ಐಎಂಎಫ್ ನ ಕೊರೋನಾ ವೈರಸ್ ಎದುರಿಸುವ ಸಲಹಾ ತಂಡಕ್ಕೆ ರಘುರಾಮ್ ರಾಜನ್ 

ಕೊರೋನಾ ವೈರಸ್ ನಿಂದ ಜಾಗತಿಕ ಮಟ್ಟದಲ್ಲು ಉಂಟಾಗಿರುವ ಸವಾಲುಗಳನ್ನು ಎದುರಿಸಲು ಐಎಂಎಫ್ ನ ವ್ಯವಸ್ಥಾಪಕ ನಿರ್ದೇಶಕರಾದ ಕ್ರಿಸ್ಟಲಿನಾ ಜಾರ್ಜೀವಾ 11 ಸದಸ್ಯರ ಸಲಹಾ ತಂಡವನ್ನು ರಚಿಸಿದ್ದು ರಘುರಾಮ್ ರಾಜನ್ ಅವರನ್ನು ಆಯ್ಕೆ ಮಾಡಿದ್ದಾರೆ. 
ರಘುರಾಮ್ ರಾಜನ್
ರಘುರಾಮ್ ರಾಜನ್

ಕೊರೋನಾ ವೈರಸ್ ನಿಂದ ಜಾಗತಿಕ ಮಟ್ಟದಲ್ಲು ಉಂಟಾಗಿರುವ ಸವಾಲುಗಳನ್ನು ಎದುರಿಸಲು ಐಎಂಎಫ್ ನ ವ್ಯವಸ್ಥಾಪಕ ನಿರ್ದೇಶಕರಾದ ಕ್ರಿಸ್ಟಲಿನಾ ಜಾರ್ಜೀವಾ 11 ಸದಸ್ಯರ ಸಲಹಾ ತಂಡವನ್ನು ರಚಿಸಿದ್ದು ರಘುರಾಮ್ ರಾಜನ್ ಅವರನ್ನು ಆಯ್ಕೆ ಮಾಡಿದ್ದಾರೆ. 

2016 ವರೆಗೆ ಮೂರು ವರ್ಷಗಳ ಕಾಲ ಆರ್ ಬಿಐ ಗೌರ್ನರ್ ಆಗಿದ್ದ ರಘುರಾಮ್ ರಾಜನ್ ಈಗ ಪ್ರತಿಷ್ಠಿತ ಚಿಕಾಗೊ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಜಾಗತಿಕ ಮಟ್ಟದಲ್ಲಿನ ಪ್ರಮುಖ ಬೆಳವಣಿಗೆಗಳು ಹಾಗೂ ನೀತಿ ವಿಷಯಗಳು, ಕೊರೋನಾದಿಂದ ಉಂಟಾಗಿರುವ ಜಗತ್ತಿಗೆ ಎದುರಾಗಿರುವ ಅಸಾಧಾರಣ ಸವಾಲುಗಳನ್ನು ಎದುರಿಸುವ ಬಗ್ಗೆ 11 ಸದಸ್ಯರಿರುವ ಸಲಹಾ ತಂಡ ಐಎಂಎಫ್ ಗೆ ನೆರವಾಗಲಿದೆ. 

ಕೊರೋನಾ ವ್ಯಾಪಕವಾಗಿ ಹರಡುವುದಕ್ಕೂ ಮುನ್ನವೇ ಐಎಂಎಫ್ ನ ಸದಸ್ಯರು ವೇಗವಾಗಿ ವಿಕಸಿಸುತ್ತಿರುವ ವಿಶ್ವ ಮತ್ತು ಸಂಕೀರ್ಣ ನೀತಿ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಇದನ್ನು ನಿರ್ವಹಿಸುವುದಕ್ಕೆ ನಮಗೆ ಐಎಂಎಫ್ ನ ಒಳಗೆ ಮತ್ತು ಹೊರಗಿನಿಂದ ಉನ್ನತ ದರ್ಜೆಯ ಪರಿಣತಿ ಹೊಂದಿರುವವರ ಅಗತ್ಯವಿದೆ ಎಂದು ಕ್ರಿಸ್ಟಲಿನಾ ಜಾರ್ಜೀವಾ ಹೇಳಿದ್ದಾರೆ. 

ಸಿಂಗಪೂರ್ ನ ಹಿರಿಯ ಸಚಿವ ಹಾಗೂ ಅಲ್ಲಿನ ಹಣಕಾಸು ಪ್ರಾಧಿಕಾರದ ಅಧ್ಯಕ್ಷ ಥರ್ಮನ್ ಷಣ್ಮುಗರತ್ನಂ, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರೊಫೆಸರ್ ಆಗಿರುವ ಕ್ರಿಸ್ಟಿನ್ ಫೋರ್ಬ್ಸ್, ಆಸ್ಟ್ರೇಳಿಯಾದ ಮಾಜಿ ಪ್ರಧಾನಿ ಕೆವಿನ್ ರುಡ್, ವಿಶ್ವಸಂಸ್ಥೆಯ ಮಾಜಿ ಉಪಕಾರ್ಯದರ್ಶಿ ಲಾರ್ಡ್ ಮಾರ್ಕ್ ಮಲ್ಲೊಚ್ ಬ್ರೌನ್ ಸಲಹಾ ತಂಡದಲ್ಲಿರುವ ಇನ್ನಿತರ ಸದಸ್ಯರಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com