ಅಮೆರಿಕಾದಲ್ಲಿ ಕೊರೋನಾ ರೌದ್ರನರ್ತನ: ಒಂದೇ ದಿನ 884 ಮಂದಿ ಬಲಿಪಡೆದುಕೊಂಡ ವೈರಸ್, ಸಾವಿನ ಸಂಖ್ಯೆ 4385ಕ್ಕೆ ಏರಿಕೆ

ದಿನೇ ದಿನೇ ಭಾರೀ ಪ್ರಮಾಣದಲ್ಲಿ ವ್ಯಾಪಿಸುತ್ತಿರುವ ಕೊರೋನಾ ಸೋಂಕು, ಅಮೆರಿಕಾದಲ್ಲಿ ರೌದ್ರ ನರ್ತನವನ್ನು ಮುಂದುವರೆಸಿದೆ. ಅಮೆರಿಕಾದ 2 ಲಕ್ಷ ಮಂದಿಯನ್ನ ವ್ಯಾಪಿಸಿರುವ ವೈರಸ್, ಒಂದೇ ದಿನ 884 ಮಂದಿಯನ್ನು ಬಲಿ ಪಡೆದುಕೊಂಡಿದೆ ಎಂದು ವರದಿಗಳು ತಿಳಿಸಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನ್ಯೂಯಾರ್ಕ್: ದಿನೇ ದಿನೇ ಭಾರೀ ಪ್ರಮಾಣದಲ್ಲಿ ವ್ಯಾಪಿಸುತ್ತಿರುವ ಕೊರೋನಾ ಸೋಂಕು, ಅಮೆರಿಕಾದಲ್ಲಿ ರೌದ್ರ ನರ್ತನವನ್ನು ಮುಂದುವರೆಸಿದೆ. ಅಮೆರಿಕಾದ 2 ಲಕ್ಷ ಮಂದಿಯನ್ನ ವ್ಯಾಪಿಸಿರುವ ವೈರಸ್, ಒಂದೇ ದಿನ 884 ಮಂದಿಯನ್ನು ಬಲಿ ಪಡೆದುಕೊಂಡಿದೆ ಎಂದು ವರದಿಗಳು ತಿಳಿಸಿವೆ. 

ಇದರಂತೆ ಅಮೆರಿಕಾದಲ್ಲಿ ವೈರಸ್'ಗೆ ಬಲಿಯಾದವ ಸಂಖ್ಯೆ 4,385ಕ್ಕೆ ಏರಿಕೆಯಾಗಿದೆ. 2001 ಸೆಪ್ಟೆಂಬರ್ ನಲ್ಲಿ ಅಲ್ ಖೈದಾ ಉಗ್ರರು ವಿಶ್ವ ವಾಣಿಜ್ಯ ಕಟ್ಟಡದ ಮೇಲೆ ದಾಳಇ ನಡೆಸಿದ್ದರು. ಆ ದಾಳಿಯಲ್ಲೂ ಕೂಡ ಇಷ್ಟು ಜನರು ಸಾವನ್ನಪ್ಪಿರಲಿಲ್ಲ. 

ಆದರೆ, ಕೇವಲ ಒಂದೇ ದಿನದಲ್ಲಿ ವೈರಸ್'ಗೆ 885 ಮಂದಿ  ಬಲಿಯಾಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಪೈಕಿ 5000 ಜನರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದ್ದು, 870 ಜನರು ಈಗಾಗಲೇ ಗುಣಮುಖರಾಗಿದ್ದಾರೆಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com