ಕೋವಿಡ್-19 ವಿರುದ್ಧದ ಹೋರಾಟಕ್ಕೆ ಟ್ವಿಟರ್ ಸಿಇಒ ಒಂದು ಶತಕೋಟಿ ಡಾಲರ್ ದೇಣಿಗೆ!

ಮಾರಕ ಕೊರೊನವೈರಸ್(ಕೋವಿಡ್ 19) ವಿರುದ್ಧದ ಜಾಗತಿಕ ಹೋರಾಟಕ್ಕೆ ಟ್ವಿಟರ್ ಸಂಸ್ಥಾಪಕ ಮತ್ತು ಸಿಇಒ ಜ್ಯಾಕ್ ಡಾರ್ಸೆ ಒಂದು ಶತಕೋಟಿ ಡಾಲರ್ ದೇಣಿಗೆ ನೀಡಿದ್ದಾರೆ.
ಜ್ಯಾಕ್ ಡಾರ್ಸೆ
ಜ್ಯಾಕ್ ಡಾರ್ಸೆ

ವಾಷಿಂಗ್ಟನ್: ಮಾರಕ ಕೊರೊನವೈರಸ್(ಕೋವಿಡ್ 19) ವಿರುದ್ಧದ ಜಾಗತಿಕ ಹೋರಾಟಕ್ಕೆ ಟ್ವಿಟರ್ ಸಂಸ್ಥಾಪಕ ಮತ್ತು ಸಿಇಒ ಜ್ಯಾಕ್ ಡಾರ್ಸೆ ಒಂದು ಶತಕೋಟಿ ಡಾಲರ್ ದೇಣಿಗೆ ನೀಡಿದ್ದಾರೆ.

ಜಾಗತಿಕ ಕೋವಿಡ್ 19 ಪರಿಹಾರ ಕಾರ್ಯಕ್ಕೆ ಒಂದು ಶತಕೋಟಿ ಡಾಲರ್ (ತಮ್ಮ ಸಂಪತ್ತಿನ ಶೇ 28ರಷ್ಟು) ದೇಣಿಗೆಯಾಗಿ ನೀಡುತ್ತಿದ್ದೇನೆ ಎಂದು ಡಾರ್ಸೆ ಮಂಗಳವಾರ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.

ಕರೋನವೈರಸ್  ಇಡೀ ವಿಶ್ವಕ್ಕೇ ವ್ಯಾಪಿಸಿರುವ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಬಾಲಕಿಯರ ಆರೋಗ್ಯ ಮತ್ತು ಶಿಕ್ಷಣ ಕಾರ್ಯಕ್ರಮಗಳಿಗೆ ಆರ್ಥಿಕ ನೆರವು ನೀಡುವುದಾಗಿ ಡಾರ್ಸೆ ತನ್ನ ಟ್ವೀಟ್ ನಲ್ಲಿ ಭರವಸೆ ನೀಡಿದ್ದಾರೆ.

ಮಾರಕ ಸೋಂಕಿನ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳ ಆರೋಗ್ಯ ಮತ್ತು ಶಿಕ್ಷಣದ ಕಡೆ ಗಮನ ಹರಿಸಬೇಕಿದೆ. ಇದಕ್ಕಾಗಿ ನಿಧಿಯೊಂದನ್ನು ಆರಂಭಿಸಲಾಗಿದ್ದು, ಇದಕ್ಕೆ ಹರಿದು ಬರುವ ಎಲ್ಲ ದೇಣಿಗೆಗಳ ಮೇಲೆ ನಿಗಾ ವಹಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಟ್ವಿಟರ್ ವೇದಿಕೆಯಲ್ಲಿ ದಾಖಲಿಸಲಾದ ಎಲ್ಲಾ ದೇಣಿಗೆಗಳೊಂದಿಗೆ ಈ ನಿಧಿ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಡಾರ್ಸೆ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com