ಫೇಸ್ ಬುಕ್ ಎಚ್ಚರಿಕೆ: ಕೊರೋನಾ ಸುದ್ದಿಗಳನ್ನು ಲೈಕ್ ಮಾಡುವ ಮುನ್ನ ಹುಷಾರ್!

ಕೊರೋನಾ ವೈರಸ್ ಕುರಿತಂತೆ ಫೇಸ್ ಬುಕ್ ನಲ್ಲಿ ಸುದ್ದಿಗಳನ್ನು ಲೈಕ್ ಮಾಡುವ ಮುನ್ನ ಖಾತೆದಾರರು ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ತೊಂದರೆಗೆ ಸಿಲುಕಬೇಕಾಗುತ್ತದೆ. 
ಫೇಸ್ ಬುಕ್
ಫೇಸ್ ಬುಕ್

ನವದೆಹಲಿ: ಕೊರೋನಾ ವೈರಸ್ ಕುರಿತಂತೆ ಫೇಸ್ ಬುಕ್ ನಲ್ಲಿ ಸುದ್ದಿಗಳನ್ನು ಲೈಕ್ ಮಾಡುವ ಮುನ್ನ ಖಾತೆದಾರರು ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ತೊಂದರೆಗೆ ಸಿಲುಕಬೇಕಾಗುತ್ತದೆ. 

ಮಹಾಮಾರಿ ಕೊರೋನಾ ವೈರಸ್ ತಪ್ಪು ಮಾಹಿತಿಯನ್ನು ಹಂಚಿಕೊಂಡಿದ್ದೀರಾ ಅಥವಾ ಸಂವಹನ ನಡೆಸಿದ್ದೀರಾ ಎಂದು ಫೇಸ್‌ಬುಕ್ ಶೀಘ್ರದಲ್ಲೇ ಪರಿಶೀಲನೆ ನಡೆಸಿ ಖಾತೆದಾರರಿಗೆ ಮಾಹಿತಿ ನೀಡಲಿದೆ. ಇತ್ತೀಚಿನ ದಿನಗಳಲ್ಲಿ ಕೊರೋನಾ ವೈರಸ್ ಕುರಿತಂತಾ ಸುಳ್ಳು ಸುದ್ದಿಗಳು ಏಕಾಏಕಿ ವೈರಲ್ ಆಗುತ್ತಿರುವುದು ಅಪಾಯಕಾರಿಯಾಗಿದ್ದು ಈ ಹಿನ್ನೆಲೆಯಲ್ಲಿ ಫೇಸ್ ಬುಕ್ ಕಠಿಣ ತೀರ್ಮಾನ ಕೈಗೊಳ್ಳಲಿದೆ. 

ಕೋವಿಡ್-19 ಬಗ್ಗೆ ಹಾನಿಕಾರಕ ಅಥವಾ ಸುಳ್ಳು ಸುದ್ದಿಗಳನ್ನು ಒಳಗೊಂಡಿರುವ ಪೋಸ್ಟ್‌ಗಳನ್ನು ಮಾನಿಟರ್ ಮಾಡಿ ತೆಗೆದು ಹಾಕಿದ ನಂತರ ಕ್ಲಿಕ್ ಮಾಡಿದ, ಪ್ರತಿಕ್ರಿಯಿಸಿದ ಅಥವಾ ಕಾಮೆಂಟ್ ಮಾಡಿದ ಬಳಕೆದಾರರಿಗೆ ಹೊಸ ಸೂಚನೆಯನ್ನು ಕಳುಹಿಸಲಾಗುತ್ತದೆ.

ಮುಂಬರುವ ವಾರಗಳಲ್ಲಿ ಫೇಸ್‌ಬುಕ್‌ನಲ್ಲಿ ಈ ಎಚ್ಚರಿಕೆಗಳು ಕಾಣಿಸಿಕೊಳ್ಳುತ್ತದೆ, ವೈರಸ್ ಕುರಿತಂತಾ ಕಾಲ್ಪನಿಕ ಮತ್ತು ವದಂತಿಗಳನ್ನು ಪಟ್ಟಿ ಮಾಡುವ ಮತ್ತು ತೆಗೆದುಹಾಕುವ ಬಗ್ಗೆ  ಸೈಟ್‌ ಬಳಕೆದಾರರಿಗೆ ವಿಶ್ವ ಆರೋಗ್ಯ ಸಂಘಟನೆ ನಿರ್ದೇಶಿಸುತ್ತದೆ.

ವೈರಸ್ ಬಗ್ಗೆ ಆನ್‌ಲೈನ್‌ನಲ್ಲಿ ತಪ್ಪು ಮಾಹಿತಿ ಹರಡುವುದನ್ನು ತಡೆಯಲು ಫೇಸ್‌ಬುಕ್, ಗೂಗಲ್ ಮತ್ತು ಟ್ವಿಟರ್ ಕಠಿಣ ನಿಯಮಗಳು, ಬದಲಾದ ಕ್ರಮಾವಳಿಗಳು ಮತ್ತು ಸಾವಿರಾರು ಫ್ಯಾಕ್ಟ್ ಚೆಕ್‌ಗಳನ್ನು ಪರಿಚಯಿಸುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com