ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೊಲಂಬಿಯಾದಲ್ಲಿ ಕಲ್ಲಿದ್ದಲು ಗಣಿ ಸ್ಫೋಟ: ಕನಿಷ್ಠ 11 ಸಾವು, ನಾಲ್ವರಿಗೆ ಗಾಯ

ಕೊಲಂಬಿಯಾದ ಕುಡಿನಾಮರ್ಕಾದಲ್ಲಿ ಕಲ್ಲಿದ್ದಲು ಗಣಿಯಲ್ಲಿ ಮೀಥೇನ್ ಅನಿಲ ಸ್ಫೋಟಿಸಿ ಸಮೀಪದ ಮೂರು ಗಣಿಗಳಿಗೆ ಹಾನಿಯಾಗಿದೆ. ಒಂದು ಗಣಿ ಕುಸಿದಿದ್ದು ಹನ್ನೊಂದು ಜನರು ಸಾವನ್ನಪ್ಪಿದ್ದು ನಾಲ್ವರಿಗೆ ಗಾಯಗಳಾಗಿವೆ.

ಮೆಕ್ಸಿಕೋ: ಕೊಲಂಬಿಯಾದ ಕುಡಿನಾಮರ್ಕಾದಲ್ಲಿ ಕಲ್ಲಿದ್ದಲು ಗಣಿಯಲ್ಲಿ ಮೀಥೇನ್ ಅನಿಲ ಸ್ಫೋಟಿಸಿ ಸಮೀಪದ ಮೂರು ಗಣಿಗಳಿಗೆ ಹಾನಿಯಾಗಿದೆ. ಒಂದು ಗಣಿ ಕುಸಿದಿದ್ದು ಹನ್ನೊಂದು ಜನರು ಸಾವನ್ನಪ್ಪಿದ್ದು ನಾಲ್ವರಿಗೆ ಗಾಯಗಳಾಗಿವೆ.

ಕೊಲಂಬಿಯಾದ ಬಗೋಟಾ ಸಮೀಪದ ಕುಕುನುಬಾ ಗಣಿ ಪ್ರದೇಶದಲ್ಲಿ ಈ ದುರಂತ ಸಂಭವಿಸಿದ್ದು, ಮೃತ ದೇಹಗಳನ್ನು ತಾಂತ್ರಿಕ ತನಿಖಾ ತಂಡದ ಸಿಬ್ಬಂದಿ ಹೊರತೆಗೆದಿದ್ದಾರೆ. ಮೀಥೇನ್ ಅನಿಲ ಮತ್ತು ಕಲ್ಲಿದ್ದಲು ಧೂಳಿನಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ  ವರದಿಯಿಂದ ತಿಳಿದುಬಂದಿದೆ. 

ಕೊಲಂಬಿಯಾದಲ್ಲೂ ಕೊರೋನಾ ವೈರಸ್ ಹಾವಳಿ ಹೆಚ್ಚಾಗಿದ್ದು, ಇಡೀ ಕೊಲಂಬಿಯಾವನ್ನು ಲಾಕ್ ಡೌನ್ ಮಾಡಲಾಗಿದೆ. ಆದರೆ ಈ ಲಾಕ್ ಡೌನ್ ನಿಂದ ದೇಶದ ಪ್ರಮುಖ ಕ್ಷೇತ್ರಗಳಾದ ಗಣಿಗಾರಿಕೆಯಂತಹ ಕ್ಷೇತ್ರಗಳನ್ನು ಹೊರತುಪಡಿಸಲಾಗಿದೆ. ಹೀಗಾಗಿ ಇಲ್ಲಿ ಗಣಿ ಕಾರ್ಯ ಮುಂದುವರೆದಿತ್ತು.

Related Stories

No stories found.

Advertisement

X
Kannada Prabha
www.kannadaprabha.com