ಕೋವಿಡ್-19: ಧಾರ್ಮಿಕ ಸಭೆ ನಿಷೇಧ ಸರಿಯಲ್ಲ, ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಪಾಕ್ ಮೌಲ್ವಿಗಳು!

ಕೊರೋನಾವೈರಸ್ ಉಲ್ಬಣದಿಂದಾಗಿ ಮಸೀದಿಗಳಲ್ಲಿ ಧಾರ್ಮಿಕ ಸಭೆ ನಿಷೇಧದ ವಿರುದ್ಧ ಸರ್ಕಾರಕ್ಕೆ ಪಾಕ್ ಧರ್ಮಗುರುಗಳು ಎಚ್ಚರಿಕೆ ನೀಡಿದ್ದಾರೆ. ಅಧಿಕಾರಿಗಳು ಧಾರ್ಮಿಕ ನಿಯಮಗಳನ್ನು ಪಾಲಿಸಬೇಕು, ಮಸೀದಿಗಳಲ್ಲಿ ಅಲ್ಲಾಹುವಿನಿಂದ ಕ್ಷಮೆ ಕೋರಲು ಹೆಚ್ಚಿನ ಸಂಖ್ಯೆಯ  ಆರಾಧಕರಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.  
ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸಂಬಳ ಪಡೆಯುತ್ತಿರುವ ಪಾಕಿಸ್ತಾನ ಸರ್ಕಾರದ ನೌಕರರು
ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸಂಬಳ ಪಡೆಯುತ್ತಿರುವ ಪಾಕಿಸ್ತಾನ ಸರ್ಕಾರದ ನೌಕರರು

ಇಸ್ಲಾಮಾಬಾದ್ : ಕೊರೋನಾವೈರಸ್ ಉಲ್ಬಣದಿಂದಾಗಿ ಮಸೀದಿಗಳಲ್ಲಿ ಧಾರ್ಮಿಕ ಸಭೆ ನಿಷೇಧದ ವಿರುದ್ಧ ಸರ್ಕಾರಕ್ಕೆ ಪಾಕ್ ಧರ್ಮಗುರುಗಳು ಎಚ್ಚರಿಕೆ ನೀಡಿದ್ದಾರೆ. ಅಧಿಕಾರಿಗಳು ಧಾರ್ಮಿಕ ನಿಯಮಗಳನ್ನು ಪಾಲಿಸಬೇಕು, ಮಸೀದಿಗಳಲ್ಲಿ ಅಲ್ಲಾಹುವಿನಿಂದ ಕ್ಷಮೆ ಕೋರಲು ಹೆಚ್ಚಿನ ಸಂಖ್ಯೆಯ  ಆರಾಧಕರಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.  

ಪಾಕಿಸ್ತಾನದಲ್ಲಿ 5, 715ಮಂದಿಯಲ್ಲಿ  ಕೊರೋನಾವೈರಸ್ ತಗಲಿದ್ದು, ಈ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಮಸೀದಿಗಳಲ್ಲಿ ಧಾರ್ಮಿಕ ಸಭೆ, ಪ್ರಾರ್ಥನೆಗಳನ್ನು ಸರ್ಕಾರ ನಿಷೇಧಿಸಿದೆ. ಐದಕ್ಕಿಂತಲೂ ಹೆಚ್ಚಿನ ಸಂಖ್ಯೆ ಜನರು ಒಂದೆಡೆ ಸೇರುವಂತಿಲ್ಲ ಎಂದು ನಿರ್ಬಂಧಿಸಲಾಗಿದೆ. 

ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ಮನವಿ ಮಾಡಿದ್ದರೂ ಸಹ, ಇಸ್ಲಾಮಾಬಾದ್ ಹಾಗೂ ರಾವಲ್ಫಿಂಡಿಯ 53 ಹಿರಿಯ ಧರ್ಮಗುರುಗಳು ಜಾಮಿಯಾ ದಾರುಲ್ ಉಲೂಮ್  ಜಾಕ್ರಿಯಾದಲ್ಲಿ ಸೇರಿ ಮಸೀದಿಗಳಲ್ಲಿ ಧಾರ್ಮಿಕ ಸಭೆ, ಪ್ರಾರ್ಥನೆ ನಿಷೇಧ ಸಂಬಂಧ ಚರ್ಚೆ ನಡೆಸಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ವಿವಿಧ ಗುಂಪುಗಳನ್ನು ಪ್ರತಿನಿಧಿಸುವ ಮೌಲಿಗಳು, ನಿಷೇಧಿತ ಗುಂಪುಗಳು, ರಾಜಕೀಯ ಮತ್ತು ರಾಜಕೀಯೆತರ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದು, ಸರ್ಕಾರದ ಮುಖಂಡರು ಧಾರ್ಮಿಕ ನಿಯಮಗಳನ್ನು ಪಾಲಿಸಬೇಕು ಮತ್ತು ಆರಾಧಕರು ಅಲ್ಲಾಹುವಿನ ಬಳಿ ಕ್ಷಮೆಯಾಚಿಸಲು ಅವಕಾಶ ಮಾಡಿಕೊಡಬೇಕೆಂದು  ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ. 

ಏಪ್ರಿಲ್ ಮಾಸಾಂತ್ಯದಲ್ಲಿ ಆರಂಭವಾದ ಪವಿತ್ರ ರಂಜಾನ್ ಮಾಸದಲ್ಲಿ ಕೋವಿಡ್-19 ಹರಡದಂತೆ ಸರ್ಕಾರ ಯೋಜನೆ ಹಾಕಿಕೊಳ್ಳುವ ಮುಂಚೆಯೇ ಇಸ್ಲಾಂ ಧರ್ಮಗುರುಗಳಿಂದ ಈ ರೀತಿಯ ಒತ್ತಡ ಕೇಳಿಬಂದಿದೆ. ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆಗಳಿಗೆ ನಿರ್ಬಂಧ ಹಾಕಿರುವುದನ್ನು ದೇಶವಾಸಿಗಳು ಒಪ್ಪಿಕೊಂಡಿಲ್ಲ ಎಂದು ಜಾಮಿಯಾ ದಾರುಲ್ ಉಲೂಮ್ ಜಾಕ್ರಿಯಾದ ಅಧ್ಯಕ್ಷ ಪಿರ್ ಅಜಿಜೂರ್ ರೆಹಮಾನ್ ಹಜಾರ್ವಿ ಹೇಳಿದ್ದಾರೆ. 

ಈ ಮಧ್ಯೆ  ಕಳೆದ 24 ಗಂಟೆಗಳಲ್ಲಿ  ಪಾಕಿಸ್ತಾನದಲ್ಲಿ 342 ಹೊಸ ಸೋಂಕಿನ ಪ್ರಕರಣಗಳು ಕಂಡುಬಂದಿದ್ದು, ಒಟ್ಟಾರೇ ಸೋಂಕಿತರ ಸಂಖ್ಯೆ 5, 716 ಆಗಿದೆ ಎಂದು ರಾಷ್ಟ್ರೀಯ ಆರೋಗ್ಯ ಸೇವಾ ಸಚಿವಾಲಯ ತಿಳಿಸಿದೆ.  ಈ ಪೈಕಿ 96 ಮಂದಿ ಮೃತಪಟ್ಟಿದ್ದು, 1378 ಮಂದಿ ಚೇತರಿಸಿಕೊಂಡಿದ್ದಾರೆ. 46 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಸಚಿವಾಲಯ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com