ಕೊರೋನಾವೈರಸ್: ಅಮೆರಿಕಾದಲ್ಲಿ ಒಂದೇ ದಿನ 2,000 ಮಂದಿ ಬಲಿ, ವಿಶ್ವದೆಲ್ಲೆಡೆ 82 ಸಾವಿರಕ್ಕೇರಿದ ಸಾವಿನ ಸಂಖ್ಯೆ

ವಿಶ್ವದೆಲ್ಲೆಡೆ ಕೊರೋನಾ ವೈರಸ್ ರುದ್ರತಾಂಡವ ಮುಂದುವರೆದಿದ್ದು, ಅಮೆರಿಕಾದಲ್ಲಿ 24 ಗಂಟೆಗಳಲ್ಲಿ 2,000 ಮಂದಿ ಸಾವನ್ನಪ್ಪಿದ್ದಾರೆ. ಇದರಂತೆ ವಿಶ್ವದೆಲ್ಲೆಡೆ ವೈರಸ್'ಗೆ ಬಲಿಯಾದವರ ಸಂಖ್ಯೆ 82,000ಕ್ಕೆ ಏರಿಕೆಯಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಾಷಿಂಗ್ಟನ್: ವಿಶ್ವದೆಲ್ಲೆಡೆ ಕೊರೋನಾ ವೈರಸ್ ರುದ್ರತಾಂಡವ ಮುಂದುವರೆದಿದ್ದು, ಅಮೆರಿಕಾದಲ್ಲಿ 24 ಗಂಟೆಗಳಲ್ಲಿ 2,000 ಮಂದಿ ಸಾವನ್ನಪ್ಪಿದ್ದಾರೆ. ಇದರಂತೆ ವಿಶ್ವದೆಲ್ಲೆಡೆ ವೈರಸ್'ಗೆ ಬಲಿಯಾದವರ ಸಂಖ್ಯೆ 82,000ಕ್ಕೆ ಏರಿಕೆಯಾಗಿದೆ. 

ಅಮೆರಿಕಾದಲ್ಲಿ 24 ಗಂಟೆಗಳಲ್ಲಿ 2,000 ಮಂದಿ ಬಲಿಯಾಗಿದ್ದು, ಈ ಪೈಕಿ ನ್ಯೂಯಾರ್ಕ್ ವೊಂದರಲ್ಲಿಯೇ 731 ಮಂದಿ ಸಾವಿಗೀಡಾಗಿದ್ದಾರೆ. ಈ ಮೂಲಕ ಅಮೆರಿಕಾದಲ್ಲಿ 12,393 ಮಂದಿ ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಕಳೆದ 1480 ಮಂದಿ ಬಲಿಯ ಈವರೆಗಿನ ಗರಿಷ್ಠ ಎನಿಸಿತ್ತು. 

ಇನ್ನು ಫ್ರಾನ್ಸ್ ನಲ್ಲಿ ಸಾವನ್ನಪ್ಪಿದವರ ಸಂಖ್ಯೆ 10,000 ಗಡಿ ದಾಟಿದೆ. ಒಂದೇ ದಿನ 1417 ಮಂದಿಯನ್ನು ಬಲಿ ಪಡೆದುಕೊಂಡಿದೆ. ಸೋಮವಾರ 833 ಮಂದಿ ಸಾವಿಗೀಡಾಗಿದ್ದೇ ಈ ವರೆಗಿನ ಗರಿಷ್ಠವಾಗಿತ್ತು. ಮಂಗಳವಾರ ಈ ದಾಖಲೆ ಮೀರಿದೆ. ಇದರೊಂದಿಗೆ ಫ್ರಾನ್ಸ್ ನಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 10 ಸಾವಿರ ಗಡಿ ದಾಟಿದೆ. ಈ ಎಲ್ಲೆ ಮೀರಿದ ವಿಶ್ವದ 4ನೇ ದೇಶವಾಗಿದೆ. 

ಇನ್ನು ಬ್ರಿಟನ್ ನಲ್ಲಿ ಮಂಗಳವಾರ ಒಂದೇ 789 ಮಂದಿ ಸಾವಿಗೀಡಾಗಿದ್ದಾರೆ. ಇದರಿಂದ ಮೃತರ ಸಂಖ್ಯೆ 6159ಕಕೆ ಏರಿಕೆಯಾಗಿದೆ. 3 ಸಾವಿರ ಸೋಂಕು ಕಂಡು ಬಂದಿದೆ. ಸೋಂಕಿತರ ಸಂಖ್ಯೆ 55,242ಕ್ಕೇರಿದೆ. 

ಸ್ಪೇನ್ ನಲ್ಲಿ ಕೊರೋನಾ ಮಂಗಳವಾರ ಒಂದೇ 556 ಮಂದಿಯನ್ನು ಬಲಿ ಪಡೆದಿದೆ. 4 ದಿನಗಲ ಕಾಲ ಕಡಿಮೆ ಇದ್ದ ಸಾವಿನ ಸಂಖ್ಯೆ ಏರಿಕೆಯಾಗಿದೆ. ಮೃತರ ಸಂಖ್ಯೆ 13,879ಕ್ಕೆ ಹೆಚ್ಚಳವಾಗಿದೆ. 

ಕೊರೋನಾಗೆ ಇಟಲಿಯಲ್ಲಿ ನಿನ್ನೆ ಮತ್ತೆ 609 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಸೋಂಕು ಒಟ್ಟು 17,127 ಮಂದಿಯನ್ನು ಬಲಿ ಪಡೆದಂತಾಗಿದೆ. ಒಟ್ಟು 1.35 ಲಕ್ಷ ಮಂದಿ ಪೀಡಿತರಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com