ವಿಶ್ವಸಂಸ್ಥೆ: ಕಾಶ್ಮೀರ ಮುಸ್ಲಿಮರ ಬಗ್ಗೆ ಇರುವ ಕಾಳಜಿ, ಚೀನಾ ಮುಸ್ಲಿಮರ ಬಗ್ಗೆ ಏಕಿಲ್ಲ..?: ಪಾಕ್ ಗೆ ಅಮೆರಿಕ ಛಾಟಿ

ಕಾಶ್ಮೀರ ವಿಚಾರವಾಗಿ ಭಾರತದ ವಿರುದ್ಧ ಕಾಲು ಕೆರೆಯುತ್ತಿರುವ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯಲ್ಲಿ ಅಮೆರಿಕ ಛಾಟಿ ಬೀಸಿದ್ದು, ಕಾಶ್ಮೀರ ಮುಸ್ಲಿಮರ ಬಗ್ಗೆ ಇರುವ ಕಾಳಜಿ, ಚೀನಾ ಮುಸ್ಲಿಮರ ಬಗ್ಗೆ ಏಕಿಲ್ಲ ಎಂದು ಪ್ರಶ್ಮೆ ಮಾಡಿದೆ.
ವಿಶ್ವಸಂಸ್ಥೆಯಲ್ಲಿ ಆಲಿಸ್ ವೆಲ್ಸ್
ವಿಶ್ವಸಂಸ್ಥೆಯಲ್ಲಿ ಆಲಿಸ್ ವೆಲ್ಸ್

ವಿಶ್ವಸಂಸ್ಥೆ: ಕಾಶ್ಮೀರ ವಿಚಾರವಾಗಿ ಭಾರತದ ವಿರುದ್ಧ ಕಾಲು ಕೆರೆಯುತ್ತಿರುವ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯಲ್ಲಿ ಅಮೆರಿಕ ಛಾಟಿ ಬೀಸಿದ್ದು, ಕಾಶ್ಮೀರ ಮುಸ್ಲಿಮರ ಬಗ್ಗೆ ಇರುವ ಕಾಳಜಿ, ಚೀನಾ ಮುಸ್ಲಿಮರ ಬಗ್ಗೆ ಏಕಿಲ್ಲ ಎಂದು ಪ್ರಶ್ಮೆ ಮಾಡಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 74 ನೇ ಅಧಿವೇಶನದಲ್ಲಿ ವಿಶೇಷ ಸಮಾವೇಶದಲ್ಲಿ ಮಾತನಾಡಿದ ಅಮೆರಿಕದ ದಕ್ಷಿಣ ಮತ್ತು ಮಧ್ಯ ಏಷ್ಯಾ ವಿಭಾಗದ ಕಾರ್ಯಕಾರಿ ಸಹಾಯಕ ಕಾರ್ಯದರ್ಶಿ ಆಲಿಸ್ ವೆಲ್ಸ್ ಅವರು, 'ಪಾಕಿಸ್ತಾನ ಕಾಶ್ಮೀರಿ ಮುಸ್ಲಿಮರ ಮಾನವ ಹಕ್ಕುಗಳ ಬಗ್ಗೆ ಮಾತ್ರ ಏಕೆ ಕಾಳಜಿ ವಹಿಸುತ್ತಿದೆ. ಇದೇ ಕಾಳಜಿ ಚೀನಾ ದೇಶದ ಮುಸ್ಲಿಮರ ಬಗ್ಗೆ ಏಕಿಲ್ಲ. ಚೀನಾದಲ್ಲಿ ವಾಸಿಸುತ್ತಿರುವ ಈ ಸಮುದಾಯದವರ "ಭಯಾನಕ ಪರಿಸ್ಥಿತಿಗಳನ್ನು" ಏಕೆ ಬಹಿರಂಗಪಡಿಸುತ್ತಿಲ್ಲ ಎಂದು ಅಮೆರಿಕ ಪಾಕಿಸ್ತಾನವನ್ನು ಪ್ರಶ್ನಿಸಿದೆ.

ಅಲ್ಲದೆ ಪಾಕಿಸ್ತಾನದ ಪ್ರಧಾನಿ ನಿರ್ಧಿಷ್ಟವಾಗಿ ಕೆಲ ವಿಚಾರಗಳನ್ನು ಮಾತ್ರ ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದು, ಚೀನಾ ತನ್ನ ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ಒಂದು ಮಿಲಿಯನ್ ಉಯಿಗರ್ ಮತ್ತು ತುರ್ಕಿಕ್ ಮಾತನಾಡುವ ಮುಸ್ಲಿಮರನ್ನು ಬಂಧಿಸಿದೆ. ಆದರೆ ಚೀನಾದ ಖಾಯಂ ಸ್ನೇಹಿತ ಪಾಕಿಸ್ತಾನ ಈ ಬಗ್ಗೆ ಚಕಾರವೆತ್ತುತ್ತಿಲ್ಲ ಎಂದು ಅಮೆರಿಕ ಆಕ್ಷೇಪ ವ್ಯಕ್ತಪಡಿಸಿದೆ.

ಇನ್ನು ಈ ಹಿಂದೆ ಪಾಕಿಸ್ತಾನ ಮೂಲದ ಕುಖ್ಯಾತ ಉಗ್ರರಾದ ಜೈಶ್-ಇ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಮತ್ತು ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಅವರ ವಿರುದ್ಧ ಜಾಗತಿಕ ನಿರ್ಬಂಧ ಹೇರುವ ಪ್ರಯತ್ನಗಳಿಗೆ ಚೀನಾ ಮತ್ತು ಪಾಕಿಸ್ತಾನ ಅಡ್ಡಗಾಲು  ಹಾಕಿದ್ದ ವಿಚಾರವನ್ನೂ ಕೂಡ ಆಲಿಸ್ ವೆಲ್ಸ್ ಪ್ರಸ್ತಾಪಿಸಿ ಚೀನಾ ಮತ್ತು ಪಾಕಿಸ್ತಾನದ ವಿರುದ್ಧ ಕಿಡಿಕಾರಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com