ಕೊರೋನಾ: 24 ಗಂಟೆಗಳಲ್ಲಿ ಅಮೆರಿಕಾದಲ್ಲಿ 1,480 ಮಂದಿ ಬಲಿ, ಜಾಗತಿಕ ದಾಖಲೆ

ಕೊರೋನಾ ತಾಂಡವಕ್ಕೆ ಅಕ್ಷರಶಃ ನಲುಗಿ ಹೋಗಿರುವ ಅಮೆರಿಕಾದಲ್ಲಿ ಕೇವಲ 24 ಗಂಟೆಗಳಲ್ಲಿ 30 ಸಾವಿರ ಮಂದಿ ಸೋಂಕಿಗೆ ತುತ್ತಾಗಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾಷಿಂಗ್ಟನ್:  ಕೊರೋನಾ ತಾಂಡವಕ್ಕೆ ಅಕ್ಷರಶಃ ನಲುಗಿ ಹೋಗಿರುವ ಅಮೆರಿಕಾದಲ್ಲಿ ಕೇವಲ 24 ಗಂಟೆಗಳಲ್ಲಿ 30 ಸಾವಿರ ಮಂದಿ ಸೋಂಕಿಗೆ ತುತ್ತಾಗಿದ್ದಾರೆ. 

ಅಲ್ಲದೆ, ಈ ಸೋಂಕಿಗೆ ಒಂದೇ ದಿನ 1,480 ಮಂದಿ ಬಲಿಯಾಗಿದ್ದು, ಇದೂವರೆಗೆ ಒಂದೇ ದಿನದಲ್ಲಿ ದಾಖಲಾದ ಗರಿಷ್ಠ ಸಂಖ್ಯೆಯ ಸೋಂಕಿತರ ಸಂಖ್ಯೆಯಾಗಿದೆ. 

ಇನ್ನು ಶುಕ್ರವಾರ ಕೂಡ 1500ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿದ್ದು, 500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 2.65 ಲಕ್ಷಕ್ಕೆ ತಲುಪಿದೆ. ಸಾವಿನ ಸಂಖ್ಯೆ 7,157 ದಾಟಿದೆ. 

ಕೊವಿಡ್-19: ಅಮೆರಿಕದಲ್ಲಿ ದಾಖಲೆಯ 14 ಲಕ್ಷ ಪ್ರಕರಣಗಳ ಪರೀಕ್ಷೆ - ಪೆನ್ಸ್
ಕೊರೋನವೈರಸ್ ರೋಗವನ್ನು ಪತ್ತೆಮಾಡಲು ದೇಶದಲ್ಲಿ ಈಗಾಗಲೇ 1.4 ದಶಲಕ್ಷ ಪರೀಕ್ಷೆಗಳನ್ನು ಮಾಡಲಾಗಿದೆ ಎಂದು ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಹೇಳಿದ್ದಾರೆ.

‘ಸೋಂಕು ಪತ್ತೆ ಮಾಡುವುದಕ್ಕೆ ಸರ್ಕಾರ ವಿಶೇಷ ಒತ್ತು ನೀಡುತ್ತಿದ್ದು, ಈ ನಿಟ್ಟಿನಲ್ಲಿ ರಕ್ತ ಮತ್ತು ಗಂಟಲು ದ್ರವದ ಹೆಚ್ಚು ಹೆಚ್ಚು ಪರೀಕ್ಷೇಗಳನ್ನು ನಡೆಸಲಾಗುತ್ತಿದೆ. ಸದ್ಯ, ದೇಶಾದ್ಯಂತ 14 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗಿದೆ.’ ಎಂದು ಪೆನ್ಸ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com