ಕೊರೋನಾ ಸೋಂಕಿನಿಂದ ಲೆಬನಾನ್‌ನ ಫಿಲಿಪ್ಪಿನ್ಸ್ ರಾಯಭಾರಿ ಸಾವು

ಲೆಬನಾನ್ ದೇಶದಲ್ಲಿನ ಫಿಲಿಪ್ಪೀನ್ಸ್ ರಾಯಭಾರಿ ಬರ್ನಾರ್ಡಿಟಾ ಕ್ಯಾಟಲ್ಲಾ (೬೨) ಕೊರೊನಾ ವೈರಸ್ ರೋಗದಿಂದ ಮೃತಪಟ್ಟಿದ್ದಾರೆ ಎಂದು ಆ ದೇಶದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ತಿಳಿಸಿದೆ.
ಬರ್ನಾರ್ಡಿಟಾ ಕ್ಯಾಟಲ್ಲಾ
ಬರ್ನಾರ್ಡಿಟಾ ಕ್ಯಾಟಲ್ಲಾ

ಬೈರೂತ್:  ಲೆಬನಾನ್ ದೇಶದಲ್ಲಿನ ಫಿಲಿಪ್ಪೀನ್ಸ್ ರಾಯಭಾರಿ ಬರ್ನಾರ್ಡಿಟಾ ಕ್ಯಾಟಲ್ಲಾ (೬೨) ಕೊರೊನಾ ವೈರಸ್ ರೋಗದಿಂದ ಮೃತಪಟ್ಟಿದ್ದಾರೆ ಎಂದು ಆ ದೇಶದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ತಿಳಿಸಿದೆ.

ಫಿಲಿಪ್ಪೀನ್ ರಾಯಭಾರಿ ಬರ್ನಾರ್ಡಿಟಾ ಕ್ಯಾಟಲ್ಲಾ ಕೊರೊನಾ ವೈರಸ್ ಸೋಂಕಿನ ಲಕ್ಷಣಗಳಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಿಸದೆ ಗುರುವಾರ ಮೃತಪಟ್ಟಿದ್ದಾರೆ ಎಂದು ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಲೆಬನಾನ್ ಹಾಗೂ  ಫಿಲಿಪ್ಪೀನ್ಸ್ ದೇಶಗಳ ನಡುವಣ ದ್ವಿಪಕ್ಷೀಯ ಬಾಂಧವ್ಯ ಬಲಪಡಿಸಲು, ಲೆಬನಾನ್, ಮಲೇಷಿಯಾ ಹಾಗೂ ಇಂಡೋನೇಷ್ಯಾದಲ್ಲಿರುವ ಫಿಲಿಪ್ಪೀನ್ಸ್ ಜನರ ಹಿತಾಸಕ್ತಿ ರಕ್ಷಿಸುವಂತಹ ರಾಜತಾಂತ್ರಿಕ ಕ್ರಮಗಳನ್ನು ಬರ್ನಾರ್ಡಿಟಾ ಕ್ಯಾಟಲ್ಲಾ ಕೈಗೊಂಡಿದ್ದರು ಎಂದು ಸಚಿವಾಲಯ ಪ್ರಶಂಸೆ ವ್ಯಕ್ತಪಡಿಸಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com