ಜಗತ್ತಿನಾದ್ಯಂತ ಕೊರೋನಾ ಆರ್ಭಟ: 24 ಗಂಟೆಯಲ್ಲಿ 5 ಸಾವಿರ ಬಲಿ; ಒಟ್ಟಾರೆ 1,89 ಲಕ್ಷ ಸಾವು, 27 ಲಕ್ಷ ಮಂದಿಗೆ ಸೋಂಕು!

ಜಗತ್ತಿನಾದ್ಯಂತ ಕೊರೋನಾ ಆರ್ಭಟ ಮುಂದುವರೆದಿದ್ದು ಕಳೆದ 24 ಗಂಟೆಯಲ್ಲಿ 5 ಸಾವಿರ ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ 1,89 ಲಕ್ಷಕ್ಕೇರಿದೆ. ಇನ್ನು 64 ಸಾವಿರ ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು ಒಟ್ಟಾರೆ ಸೋಂಕಿತರ ಸಂಖ್ಯೆ 27 ಲಕ್ಷಕ್ಕೇರಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಜಗತ್ತಿನಾದ್ಯಂತ ಕೊರೋನಾ ಆರ್ಭಟ ಮುಂದುವರೆದಿದ್ದು ಕಳೆದ 24 ಗಂಟೆಯಲ್ಲಿ 5 ಸಾವಿರ ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ 1,89 ಲಕ್ಷಕ್ಕೇರಿದೆ. ಇನ್ನು 64 ಸಾವಿರ ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು ಒಟ್ಟಾರೆ ಸೋಂಕಿತರ ಸಂಖ್ಯೆ 27 ಲಕ್ಷಕ್ಕೇರಿದೆ. 

ಅಮೆರಿಕದಲ್ಲಿ ಕೊರೋನಾ ಮರಣ ಮೃದಂಗ ಬಾರಿಸಿದ್ದು ಒಂದೇ ದಿನ 1 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಅಮೆರಿಕದಲ್ಲಿ ಒಟ್ಟು 49 ಸಾವಿರ ಮಂದಿ ಬಲಿಯಾಗಿದ್ದಾರೆ. ಇನ್ನು ಇಟಲಿಯಲ್ಲಿ 25 ಸಾವಿರ, ಸ್ಪೇನ್ ನಲ್ಲಿ 22 ಸಾವಿರ, ಫ್ರಾನ್ಸ್ ನಲ್ಲಿ 21,856 ಮಂದಿ ಹಾಗೂ ಇಂಗ್ಲೆಂಡ್ ನಲ್ಲಿ 18,738 ಮಂದಿ ಮೃತಪಟ್ಟಿದ್ದಾರೆ. 

ಜಗತ್ತಿನಾದ್ಯಂತ 17,70,153 ಮಂದಿ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 58 ಸಾವಿರ ಮಂದಿಯ ಪರಿಸ್ಥಿತಿ ಗಂಭೀರವಾಗಿದೆ. ಇನ್ನು 7,40,379 ಮಂದಿ ಗುಣಮುಖರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com