ಪಾಕ್ ಪ್ರಧಾನಿಗೆ ಕೊರೋನಾ ಸೋಂಕು? ಹೆದರಿ ಕೂತ ಇಮ್ರಾನ್ ಖಾನ್‌!

ಕೊರೋನಾ ಮಹಾಮಾರಿ ಪಾಕಿಸ್ತಾನದಲ್ಲೂ ರೌದ್ರತಾಂಡವವಾಡುತ್ತಿದ್ದು ಇದೀಗ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೊರೋನಾ ಸೋಂಕಿನ ಭೀತಿಯಲ್ಲಿದ್ದಾರೆ. 
ಇಮ್ರಾನ್ ಖಾನ್
ಇಮ್ರಾನ್ ಖಾನ್

ಇಸ್ಲಾಮಾಬಾದ್: ಕೊರೋನಾ ಮಹಾಮಾರಿ ಪಾಕಿಸ್ತಾನದಲ್ಲೂ ರೌದ್ರತಾಂಡವವಾಡುತ್ತಿದ್ದು ಇದೀಗ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೊರೋನಾ ಸೋಂಕಿನ ಭೀತಿಯಲ್ಲಿದ್ದಾರೆ. 

ಏಪ್ರಿಲ್ 15ರಂದು ಇಮ್ರಾನ್ ಖಾನ್ ಎಡಿ ಫೌಂಡೇಷನ್ ನ ಅಧ್ಯಕ್ಷ ಫೈಸಲ್ ಎಂಬುವರನ್ನು ಭೇಟಿಯಾಗಿದ್ದರು. ನಂತರ ಫೈಸಲ್ ನಲ್ಲಿ ಕೊರೋನಾ ಸೋಂಕಿನ ಲಕ್ಷಣಗಳು ಕಂಡುಬಂದಿದ್ದು ಈ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಸೋಂಕಿನ ಭೀತಿ ಎದುರಿಸುತ್ತಿದ್ದು ಪರೀಕ್ಷೆಗೆ ಒಳಪಡಲಿದ್ದಾರೆ. 

ಕೊರೋನಾ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡುವ ಸಲುವಾಗಿ ಫೈಸಲ್ 1 ಕೋಟಿ ರೂ. ಚೆಕ್ ಅನ್ನು ಪಾಕ್ ಪ್ರಧಾನಿ ಕೊರೋನಾ ನಿಯಂತ್ರಣ ನಿಧಿಗೆ ನೀಡಿದ್ದರು. ಈ ಚೆಕ್ ಅನ್ನು ಸ್ವತಃ ಇಮ್ರಾನ್ ಖಾನ್ ಸ್ವೀಕರಿಸಿದ್ದರು. 

ಫೈಸಲ್ ಇಸ್ಲಾಮಾಬಾದ್ ನಲ್ಲಿರುವ ಮನೆಯಲ್ಲಿಯೇ ಕ್ವಾರಂಟೈನ್ ನಲ್ಲಿದ್ದಾರೆ. ಸದ್ಯ ಪಾಕಿಸ್ತಾನದಲ್ಲಿ 9,505 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಇಲ್ಲಿಯವರೆಗೂ 498 ಮಂದಿ ಮೃತಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com