ವಿಶ್ವಸಂಸ್ಥೆ: ಕಾಶ್ಮೀರದಲ್ಲಿ ಜನ ದಂಗೆ ಎದ್ದಿದ್ದು, ಕರ್ಫ್ಯೂ ತೆಗೆದರೆ ರಕ್ತದೋಕುಳಿ ಎಂದ ಪಾಕ್ ಪ್ರಧಾನಿ ಇಮ್ರಾನ್‌ ಖಾನ್

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದ ದುರಾಡಳಿತದಿಂದಾಗಿ ಜನ ದಂಗೆ ಎದ್ದಿದ್ದು, ಕರ್ಫ್ಯೂ ತೆಗೆದರೆ ರಕ್ತದೋಕುಳಿಯಾಗುವ ಆಂತಕವಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಇಮ್ರಾನ್ ಖಾನ್
ವಿಶ್ವಸಂಸ್ಥೆಯಲ್ಲಿ ಇಮ್ರಾನ್ ಖಾನ್

ವಿಶ್ವಸಂಸ್ಥೆ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದ ದುರಾಡಳಿತದಿಂದಾಗಿ ಜನ ದಂಗೆ ಎದ್ದಿದ್ದು, ಕರ್ಫ್ಯೂ ತೆಗೆದರೆ ರಕ್ತದೋಕುಳಿಯಾಗುವ ಆಂತಕವಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಮಾತನಾಡಿದ ಅವರು ಇಮ್ರಾನ್ ಖಾನ್ ಕಾಶ್ಮೀರ ವಿಚಾರವಾಗಿ ಭಾರತದ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿದರು. ಕಾಶ್ಮೀರ ವಿಚಾರವಾಗಿ ಉಭಯ ದೇಶಗಳ ನಡುವಿನ ಶೀಥಲ ಸಮರ ದಿನೇ ದಿನೇ ತಾರಕಕ್ಕೇರುತ್ತಿದೆ. ಕಾಶ್ಮೀರದಲ್ಲಿ ಭಾರತ ಅಮಾನವೀಯ ಕರ್ಫೂ ಹೇರಿದೆ. ಕರ್ಫ್ಯೂ ತೆಗೆದರೆ ಕಾಶ್ಮೀರದಲ್ಲಿ ರಕ್ತದೋಕುಳಿ ಹರಿಯಲಿದೆ. ಅಣ್ವಸ್ತ್ರಗಳನ್ನು ಹೊಂದಿರುವ ಭಾರತ–ಪಾಕಿಸ್ತಾನ ನಡುವೆ ಯುದ್ಧ ನಡೆದರೆ ಅದರ ಪರಿಣಾಮ ಇತರ ದೇಶಗಳ ಮೇಲೂ ಆಗಲಿದೆ ಎಂದು ಎಚ್ಚರಿಕೆ ನೀಡಿದರು.

'ಎರಡು ದೇಶಗಳ ನಡುವೆ ಯುದ್ಧವಾದರೆ ಏನು ಬೇಕಿದ್ದರೂ ಆಗಬಹುದು. ನೆರೆಯ ದೇಶಕ್ಕಿಂತ ಏಳು ಪಟ್ಟು ಚಿಕ್ಕದಾಗಿರುವ ದೇಶಕ್ಕೆ ಶರಣಾಗತಿ ಅಥವಾ ಕೊನೆಯವರೆಗೆ ಹೋರಾಟದ ಆಯ್ಕೆಗಳು ಮಾತ್ರ ಇದ್ದರೆ ನೀವು ಏನು ಮಾಡುವಿರಿ? ಈ ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಂಡಿದ್ದೇನೆ. ನಾವು ಹೋರಾಡುತ್ತೇವೆ. ಅಣ್ವಸ್ತ್ರ ಇರುವ ದೇಶವೊಂದು ಕೊನೆಯವರೆಗೆ ಹೋರಾಡಿದರೆ ಅದರ ಪರಿಣಾಮ ಗಡಿಗಳನ್ನು ಮೀರಿ ಸಾಗುತ್ತದೆ ಎಂದು ಇಮ್ರಾನ್ ಖಾನ್ ಹೇಳಿದರು.

ಕಾಶ್ಮೀರದಲ್ಲಿ ಅಮಾನವೀಯ ಕರ್ಫ್ಯೂ
ಇದೇ ವೇಳೆ ಕಾಶ್ಮೀರದಲ್ಲಿ ಅಮಾನವೀಯ ಕರ್ಫ್ಯೂ ಇದೆ ಎಂದು ಹೇಳಿದ ಇಮ್ರಾನ್ ಖಾನ್, ಕೂಡಲೇ ಅದನ್ನು ತೆಗೆಯಬೇಕು. ಬಂಧನದಲ್ಲಿರುವವರನ್ನು ಬಿಡುಗಡೆ ಮಾಡಬೇಕು. ನಾನು ಕಾಶ್ಮೀರದಲ್ಲಿ ಇದ್ದಂತೆ ಕಲ್ಪಿಸಿಕೊಳ್ಳುತ್ತಿದ್ದೇನೆ. 55 ದಿನಗಳವರೆಗೆ ನನ್ನನ್ನು ಕೂಡಿಡಲಾಗಿದೆ. ಅತ್ಯಾಚಾರಗಳು ನಡೆಯುತ್ತಿದೆ. ಭಾರತದ ಸೇನೆಯ ಯೋಧರು ಮನೆಗಳಿಗೆ ನುಗ್ಗುತ್ತಿದ್ದಾರೆ. ಇಂತಹ ಅವಮಾನದಲ್ಲಿ ಬದುಕಲು ನಾನು ಬಯಸುತ್ತೇನೆಯೇ? ಅಂತಹ ಸಂದರ್ಭದಲ್ಲಿ ನಾನೂ ಬಂದೂಕು ಕೈಗೆತ್ತಿಕೊಳ್ಳುತ್ತೇನೆ. ಆ ಮೂಲಕ ಜನರು ಉಗ್ರವಾದದತ್ತ ಸಾಗುವಂತೆ ನೀವೇ ಬಲವಂತ ಮಾಡುತ್ತಿದ್ದೀರಿ ಎಂದು ಹೇಳಿದರು. 

ಆರ್ ಎಸ್ಎಸ್ ಮೂಲಕ ಮುಸ್ಲಿಂ ಸಮುದಾಯದ ನಿರ್ಮೂಲನೆಗೆ ಯತ್ನ
ಇನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್ ಎಸ್ಎಸ್ ಸಂಘಟನೆಯನ್ನು ನೇರವಾಗಿಯೇ ಟೀಕಿಸಿದ ಇಮ್ರಾನ್ ಖಾನ್, ಮೋದಿ ಆರ್‌ಎಸ್‌ಎಸ್‌ನ ಆಜೀವ ಸದಸ್ಯ. ಈ ಸಂಘಟನೆಯು ಮುಸ್ಲಿಂ ಸಮುದಾಯವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದೆ ಎಂದರು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com