ಜೂನ್ ನಿಂದ ಮಾನವರ ಮೇಲೆ ಕೊರೋನಾ ಲಸಿಕೆ ಪ್ರಯೋಗ ಪರೀಕ್ಷೆ ನಡೆಸಲಿರುವ ರಷ್ಯಾ

ಕೊರೋನಾ ಲಸಿಕೆಯನ್ನು ಮನುಷ್ಯನ ಮೇಲೆ ಜೂನ್ ನಿಂದ ಪ್ರಯೋಗ ಮಾಡಲಾಗುವುದು ಎಂದು ರಷ್ಯಾ ದೇಶದ ಸಂಶೋಧನಾ ಕೇಂದ್ರದ ಮುಖ್ಯಸ್ಥರು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೆ ತಿಳಿಸಿದ್ದಾರೆ.
ರಷ್ಯಾದಲ್ಲಿ ಪೌರ ಕಾರ್ಮಿಕರು ಕೊರೋನಾ ಸೋಂಕು ನಿವಾರಣೆಗೆ ಔಷಧಿ ಸಿಂಪಡಿಸುತ್ತಿರುವುದು
ರಷ್ಯಾದಲ್ಲಿ ಪೌರ ಕಾರ್ಮಿಕರು ಕೊರೋನಾ ಸೋಂಕು ನಿವಾರಣೆಗೆ ಔಷಧಿ ಸಿಂಪಡಿಸುತ್ತಿರುವುದು

ಮಾಸ್ಕೊ: ಕೊರೋನಾ ಲಸಿಕೆಯನ್ನು ಮನುಷ್ಯನ ಮೇಲೆ ಜೂನ್ ನಿಂದ ಪ್ರಯೋಗ ಮಾಡಲಾಗುವುದು ಎಂದು ರಷ್ಯಾ ದೇಶದ ಸಂಶೋಧನಾ ಕೇಂದ್ರದ ಮುಖ್ಯಸ್ಥರು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೆ ತಿಳಿಸಿದ್ದಾರೆ.

ರಷ್ಯಾದ ವೆಕ್ಟೊರ್ ಸ್ಟೇಟ್ ವೈರಾಲಜಿ ಮತ್ತು ಬಯೊಟೆಕ್ನಾಲಜಿ ಕೇಂದ್ರದ ಮುಖ್ಯಸ್ಥ ರಿನಾಟ್ ಮಕ್ಸ್ಯುಟೊವ್, 180 ಮಂದಿ ಕಾರ್ಯಕರ್ತರ ಮೇಲೆ ಜೂನ್ 29ರಿಂದ ಮೂರು ಲಸಿಕೆಗಳನ್ನು ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಸಂಶೋಧನಾ ಕೇಂದ್ರಗಳ ಮುಖ್ಯಸ್ಥರ ನಡುವೆ ನಡೆದ ವಿಡಿಯೊ ಕಾನ್ಫರೆನ್ಸ್ ನಲ್ಲಿ ಈ ಸಂವಾದ ನಡೆದಿದೆ.

ಇದಕ್ಕಾಗಿ ಕಾರ್ಯಕರ್ತರ ಗುಂಪನ್ನು ಈಗಾಗಲೇ ರಚಿಸಲಾಗಿದೆ. 300ಕ್ಕೂ ಹೆಚ್ಚು ಅರ್ಜಿಗಳು ನಮಗೆ ಬಂದಿವೆ. ಹಲವಾರು ಮೂಲಮಾದರಿ ಲಸಿಕೆಗಳನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಪ್ರಸ್ತುತ ಇಲಿ, ಮೊಲ ಮತ್ತು ಇತರ ಪ್ರಾಣಿಗಳ ಮೇಲೆ ಪ್ರಯೋಗ ನಡೆಯುತ್ತಿದ್ದು ಏಪ್ರಿಲ್ 30ರ ಹೊತ್ತಿಗೆ ಲಸಿಕೆ ಬಗ್ಗೆ ಗೊತ್ತಾಗಲಿದೆ ಎಂದಿದ್ದಾರೆ.

ರಷ್ಯಾದಲ್ಲಿ ನಿನ್ನೆಯ ಹೊತ್ತಿಗೆ 7 ಸಾವಿರದ 497 ಕೊರೋನಾ ಸೋಂಕಿತರು ವರದಿಯಾಗಿದ್ದು 58 ಮಂದಿ ಮೃತಪಟ್ಟಿದ್ದಾರೆ, ಆದರೆ ನಿಖರ ಸಂಖ್ಯೆ ಇನ್ನೂ ಹೆಚ್ಚಾಗಿರಬಹುದು ಎನ್ನಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com