ಕಾಶ್ಮೀರ ಸಮಸ್ಯೆಯನ್ನು ಕೋಮು ದೃಷ್ಟಿಯಿಂದ ನೋಡಬೇಡಿ: ವಿದೇಶಾಂಗ ಸಚಿವ ಜೈಶಂಕರ್ 

ಕಾಶ್ಮೀರ ವಿವಾದವನ್ನು ಕೋಮು ದೃಷ್ಟಿಯಿಂದ ನೋಡಬಾರದು ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಸಾರ್ಕ್ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್
ಸಾರ್ಕ್ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್

ನ್ಯೂಯಾರ್ಕ್: ಕಾಶ್ಮೀರ ವಿವಾದವನ್ನು ಕೋಮು ದೃಷ್ಟಿಯಿಂದ ನೋಡಬಾರದು ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.


ಭಾರತದಲ್ಲಿರುವ ಪ್ರಮುಖ ಇಸ್ಲಾಮಿಕ್ ಸಂಘಟನೆ ಜಮೈತ್ -ಉಲೆಮಾ-ಇ-ಹಿಂದ್ ಕಾಶ್ಮೀರದಲ್ಲಿ ಬದಲಾವಣೆಯನ್ನು ಬಯಸಿದ್ದು, ಗಲ್ಫ್ ನ ಮುಸಲ್ಮಾನ ದೇಶಗಳೊಂದಿಗೆ ಭಾರತದ ಸಂಬಂಧ ಕಳೆದ 5 ವರ್ಷಗಳಲ್ಲಿ ಪ್ರಗತಿಯ ಹೆಜ್ಜೆಯತ್ತ ಸಾಗುತ್ತಿದೆ. ಹೀಗಿರುವಾಗ ಭಾರತ ಸರ್ಕಾರ ಮುಸ್ಲಿಂ ವಿರೋಧಿ ಎಂಬ ಧೋರಣೆಯನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಪ್ರತಿಪಾದಿಸಿದರು. ಹೇಳಿದರು.


ಅವರು ನಿನ್ನೆ ನ್ಯೂಯಾರ್ಕ್ ನಲ್ಲಿ ಸಾರ್ಕ್ ದೇಶಗಳ ಸಭೆಗೆ ಮುನ್ನ ನಡೆದ ವಿದೇಶಿ ಸಂಬಂಧಗಳ ಮಂಡಳಿಯನ್ನುದ್ದೇಶಿಸಿ ಮಾತನಾಡಿ ಭಾರತ, ರಾಜಕೀಯಗೊಳಿಸಿದ ಹಿಂದೂ ರಾಷ್ಟ್ರೀಯತೆಯ ಉದಯ ಕುರಿತು ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸಿ ಈ ಪ್ರಶ್ನೆಯ ವಿಶ್ಲೇಷಣೆ ರೀತಿಯನ್ನು ಒಪ್ಪುವುದಿಲ್ಲ ಎಂದರು.


ಈ ಪ್ರಶ್ನೆಗೆ ನಾನು ಬೇರೆ ರೀತಿ ವಿಶ್ಲೇಷಿಸುತ್ತೇನೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಳಾದ ಮೇಲೆ ನಾವು ಏನು ನೋಡಿದ್ದೇವೆ ಅದು ದೇಶದ ಪ್ರಜಾಪ್ರಭುತ್ವೀಕರಣದ ಫಲಿತಾಂಶವಾಗಿದೆ. ಇಂದು ಭಾರತದಲ್ಲಿ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಶಕ್ತಿ ಕೇವಲ ದೊಡ್ಡ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ. ಹಳ್ಳಿಗಳಿಗೂ ವಿಸ್ತರಿಸುತ್ತಿವೆ. ಕಾಸ್ಮೊಪೊಲಿಟನ್ ನಗರಗಳ ಸಂಸ್ಕೃತಿ, ಇಂಗ್ಲಿಷ್ ಭಾಷೆ ಮಾತನಾಡುವವರ ಜೀವನ ಮಟ್ಟ ಇಂದು ವಿಭಿನ್ನ ವರ್ಗಗಳ ಜನರನ್ನು ತಲುಪಿದೆ. ಭಾರತದಲ್ಲಿ ಆಗಿರುವ ಈ ಬದಲಾವಣೆ ಪ್ರಜಾಪ್ರಭುತ್ವದ ಯಶಸ್ಸನ್ನು ತೋರಿಸುತ್ತದೆ ಎಂದರು.


ಭಾರತದಲ್ಲಿ ಜಾತ್ಯತೀತತೆ ತತ್ವಗಳಿಗೆ ಅಪಾಯವಿದೆ ಎಂಬ ನಿಲುವನ್ನು ಕೂಡ ಒಪ್ಪುವುದಿಲ್ಲ. ಅಷ್ಟಕ್ಕೂ ಜಾತ್ಯತೀತತೆ ಎಂಬುದನ್ನು ಕಾನೂನಿನ ಮೂಲಕ ಅಥವಾ ಸಾಂವಿಧಾನಿಕ ನಂಬಿಕೆ ಮೂಲಕ ಪ್ರಚುರಪಡಿಸಿಲ್ಲ. ಸಮಾಜದ ನೀತಿಗಳ ಮೂಲಕ ಪ್ರಚುರವಾದಂತಹದ್ದು. ಸಮಾಜದ ನೀತಿಗಳು ಜಾತ್ಯತೀತವಾಗಿಲ್ಲದಿದ್ದಿದ್ದರೆ ಯಾವುದೇ ಕಾನೂನು, ಅಥವಾ ಸಾಂವಿಧಾನಿಕ ನಿಬಂಧನೆಯು ಅದನ್ನು ಖಾತ್ರಿಪಡಿಸುವುದಿಲ್ಲ. ನಮ್ಮ ಸಮಾಜದ ನೀತಿಗಳು ಬದಲಾಗಿವೆ ಎಂದು ನಾನು ಭಾವಿಸುವುದಿಲ್ಲ, ಭಾರತದ ನೀತಿಗಳು, ಹಿಂದೂ ನೀತಿಗಳು ಜಾತ್ಯತೀತವಾಗಿವೆ ಎಂದರು. 


ಭಾರತ ಹಿಂದೂ ರಾಷ್ಟ್ರೀಕರಣವಾಗಿದೆ. ಪ್ರಧಾನಿ ಮೋದಿಯವರು ಹಿಂದೂವಾದಿ, ಮುಸ್ಲಿಂ ವಿರೋಧಿ ಎಂಬ ಧೋರಣೆಯಿದೆಯಲ್ಲವೇ ಎಂದು ಕೇಳಿದ್ದಕ್ಕೆ ಸಹ ಜೈಶಂಕರ್ ಒಪ್ಪಲಿಲ್ಲ. ಭಾರತದಲ್ಲಿನ ಜಮೈತ್ ಉಲೆಮಾ ಇ ಹಿಂದ್ ರಾಷ್ಟ್ರೀಯ ಸಂಘಟನೆಯಾಗಿದ್ದು ಅದು ಸಮಾಜದ ಮೇಲೆ ತೀವ್ರ ಪರಿಣಾಮ ಬೀರಿದೆ, ಅದಕ್ಕೆ ದೇಶದಲ್ಲಿ ಮಹತ್ವವಿದೆ. ಅವರ ವಾರ್ಷಿಕ ಸಭೆಯಲ್ಲಿ ಸ್ಪಷ್ಟವಾಗಿ ಅವರು ಕಾಶ್ಮೀರದಲ್ಲಿ ಬದಲಾವಣೆ ಬೇಕು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಕಾಶ್ಮೀರ ಸಮಸ್ಯೆಯನ್ನು ಕೋಮುವಾದದ ದೃಷ್ಟಿಕೋನದಿಂದ ನೋಡಬೇಡಿ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com