ಚೀನಾದಲ್ಲಿ 46 ಹೊಸ ಕೊರೋನಾ ವೈರಸ್ ಸೊಂಕು ಪ್ರಕರಣ ಪತ್ತೆ, 34 ಸೋಂಕಿತರಲ್ಲಿ ವೈರಸ್ ಲಕ್ಷಣಗಳೇ ಇಲ್ಲ, 3 ಸಾವು!

ವಿಶ್ವದ ಮೊದಲ ಕೊರೋನಾ ವೈರಸ್ ಪತ್ತೆಯಾದ ಚೀನಾದಲ್ಲಿ ಇದೀಗ ವೈರಸ್ ನ 2ನೇ ಹಂತದ ಆರ್ಭಟ ಆರಂಭವಾಗಿದ್ದು, ಚೀನಿಯರ ನಾಡಲ್ಲಿ ಇದೀಗ 46 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಮೂವರು ಸೋಂಕಿತರು ಸಾವನ್ನಪ್ಪಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀಜಿಂಗ್: ವಿಶ್ವದ ಮೊದಲ ಕೊರೋನಾ ವೈರಸ್ ಪತ್ತೆಯಾದ ಚೀನಾದಲ್ಲಿ ಇದೀಗ ವೈರಸ್ ನ 2ನೇ ಹಂತದ ಆರ್ಭಟ ಆರಂಭವಾಗಿದ್ದು, ಚೀನಿಯರ ನಾಡಲ್ಲಿ ಇದೀಗ 46 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಮೂವರು ಸೋಂಕಿತರು ಸಾವನ್ನಪ್ಪಿದ್ದಾರೆ.

ಚೀನಾದ ರಾಷ್ಟ್ರೀಯ ಆರೋಗ್ಯ ಸಮಿತಿ ಹಂಚಿಕೊಂಡಿರುವ ಮಾಹಿತಿಯಂತೆ ಈ ವರೆಗೂ ಚೀನಾದಲ್ಲಿ 46 ಹೊಸ ಕೊರೋನಾ ವೈರಸ್ ಸೋಂಕು ಪ್ರಕರಣ ಪತ್ತೆಯಾಗಿದ್ದು, ಈ ಪೈಕಿ 34 ಸೋಂಕಿತರಲ್ಲಿ ವೈರಸ್ ಲಕ್ಷಣಗಳೇ ಕಂಡುಬಂದಿಲ್ಲ. ಅಂತೆಯೇ 4 ಮಂದಿ ಸ್ಥಳೀಯರಲ್ಲಿ (ಸಂಚಾರ ಇತಿಹಾಸವಿಲ್ಲ, ಸೋಂಕಿತರೊಂದಿಗೆ ಸಂಪರ್ಕವೂ ಇಲ್ಲ) ಸೋಂಕು ಕಂಡುಬಂದಿರುವುದು ಆಘಾತ ತಂದಿದೆ.

ಚೀನಾದಲ್ಲಿ ಒಟ್ಟಾರೆಯಾಗಿ ಕೊರೋನಾ ವೈರಸ್ ನಿಂದಾಗಿ 3,339 ಮಂದಿ ಸಾವನ್ನಪ್ಪಿದ್ದು, ಶುಕ್ರವಾರ ಮಂದಿ ಸಾವನ್ನಪ್ಪಿದ್ದಾರೆ. ಶುಕ್ರವಾರ ಸಾವನ್ನಪ್ಪಿದವೆರಲ್ಲರೂ ಹುಬೈ ಪ್ರಾಂತ್ಯದವರು ಎಂದು ತಿಳಿದುಬಂದಿದೆ. ಇನ್ನು ಚೀನಾದಲ್ಲಿ ವೈರಸ್ ಸೋಂಕಿತರ ಸಂಖ್ಯೆ 81,953 ಏರಿಕೆಯಾಗಿದ್ದು, 77,525 ಮಂದಿ ಗುಣಮುಖರಾಗಿದ್ದಾರೆ. ಶುಕ್ರವಾರ ಒಂದೇ ದಿನ 449 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 1,089 ಮಂದಿ ಸೋಂಕಿತರು ಇನ್ನು 37 ವಿವಿಧ ಪ್ರಾಂತ್ಯಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com