ಕ್ಷಿಪ್ರಗತಿಯಲ್ಲಿ ಜಮ್ಮು-ಕಾಶ್ಮೀರದಲ್ಲಿನ ನಿರ್ಬಂಧ ತೆರವುಗೊಳಿಸಲು ಭಾರತಕ್ಕೆ ಅಮೆರಿಕಾ ಒತ್ತಾಯ

ಜಮ್ಮು- ಕಾಶ್ಮೀರದಲ್ಲಿ ವಿಧಿಸಲಾಗಿರುವ ನಿರ್ಬಂಧವನ್ನು ಕ್ಷಿಪ್ರಗತಿಯಲ್ಲಿ ತೆರವುಗೊಳಿಸುವಂತೆ ಭಾರತವನ್ನು ಅಮೆರಿಕಾ ಒತ್ತಾಯಿಸಿದೆ. 
ಕಾಶ್ಮೀರದಲ್ಲಿನ ನಿರ್ಬಂಧ
ಕಾಶ್ಮೀರದಲ್ಲಿನ ನಿರ್ಬಂಧ

ವಾಷಿಂಗ್ಟನ್: ಜಮ್ಮು- ಕಾಶ್ಮೀರದಲ್ಲಿ ವಿಧಿಸಲಾಗಿರುವ ನಿರ್ಬಂಧವನ್ನು ಕ್ಷಿಪ್ರಗತಿಯಲ್ಲಿ ತೆರವುಗೊಳಿಸುವಂತೆ ಭಾರತವನ್ನು ಅಮೆರಿಕಾ ಒತ್ತಾಯಿಸಿದೆ. 

ಭಾರತ ಹಾಗೂ ಪಾಕಿಸ್ತಾನ ನಡುವಣ ಬಿಕ್ಕಟ್ಟು ಪರಿಸ್ಥಿತಿಯನ್ನು ಪರಿಹರಿಸುವ ನಿಟ್ಟಿನಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಸಕ್ತಿ ವಹಿಸಿದ್ದಾರೆ. ಈ ಸಂಬಂಧ ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಜೊತೆಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟ್ರಂಪ್ ಮೋದಿ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದರೂ ಜಮ್ಮು- ಕಾಶ್ಮೀರದಲ್ಲಿನ ನಿರ್ಬಂಧದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕ್ಷಿಪ್ರ ರೀತಿಯಲ್ಲಿ ನಿರ್ಬಂಧ ತೆರವುಗೊಳಿಸಲು ಭಾರತ ಮುಂದಾಗಲಿದೆ ಎಂಬ ವಿಶ್ವಾಸವಿದೆ ಎಂದು ದಕ್ಷಿಣ ಏಷ್ಯಾ ಉನ್ನತಾಧಿಕಾರಿ ಅಲೈಸ್ ವೆಲ್ಸ್  ಸುದ್ದಿಗಾರರಿಗೆ ಹೇಳಿದ್ದಾರೆ.

ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿ ರದ್ದತಿ ನಂತರ ಆಗಸ್ಟ್  ತಿಂಗಳಿನಿಂದಲೂ ಕಣಿವೆ ರಾಜ್ಯದಲ್ಲಿ ನಿರ್ಬಂಧ ವಿಧಿಸಲಾಗಿದ್ದು, ರಾಜಕೀಯ ಮುಖಂಡರನ್ನು ಗೃಹ ಬಂಧನದಲ್ಲಿಡಲಾಗಿದೆ. ಆದಾಗ್ಯೂ ಕಳೆದ ಒಂದು ತಿಂಗಳಿನಿಂದಲೂ ಇಂಟರ್ ನೆಂಟ್, ಮೊಬೈಲ್ ಸೇವೆಗೆ ಅವಕಾಶ ಮಾಡಿಕೊಡಲಾಗಿದೆ. 

ಜಮ್ಮು- ಕಾಶ್ಮೀರದಲ್ಲಿ ನಿರ್ಬಂಧ ಜೊತೆಗೆ ರಾಜಕೀಯ ಮುಖಂಡರು, ಉದ್ಯಮಿದಾರರು ಮತ್ತಿತರರನ್ನು ಗೃಹ ಬಂಧನದಲ್ಲಿ ಇಟ್ಟಿರುವುದಕ್ಕೆ ಅಮೆರಿಕ ಕಳವಳಗೊಂಡಿದೆ.  ಈ ಮುಖಂಡರನ್ನು ಬಿಡುಗಡೆ ಮಾಡುವುದನ್ನು ಎದುರು ನೋಡುತ್ತಿದ್ದೇವೆ. ಉಭಯ ದೇಶಗಳ ಮಾತುಕತೆ ಮೂಲಕ ಪರಿಸ್ಥಿತಿಯನ್ನು ಸರಿಮಾಡಿಕೊಂಡರೆ ವಿಶ್ವಕ್ಕೆ ಅನುಕೂಲವಾಗಲಿದೆ. ಒಂದು ವೇಳೆ ಉಭಯ ದೇಶಗಳು ಕೇಳಿಕೊಂಡರೆ ಟ್ರಂಪ್ ಮಧ್ಯಸ್ಥಿಕೆ ವಹಿಸಲಿದ್ದಾರೆ ಎಂದು ವೆಲ್ಸ್  ತಿಳಿಸಿದ್ದಾರೆ.

ಸುಮಾರು 1 ಮಿಲಿಯನ್ ಉಯಿಘರ್ಸ್  ಮತ್ತು ಟರ್ಕಿ ಮಾತನಾಡುವ ಮುಸ್ಲಿಂರನ್ನು ಬಂಧಿಸಿರುವ ಚೀನಾದ ಬಗ್ಗೆ ಮಾತನಾಡದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ವೆಲ್ಸ್ ಕಿಡಿಕಾರಿದ್ದಾರೆ.  ಚೀನಾ ಪಾಕಿಸ್ತಾನದ ದೊಡ್ಡ ಆರ್ಥಿಕ ಹಾಗೂ ರಾಯಭಾರತ್ವದ ರಾಷ್ಟ್ರವಾಗಿದೆ. ಕೇವಲ ಖಾಸಗಿ ವಿಷಯಗಳನ್ನು ಮಾತನಾಡುವ ಪಾಕಿಸ್ತಾನ ಚೀನಾದ ಈ ನಡೆಯ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಟೀಕಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com