ಬ್ರಿಟನ್ ನಲ್ಲಿ ಕೊರೋನಾ ಗೆದ್ದುಬಂದ ಭಾರತೀಯ ಮೂಲದ 98 ವರ್ಷದ ವೃದ್ಧೆ!

ಸ್ಕಾಟ್ಲೆಂಡ್ ನಲ್ಲಿ ನೆಲೆಸಿರುವ ಭಾರತೀಯ ಮೂಲದ 98 ವರ್ಷದ ವೃದ್ಧೆಯೊಬ್ಬರು ಮಹಾಮಾರಿ ಕೊರೋನಾ ವೈರಸ್ ಗೆದ್ದುಬಂದಿದ್ದು, ಆಕೆಗೆ ಚಿಕಿತ್ಸೆ ನೀಡಿದ ವೈದ್ಯರು ಮತ್ತು ಕುಟುಂಬದವರಿಗೆ ಅಚ್ಚರಿ ತಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಂಡನ್: ಸ್ಕಾಟ್ಲೆಂಡ್ ನಲ್ಲಿ ನೆಲೆಸಿರುವ ಭಾರತೀಯ ಮೂಲದ 98 ವರ್ಷದ ವೃದ್ಧೆಯೊಬ್ಬರು ಮಹಾಮಾರಿ ಕೊರೋನಾ ವೈರಸ್ ಗೆದ್ದುಬಂದಿದ್ದು, ಆಕೆಗೆ ಚಿಕಿತ್ಸೆ ನೀಡಿದ ವೈದ್ಯರು ಮತ್ತು ಕುಟುಂಬದವರಿಗೆ ಅಚ್ಚರಿ ತಂದಿದೆ.

ಜುಲೈನಲ್ಲಿ 99ನೇ ವರ್ಷಕ್ಕೆ ಕಾಲಿಡುತ್ತಿರುವ ದಾಫ್ನೆ ಶಾ ಎಂಬ ಮಹಿಳೆ ಕಳೆದ ಗುರುವಾರ ತೀವ್ರ ಜ್ವರ ಹಾಗೂ ನಿರಂತರ ಕೆಮ್ಮು ಮತ್ತು ಉಸಿರಾಟದ ತೊಂದರೆಗಳಿಂದ ದುಂಡಿಯ ನೈನ್‌ವೆಲ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೃದ್ಧೆಗೆ ಕೊರೋನಾ ವೈರಸ್ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಕೊವಿಡ್-19 ಪರೀಕ್ಷೆ ಮಾಡಲಾಗಿದ್ದು, ಪಾಸಿಟಿವ್ ದೃಢಪಟ್ಟಿತ್ತು. ಆದರೆ ಆಸ್ಪತ್ರೆಗೆ ದಾಖಲಾಗಿ ಕೆಲವೇ ದಿನಗಳಲ್ಲಿ ಈ ಮಹಿಳೆ ಸಂಪೂರ್ಣ ಗುಣಮುಖಳಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ನನ್ನ ಮಗ ಈಗ ನನ್ನನ್ನು ನೋಡಿಕೊಳ್ಳುತ್ತಿದ್ದಾನೆ. ನಾನು ಈಗ ಚೆನ್ನಾಗಿದ್ದೇನೆ ಎಂದು ಭಾವಿಸುತ್ತಿದ್ದೇನೆ, ಆದರೆ ನಾನು ತುಂಬಾ ಚೆನ್ನಾಗಿದ್ದೇನೆ ಎಂದು ಹೇಳಲು ಬಯಸುವುದಿಲ್ಲ. ಜುಲೈನಲ್ಲಿ ಹುಟ್ಟುಹಬ್ಬಗ ಪಾರ್ಟಿ ನಡೆಸುವುದು ಒಂದು ಉತ್ತಮ ಉಪಾಯವೆಂದು ತೋರುತ್ತದೆ ಎಂದು ಕೊಚ್ಚಿ ಮೂಲದ ದಾಫ್ನೆ ಶಾ ಅವರು ಸ್ಥಳೀಯ ಡುಂಡಿ ಕೊರಿಯರ್ ಪತ್ರಿಕೆಗೆ ತಿಳಿಸಿದ್ದಾರೆ.

ಕೊರೋನಾ ವೈರಸ್ ಅಪ್‌ಡೇಟ್ ಪತ್ರಿಕಾಗೋಷ್ಠಿಯಲ್ಲಿ ಸ್ಕಾಟ್ಲೆಂಡ್‌ನ ಪ್ರಥಮ ಮಂತ್ರಿ ನಿಕೋಲಾ ಸ್ಟರ್ಜನ್ ಅವರು ಶಾ ಅವರ ಕೊರೋನಾ ಗೆದ್ದುಬಂದಿರುವುದನ್ನು ಉಲ್ಲೇಖಿಸಿದ್ದು, ಇದು ಈ ವಾರದ ಸ್ಪೂರ್ತಿದಾಯಕ ಮತ್ತು ಸ್ವಾಗತಾರ್ಹ ಸುದ್ದಿ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com