ಚೀನಾದಲ್ಲಿ ಕೊರೋನಾ ಸೆಕೆಂಡ್ ಇನ್ನಿಂಗ್ಸ್?: ಲಕ್ಷಣವೇ ಗೋಚರಿಸುತ್ತಿಲ್ಲ, ಆದರೂ 1541 ಮಂದಿಗೆ ಸೋಂಕು!

ಚೀನಾದಲ್ಲಿ ರೋಗ ಲಕ್ಷಣಗಳೇ ಕಾಣಿಸಿಕೊಳ್ಳದ, ಆದರೆ ಕೊರೋನಾ ಸೋಂಕು ಇರುವ 1541 ಪ್ರಕರಣಗಳು ವರದಿಯಾಗಿವೆ. ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಈ ಬಗ್ಗೆ ಮಾಹಿತಿ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ದಿನದಿಂದ ದಿನಕ್ಕೆ ಕೊರೋನಾ ವೈರಸ್ ನ ಹೊಸ ವಿಲಕ್ಷಣ ಸ್ವರೂಪ ತೆರೆದುಕೊಳ್ಳುತ್ತಿದೆ. ಕೊರೋನಾದಿಂದ ಗುಣಮುಖರಾದವರಲ್ಲೂ ಜೀವಂತ ಕೊರೋನಾ ವೈರಾಣುಗಳನ್ನು ಚೀನಾ ವೈದ್ಯರು ಪತ್ತೆ ಮಾಡಿದ್ದಾರೆ ಎಂಬ ವರದಿ ಪ್ರಕಟಗೊಂಡ ಬೆನ್ನಲ್ಲೇ ರೋಗ ಲಕ್ಷಣಗಳೇ ಕಾಣಿಸಿಕೊಳ್ಳದ, ಆದರೆ ಕೊರೋನಾ ಸೋಂಕು ಇರುವ 1541 ಪ್ರಕರಣಗಳು ವರದಿಯಾಗಿವೆ.

ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಈ ಬಗ್ಗೆ ಮಾಹಿತಿ ನೀಡಿದ್ದು, ರೋಗಲಕ್ಷಣಗಳು ಹೊರಗೆ ಕಾಣಿಸಿಕೊಳ್ಳದ ಆದರೆ ಜೀವಂತ ವೈರಾಣುಗಳ ಸೋಂಕು ತಗುಲಿರುವವರ ಅಂಕಿ-ಅಂಶಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ. ಚೀನಾದ ಈ ಹೊಸ ಮಾಹಿತಿಯನ್ನು ಕೊರೋನಾ ವೈರಸ್ ಹರಡುವಿಕೆಯಯನ್ನು ’ಸೆಕೆಂಡ್ ವೇವ್’ (second wave) ಎಂದೇ ವಿಶ್ಲೇಷಿಸಲಾಗುತ್ತಿದೆ. 

 ರೋಗಲಕ್ಷಣಗಳಿಲ್ಲದ, ವೈರಾಣುಗಳಿರುವ 1,541 ಜನರನ್ನು ಚೀನಾದ ಆಸ್ಪತ್ರೆಗಳಲ್ಲಿ ನಿಗಾದಲ್ಲಿರಿಸಲಾಗಿದೆ. ಈ ನಡುವೆ ಹೊರಗಿನಿಂದ ಬಂದಿರುವ 205 ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಒಂದು ದೇಶದಲ್ಲೇ ವರದಿಯಾಗಿದೆ ಎಂದು ಎನ್ ಹೆಚ್ ಸಿ ಹೇಳಿದೆ. 

ಚೀನಾದಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡ ನಂತರವೂ ಹೊರಗಿನಿಂದ ಬಂದವರಿಂದ ಸೋಂಕು ಹರಡಿರುವ ಪ್ರಕರಣಗಳು 806 ಕ್ಕೆ ಏರಿಕೆಯಾಗಿದ್ದು, 7 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 3,312 ಕ್ಕೆ ಏರಿಕೆಯಾಗಿದ್ದರೆ, ದೃಢಪಟ್ಟಿರುವ ಪ್ರಕರಣಗಳ ಸಂಖ್ಯೆ 81,554 ಕ್ಕೆ ಏರಿಕೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com