ಕೊರೋನಾ ವೈರಸ್ ನ 8 ಪ್ರಭೇದಗಳನ್ನು ಗುರುತಿಸಿದ ವಿಜ್ಞಾನಿಗಳು! 

ಜಗತ್ತಿನಾದ್ಯಂತ ಸಂಶೋಧಕರು ಕೊರೋನಾ ವೈರಸ್ ನ ವಿಕಸನವನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಿದ್ದು, ಇತ್ತೀಚಿನ ವರದಿಯ ಪ್ರಕಾರ ವಿಜ್ಞಾನಿಗಳು ಜಾಗತಿಕವಾಗಿ ಹರಡುತ್ತಿರುವ ಕೊರೋನಾ ವೈರಸ್ ನ ಕನಿಷ್ಟ 8 ಪ್ರಭೇದಗಳನ್ನು ಗುರುತಿಸಿದ್ದಾರೆ. 
ಕೊರೋನಾ ಸೋಂಕು
ಕೊರೋನಾ ಸೋಂಕು

ನ್ಯೂಯಾರ್ಕ್: ಜಗತ್ತಿನಾದ್ಯಂತ ಸಂಶೋಧಕರು ಕೊರೋನಾ ವೈರಸ್ ನ ವಿಕಸನವನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಿದ್ದು, ಇತ್ತೀಚಿನ ವರದಿಯ ಪ್ರಕಾರ ವಿಜ್ಞಾನಿಗಳು ಜಾಗತಿಕವಾಗಿ ಹರಡುತ್ತಿರುವ ಕೊರೋನಾ ವೈರಸ್ ನ ಕನಿಷ್ಟ 8 ಪ್ರಭೇದಗಳನ್ನು ಗುರುತಿಸಿದ್ದಾರೆ. 
 
ಓಪನ್ ಸೋರ್ಸ್ ಯೋಜನೆಯಾಗಿರುವ Nextstrain.org ಗೆ ವಿಶ್ವಾದ್ಯಂತ ಇರುವ ಪ್ರಯೋಗಾಲಯಗಳಿಂದ ಸಲ್ಲಿಕೆಯಾಗಿರುವ 2,000 ಕ್ಕೂ ಹೆಚ್ಚು ಜೆನೆಟಿಕ್ ಸೀಕ್ವೆನ್ಸ್ ಗಳ ಪ್ರಕಾರ ವೈರಾಣು ರೂಪಾಂತರ ಹೊಂದುತ್ತಿರುವುದು ತಿಳಿದುಬಂದಿದೆ.

ನ್ಯಾಷನಲ್ ಜಿಯಾಗ್ರಫಿಕ್ ಚಾನಲ್ ನ ವರದಿಯ ಪ್ರಕಾರ, ಅಂಟಾರ್ಟಿಕ ಹೊರತುಪಡಿಸಿ ಎಲ್ಲಾ ಖಂಡಗಳಿಂದಲೂ ಸ್ಯಾಂಪಲ್ ಗಳನ್ನು ತರಿಸಿಕೊಳ್ಳಲಾಗಿದ್ದು, ರೂಪಾಂತರ ಹೊಂದುವುದಕ್ಕೆ 15 ದಿನಗಳ ಸಮಯ ತೆಗೆದುಕೊಳ್ಳುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. 

ರೂಪಾಂತರ ಹೊಂದುತ್ತದೆ ಎಂಬ ಮಾತ್ರಕ್ಕೆ ವೈರಾಣು ಅಪಾಯಕಾರಿಯಾಗುತ್ತಿದೆ ಎಂದಲ್ಲ, ಈ ರೂಪಾಂತರಗಳು ವಿಜ್ಞಾನಿಗಳಿಗೆ ಆ ವೈರಾಣುವಿನ ಮೂಲ ಹಾಗೂ ಚರ್ಯೆಯನ್ನು ತಿಳಿದುಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com