ಅಮೆರಿಕಾದಲ್ಲಿ ಕೊರೋನಾಗೆ 11 ಮಂದಿ ಅನಿವಾಸಿ ಭಾರತೀಯರು ಬಲಿ, 16 ಜನಕ್ಕೆ ಸೋಂಕು

ಅಮೆರಿಕಾದಲ್ಲಿ ಇಲ್ಲಿಯವರೆಗೆ ಕೊರೋನಾ ಸೋಂಕಿಗೆ 11 ಮಂದಿ ಅನಿವಾಸಿ ಭಾರತೀಯರು ಮೃತಪಟ್ಟಿದ್ದು ಮತ್ತೆ 16 ಮಂದಿ ಭಾರತೀಯರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಮೆರಿಕಾದಲ್ಲಿ ಇಲ್ಲಿಯವರೆಗೆ 14 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡಿದ್ದು 4 ಲಕ್ಷಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ತಗುಲಿದೆ.
ಮೃತ ಶರೀರವನ್ನು ಕೊಂಡೊಯ್ಯುತ್ತಿರುವುದು
ಮೃತ ಶರೀರವನ್ನು ಕೊಂಡೊಯ್ಯುತ್ತಿರುವುದು

ವಾಷಿಂಗ್ಟನ್: ಅಮೆರಿಕಾದಲ್ಲಿ ಇಲ್ಲಿಯವರೆಗೆ ಕೊರೋನಾ ಸೋಂಕಿಗೆ 11 ಮಂದಿ ಅನಿವಾಸಿ ಭಾರತೀಯರು ಮೃತಪಟ್ಟಿದ್ದು ಮತ್ತೆ 16 ಮಂದಿ ಭಾರತೀಯರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಮೆರಿಕಾದಲ್ಲಿ ಇಲ್ಲಿಯವರೆಗೆ 14 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡಿದ್ದು 4 ಲಕ್ಷಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ತಗುಲಿದೆ.

ಅಮೆರಿಕಾದಲ್ಲಿ ಕೊರೋನಾಗೆ ಬಲಿಯಾದವರೆಲ್ಲಾ ಪುರುಷರಾಗಿದ್ದು  ಅವರಲ್ಲಿ 10 ಮಂದಿ ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿ ಪ್ರದೇಶಗಳಿಗೆ ಸೇರಿದವರಾಗಿದ್ದಾರೆ. ಅವರಲ್ಲಿ ನಾಲ್ವರು ನ್ಯೂಯಾರ್ಕ್ ಸಿಟಿಯಲ್ಲಿ ಟ್ಯಾಕ್ಸ್ ಚಾಲಕರಾಗಿದ್ದಾರೆ.

 ಕೊರೋನಾ ಸೋಂಕಿಗೆ ಹೆಚ್ಚು ತತ್ತರವಾಗಿದ್ದು ಅಮೆರಿಕಾದ ನ್ಯೂಯಾರ್ಕ್ ಸಿಟಿ. ಇಲ್ಲಿ 6 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು 1,38 ಸಾವಿರ ಜನರಿಗೆ ಸೋಂಕು ತಗುಲಿದೆ. ನ್ಯೂಜೆರ್ಸಿಯಲ್ಲಿ 1,500 ಮಂದಿ ಮೃತಪಟ್ಟಿದ್ದು 48 ಸಾವಿರ ಮಂದಿಗೆ ಸೋಂಕು ತಗುಲಿದೆ. ಫ್ಲೋರಿಡಾದಲ್ಲಿ ಒಬ್ಬ ಭಾರತೀಯ ಮೃತಪಟ್ಟಿದ್ದಾರೆ.

ಕ್ಯಾಲಿಫೋರ್ನಿಯಾ ಮತ್ತು ಟೆಕ್ಸಾಸ್ ನಲ್ಲಿ ಕೊರೋನಾಗೆ ಮೃತಪಟ್ಟ ಭಾರತೀಯರ ಗುರುತನ್ನು ಅಲ್ಲಿನ ಅಧಿಕಾರಿಗಳು ಪತ್ತೆಹಚ್ಚುತ್ತಿದ್ದಾರೆ. ಇನ್ನು ಸೋಂಕು ತಗುಲಿಸಿಕೊಂಡಿರುವ 16 ಭಾರತೀಯರು ಸ್ವ ನಿರ್ಬಂಧದಲ್ಲಿದ್ದಾರೆ. ಅವರಲ್ಲಿ 8 ಮಂದಿ ನ್ಯೂಯಾರ್ಕ್ ನಲ್ಲಿ, ಮೂವರು ನ್ಯೂಜೆರ್ಸಿಯಲ್ಲಿ ಮತ್ತು ಉಳಿದವರು ಟೆಕ್ಸಾಸ್ ಮತ್ತು ಕ್ಯಾಲಿಫೋರ್ನಿಯಾದಲ್ಲಿದ್ದಾರೆ. ಇವರೆಲ್ಲ ಉತ್ತರಾಖಂಡ್, ಮಹಾರಾಷ್ಟ್ರ, ಕರ್ನಾಟಕ ಮತ್ತು ಉತ್ತರ ಪ್ರದೇಶದವರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com