ವಿಶ್ವದೆಲ್ಲೆಡೆ ಕೊರೋನಾ ರುದ್ರತಾಂಡವ: ವೈರಸ್'ಗೆ 45,000 ಮಂದಿ ಬಲಿ, ಸೋಂಕಿತರ ಸಂಖ್ಯೆ 9ಲಕ್ಷಕ್ಕೆ ಏರಿಕೆ

ಚೀನಾದಲ್ಲಿ ಹುಟ್ಟಿ ವಿಶ್ವದೆಲ್ಲೆಡೆ ಮರಣ ಮೃದಂಗ ಸಾರುತ್ತಿರುವ ಕೊರೋನಾ ವೈರಸ್ 45,000ಕ್ಕೂ ಹೆಚ್ಚು ಮಂದಿಯನ್ನು ಆಹುತಿ ಪಡೆದುಕೊಂಡಿದ್ದು, ಸುಮಾರು 9 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪ್ಯಾರಿಸ್: ಚೀನಾದಲ್ಲಿ ಹುಟ್ಟಿ ವಿಶ್ವದೆಲ್ಲೆಡೆ ಮರಣ ಮೃದಂಗ ಸಾರುತ್ತಿರುವ ಕೊರೋನಾ ವೈರಸ್ 45,000ಕ್ಕೂ ಹೆಚ್ಚು ಮಂದಿಯನ್ನು ಆಹುತಿ ಪಡೆದುಕೊಂಡಿದ್ದು, ಸುಮಾರು 9 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 

ವಿಶ್ವದ 200 ರಾಷ್ಟ್ರಗಳಲ್ಲಿ ಈ ಮಹಾಮಾರಿ ಕ್ರೌರ್ಯ ಮೆರೆಯುತ್ತಿದ್ದು, 45 ಸಾವಿರ ಮಂದಿ ಬಲಿಯಾಗಿದ್ದಾರೆ. ಅಲ್ಲದೆ, ಸೋಂಕಿಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ 1.85 ಲಕ್ಷ ಮಂದಿ ಗುಣಮುಖರಾಗಿದ್ದಾರೆಂದು ವರದಿಗಳು ತಿಳಿಸಿವೆ. 

ಫೆಬ್ರವರಿ ಅಂತ್ಯದಲ್ಲಿ ಮೊದಲ ಬಲಿಯಾದ ಇಟಲಿಯಲ್ಲಿ ಈವರೆಗೆ ಒಟ್ಟು 12,428 ಮಂದಿ ಅಸುನೀಗಿದ್ದಾರೆ. 105,792 ಮಂದಿಗೆ ವ್ಯಾಧಿ ತಟ್ಟಿದ್ದು 15,729 ಮಂದಿ ಗುಣಮುಖರಾಗಿದ್ದಾರೆ. ಸ್ಪೇನ್ ನಲ್ಲಿ 102,136 ಮಂದಿಗೆ ಸೋಂಕು ಆವರಿಸಿದ್ದು, 9053 ಮಂದಿ ಕೊನೆಯುಸಿರೆಳೆದಿದ್ದಾರೆ. 

ವೈರಸ್ ಉಗಮ ಸ್ಥಾನ ಚೀನ ಈಗಷ್ಟ ಚೇತರಿಸಿಕೊಳ್ಳುತ್ತಿದ್ದು, ಸೋಂಕಿತರ ಹಾಗೂ ಸಾವಿನ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಅಲ್ಲಿ 3312 ಸಾವು ಸಂಬವಿಸಿದ್ದು, 81,554 ಮಂದಿಗೆ ಸೋಂಕು ತಟ್ಟಿದೆ. 76,238 ಮಂದಿ ಗುಣಮುಖರಾಗಿದ್ದಾರೆ. ಇದೇ ವೇಳೆ ವಿಶ್ವದಲ್ಲಿಯೇ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಹೊಂದಿರುವ ಅತೀಶ್ರೀಮಂತ ರಾಷ್ಟ್ರ ಅಮೆರಿಕಾದಲ್ಲಿ ಸೋಂಕಿತರ ಸಂಖ್ಯೆ ಎರಡು ಲಕ್ಷದತ್ತ ಹೊರಳಿದ್ದು, ಈ ವರೆಗೆ 189633 ಮಂದಿ ಸೋಂಕಿತರಿದ್ದಾರೆ. ಸಾವು 4081ಕ್ಕೆ ಏರಿಕೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com