ಕೊರೋನಾ ಮರಣ ಮೃದಂಗ: ಅಮೆರಿಕದಲ್ಲಿ 24 ಸಾವಿರ, ಇಟಲಿಯಲ್ಲಿ 20 ಸಾವಿರ ಬಲಿ, ವಿಶ್ವಾದ್ಯಂತ 20 ಲಕ್ಷ ಸೋಂಕಿತರು

ಜಗತ್ತಿನಾದ್ಯಂತ 20 ಲಕ್ಷಕ್ಕೂ ಹೆಚ್ಚು ಜನರಲ್ಲಿ ಕೊರೊನಾ ವೈರಾಣು ಸೋಂಕು ದೃಢಪಟ್ಟಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವರದಿ ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಾಸ್ಕೋ: ಜಗತ್ತಿನಾದ್ಯಂತ 20 ಲಕ್ಷಕ್ಕೂ ಹೆಚ್ಚು ಜನರಲ್ಲಿ ಕೊರೊನಾ ವೈರಾಣು ಸೋಂಕು ದೃಢಪಟ್ಟಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವರದಿ ತಿಳಿಸಿದೆ.

ಪ್ರಪಂಚದಾದ್ಯಂತ 20,19,320 ಜನರಲ್ಲಿ ಸೋಂಕು ದೃಢಪಟ್ಟಿದ್ದು 1,19,483 ಜನರು ಈ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಇನ್ನು ಅಮೆರಿಕದಲ್ಲಿ ಮತ್ತು ಇಟಲಿಯಲ್ಲಿ ಸಾವಿನ ಸಂಖ್ಯೆ 20 ಸಾವಿರ ದಾಟಿದೆ. 

ಅಮೆರಿಕದಲ್ಲಿ ಈವರೆಗೂ 23,644 ಮಂದಿ ಬಲಿಯಾಗಿದ್ದರೆ ಇಟಲಿಯಲ್ಲಿ 20,456 ಮಂದಿ ಬಲಿಯಾಗಿದ್ದಾರೆ. ಸ್ಪೇನ್ ನಲ್ಲಿ 17,756 ಮಂದಿ ಮೃತಪಟ್ಟಿದ್ದರೆ ಫ್ರಾನ್ಸ್ ನಲ್ಲಿ 15 ಸಾವಿರ ಗಡಿ ದಾಟಿದೆ. 

ಇನ್ನು ಸೋಂಕಿತರ ಸಂಖ್ಯೆಯಲ್ಲಿ ಅಮೆರಿಕ ಮುಂದಿದೆ. ಈವರೆಗೂ 5,87,155 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು ಸ್ಪೇನ್ ನಲ್ಲಿ 1,70,000 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಇನ್ನು ಇಟಲಿಯಲ್ಲಿ 1,60,000 ಮತ್ತು ಫ್ರಾನ್ಸ್ ನಲ್ಲಿ 137,000 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com