ಕೊರೋನಾದಿಂದ ಕಂಗೆಟ್ಟಿರುವ ಪಾಕಿಸ್ತಾನಕ್ಕೆ ಐಎಂಎಫ್ ನಿಂದ 1.39 ಬಿಲಿಯನ್ ಡಾಲರ್ ತುರ್ತು ಸಾಲ

ಆರ್ಥಿಕ ದಿವಾಳಿತನಿಂದ ಕಂಗೆಟ್ಟಿರುವ  ಪಾಕಿಸ್ತಾನ ಇದೀಗ ಕೊರೋನಾ ವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ 1. 39 ಬಿಲಿಯನ್ ಡಾಲರ್ ನಷ್ಟು ತುರ್ತು ಸಾಲವನ್ನು ಪಡೆದುಕೊಂಡಿದೆ

Published: 23rd April 2020 03:23 PM  |   Last Updated: 23rd April 2020 05:47 PM   |  A+A-


Pakistana_Soldier1

ಪಾಕಿಸ್ತಾನದ ಯೋಧ

Posted By : nagaraja
Source : PTI

ಇಸ್ಲಾಮಾಬಾದ್: ಆರ್ಥಿಕ ದಿವಾಳಿತನಿಂದ ಕಂಗೆಟ್ಟಿರುವ  ಪಾಕಿಸ್ತಾನ ಇದೀಗ ಕೊರೋನಾ ವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ 1. 39 ಬಿಲಿಯನ್ ಡಾಲರ್ ನಷ್ಟು ತುರ್ತು ಸಾಲವನ್ನು ಪಡೆದುಕೊಂಡಿದೆ

ಆದಾಯ ಅಸಮತೋಲನ ಸಮಸ್ಯೆಯಿಂದಾಗಿ  6 ಬಿಲಿಯನ್ ಡಾಲರ್ ಆರ್ಥಿಕ ನೆರವಿಗಾಗಿ ಕಳೆದ ವರ್ಷ ಜುಲೈ ತಿಂಗಳಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಸಹಿ ಹಾಕಿದ ಪಾಕಿಸ್ತಾನ ಇದೀಗ ಹೆಚ್ಚುವರಿಯಾಗಿ 1.39 ಬಿಲಿಯನ್ ನಷ್ಟು ಸಾಲವನ್ನು ಪಡೆದುಕೊಂಡಿದೆ. 

ಕ್ಷಿಪ್ರ ಹಣಕಾಸು ಸಾಧನ- ಆರ್ ಪಿಐ ಅಡಿಯಲ್ಲಿ ಐಎಂಎಫ್ ನಿಂದ 1. 39 ಬಿಲಿಯನ್ ಡಾಲರ್ ನ್ನು ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಪಡೆದುಕೊಂಡಿರುವುದಾಗಿ ಸೆಂಟ್ರಲ್ ಬ್ಯಾಂಕ್ ಬುಧವಾರ ಟ್ವಿಟ್ ಮಾಡಿದೆ. 

ಕೋವಿಡ್ -19ನಿಂದ ಆರ್ಥಿಕತೆ ಮೇಲೆ ತೀವ್ರ ರೀತಿಯ ಪರಿಣಾಮ ಬೀರಿದ್ದು, ಆರ್ ಪಿಐ ಅಡಿಯಲ್ಲಿ ತುರ್ತು ಸಾಲ ಬಿಡುಗಡೆ ಮಾಡುವಂತೆ ಮಾರ್ಚ್ ತಿಂಗಳಿನಲ್ಲಿ ಪಾಕಿಸ್ತಾನ ಐಎಂಎಫ್ ಬಳಿ ಮನವಿ ಮಾಡಿಕೊಂಡಿತ್ತು. 

ಕೋವಿಡ್-19 ವಿರುದ್ಧದ ಹೋರಾಟಕ್ಕಾಗಿ ಪಾಕಿಸ್ತಾನಕ್ಕೆ  ತುರ್ತು ಸಾಲ ಮಂಜೂರು ಮಾಡಲು ಐಎಂಎಫ್ ಕಾರ್ಯಾಕಾರಿ ಮಂಡಳಿ ಕಳೆದ ವಾರ ಅನುಮತಿ ನೀಡಿತ್ತು ಎಂದು  ಐಎಂಎಫ್ ಇತ್ತೀಚಿಗೆ ಹೇಳಿಕೆಯಲ್ಲಿ ತಿಳಿಸಿತ್ತು. 

Stay up to date on all the latest ಅಂತಾರಾಷ್ಟ್ರೀಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp