ಕೊರೋನಾ ವಿರುದ್ಧ ಗೆಲುವು ಸಾಧಿಸುತ್ತಿರುವ ಚೀನಾ: ಜನವರಿ ಬಳಿಕ ವೈರಸ್'ಗೆ ಒಂದೂ ಸಾವಿಲ್ಲ

ಇಡೀ ಜಗತ್ತಿಗೆ ಕೊರೋನಾ ಹಬ್ಬಿಸಿದ ಆರೋಪ ಹೊತ್ತಿರುವ ಮತ್ತು ತನ್ನ ದೇಶದಲ್ಲಿ ಅದೇ ಸೋಂಕಿನ ವಿರುದ್ಧ ಕಂಡು ಕೇಳರಿಯದ ರೀತಿ  ಹೋರಾಟ ನಡೆಸುತ್ತಿರುವ ಚೀನಾ ಸೋಮವಾರ ದೊಡ್ಡ ಯಶಸ್ಸುಗಳಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀಜಿಂಗ್: ಇಡೀ ಜಗತ್ತಿಗೆ ಕೊರೋನಾ ಹಬ್ಬಿಸಿದ ಆರೋಪ ಹೊತ್ತಿರುವ ಮತ್ತು ತನ್ನ ದೇಶದಲ್ಲಿ ಅದೇ ಸೋಂಕಿನ ವಿರುದ್ಧ ಕಂಡು ಕೇಳರಿಯದ ರೀತಿ  ಹೋರಾಟ ನಡೆಸುತ್ತಿರುವ ಚೀನಾ ಸೋಮವಾರ ದೊಡ್ಡ ಯಶಸ್ಸುಗಳಿಸಿದೆ. 

ಸೊಮವಾರ ದೇಶದ ಯಾವುದೇ ಭಾಗದಿಂದಲೂ ಕೊರೋನಾ ಸೋಂಕಿಗೆ ಯಾವುದೇ ವ್ಯಕ್ತಿ ಬಲಿಯಾದ ಮಾಹಿತಿ ಬಂದಿಲ್ಲ ಎಂದು ಚೀನಾ ಸರ್ಕಾರ ಘೋಷಣೆ ಮಾಡಿದೆ. 

ಕೊರೋನಾಗೆ ಬಲಿಯಾದವರ ಮಾಹಿತಿಯನ್ನ ನಿತ್ಯ ಪ್ರಕಟಿಸುತ್ತಿದ್ದ ಚೀನಾ, ಇದೇ ಮೊದಲ ಬಾರಿಗೆ ಏ.6 ರಂದು ದೇಶದಲ್ಲಿ ಯಾವುದೇ ಸಾವು ವರದಿಯಾಗಿಲ್ಲ ಎಂದು ಘೋಷಿಸಿದೆ. ಇದು ಕೊರೋನಾ ನಿಗ್ರಹದಲ್ಲಿ ಚೀನಾ ಕೈಗೊಂಡ ನಿಯಂತ್ರಣ ಕ್ರಮಗಳಿಗೆ ಸಿಕ್ಕಿದ ಜಯದ ಮೊದಲ ಸುಳಿವು ಎನ್ನಲಾಗಿದೆ. 

ಆ ದೇಶದಲ್ಲಿ ಈ ವರೆಗೆ 81740 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು 3331 ಜನ ಸಾವನ್ನಪ್ಪಿದ್ದಾರೆ. 1242 ಜನ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 77167 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಮಂಗಳವಾರ ಬಿಡುಗಡೆ ಮಾಡಿದ ತನ್ನ ವರದಿಯಲ್ಲಿ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com