಪಾಕಿಸ್ತಾನ ಪ್ರಯತ್ನ ಬದಲಾಗಿಲ್ಲ ಎಂದು ತನ್ನ ನಿಲುವನ್ನು ಪ್ರತಿಪಾದಿಸಿದ ಭಾರತ, ಸಮಸ್ಯೆಯನ್ನು ನಿವಾರಿಸಲು ಪಾಕಿಸ್ತಾನ ತಳಮಟ್ಟದ ದಿಟ್ಟ ಕ್ರಮ ಕೈಗೊಳ್ಳಬೇಕು ಎಂದು ಮತ್ತೆ ಒತ್ತಾಯಿಸಿದೆ.


ಭಯೋತ್ಪಾದನೆಯನ್ನು ನಿಗ್ರಹಿಸುವ ವಿಚಾರದಲ್ಲಿ ಏನು ಕ್ರಮ ಕೈಗೊಳ್ಳಬೇಕು ಎಂದು ನಾವು ಈ ಹಿಂದೆ ಹೇಳಿದ್ದೇವೆ, ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ನ್ಯೂಯಾರ್ಕ್ ನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.


ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಮಾತುಕತೆಯಿಂದ ಭಾರತ ಯಾವತ್ತಿಗೂ ಹಿಂದೆ ಸರಿದಿಲ್ಲ. ಆದರೆ ಅದು ಭಯೋತ್ಪಾದನೆಯನ್ನು ನಿಗ್ರಹಿಸಲು ಪ್ರಯತ್ನ ನಡೆಸದಿದ್ದರೆ ಭಾರತ ಮಾತುಕತೆಗೆ ಎಂದಿಗೂ ಸಿದ್ಧವಿಲ್ಲ ಎಂದು ಮೊನ್ನೆ ಮಂಗಳವಾರ ಪ್ರಧಾನಿ ಮೋದಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತನಾಡುತ್ತಾ ಹೇಳಿದ್ದರು.


ಭಾರತದಲ್ಲಿ ಅದರಲ್ಲೂ ಜಮ್ಮು-ಕಾಶ್ಮೀರದಲ್ಲಿ ಕಳೆದ 30 ವರ್ಷಗಳಿಂದ ಭಾರತ ವಿಪರೀತ ಭಯೋತ್ಪಾದಕರ ಉಪಟಳದ ಸಮಸ್ಯೆಯನ್ನು ಎದುರಿಸುತ್ತಿದೆ. ಅದಕ್ಕೆ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿದೆ ಎಂಬುದು ಸಹ ಗೊತ್ತಿದೆ. ಹೀಗಾಗಿ ಪಾಕಿಸ್ತಾನದಿಂದ ಭಯೋತ್ಪಾದಕರನ್ನು ತಳಮಟ್ಟದಿಂದ ನಿಗ್ರಹಿಸುವ ಕೆಲಸವಾಗದಿದ್ದರೆ ಅದರೊಂದಿಗೆ ಮಾತುಕತೆ ಆರಂಭಿಸುವ ಮಾತೇ ಇಲ್ಲ ಎಂದು ಮೋದಿಯವರು ಕಡ್ಡಿಮುರಿದಂತೆ ಹೇಳಿದ್ದಾರೆ. 


ಕಾಶ್ಮೀರ ವಿಷಯದ ಕುರಿತು ಭಾರತದ ನಿಲುವನ್ನು ಮತ್ತೆ ಪ್ರತಿಪಾದಿಸಿದ ರವೀಶ್ ಕುಮಾರ್, ಇದು ಭಾರತ ಮತ್ತು ಪಾಕಿಸ್ತಾನ ನಡುವಣ ದ್ವಿಪಕ್ಷೀಯ ವಿಷಯವಾಗಿದ್ದು ಇದರಲ್ಲಿ ಮೂರನೇ ವ್ಯಕ್ತಿ ಅಥವಾ ದೇಶಕ್ಕೆ ಮಧ್ಯಪ್ರವೇಶಿಸಲು ಅವಕಾಶವಿಲ್ಲ ಎಂದು ಪುನರುಚ್ಛರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com