ವಿಶ್ವಾದ್ಯಂತ 1,90,000 ಮಂದಿ ಕೊರೋನಾಗೆ ಬಲಿ, 2.7 ಮಿಲಿಯನ್ ದಾಟಿದ ಸೋಂಕಿತರ ಸಂಖ್ಯೆ 

ಕೊರೋಣಾವೈರಸ್ ಸಾಂಕ್ರಾಮಿಕ ರೋಗದಿಂದ ಶುಕ್ರವಾರದವರೆಗೆ ವಿಶ್ವದಾದ್ಯಂತ ಮೃತಪಟ್ಟವರ ಸಂಖ್ಯೆ 190,000 ದಾಟಿದೆ,. ಇದರಲ್ಲಿ ಯುರೋಪ್ ಖಂಡವೊಂದರಲ್ಲೇ ಸುಮಾರು ಮೂರನೇ ಎರಡರಷ್ಟು ಸಾವುನೋವುಗಳು ಸಂಭವಿಸಿವೆ ಎಂದು ಎಎಫ್‌ಪಿ ನ್ಯೂಸ್ ಏಜನ್ಸಿ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪ್ಯಾರೀಸ್: ಕೊರೋಣಾವೈರಸ್ ಸಾಂಕ್ರಾಮಿಕ ರೋಗದಿಂದ ಶುಕ್ರವಾರದವರೆಗೆ ವಿಶ್ವದಾದ್ಯಂತ ಮೃತಪಟ್ಟವರ ಸಂಖ್ಯೆ 190,000 ದಾಟಿದೆ,. ಇದರಲ್ಲಿ ಯುರೋಪ್ ಖಂಡವೊಂದರಲ್ಲೇ ಸುಮಾರು ಮೂರನೇ ಎರಡರಷ್ಟು ಸಾವುನೋವುಗಳು ಸಂಭವಿಸಿವೆ ಎಂದು ಎಎಫ್‌ಪಿ ನ್ಯೂಸ್ ಏಜನ್ಸಿ ಹೇಳಿದೆ.

ಡಿಸೆಂಬರ್‌ನಲ್ಲಿ ಚೀನಾದಲ್ಲಿ ವೈರಸ್ ಕಾಣಿಸಿಕೊಂಡಂದಿನಿಂದಲೂ ಒಟ್ಟು 190,089 ಜನರು ಸಾವನ್ನಪ್ಪಿದ್ದಾರೆ ಮತ್ತು 2,698,733 ಜನರು ಸೋಂಕಿಗೆ ಒಳಗಾಗಿದ್ದಾರೆ.

ಇದರಲ್ಲಿ ಯುರೋಪಿನಲ್ಲಿ 116,221 ಮಂದಿ ಸಾವನ್ನಪ್ಪಿದ್ದರೆ 1,296,248  ಮಂದಿ ಸೋಂಕಿಗೆ ಒಳಗಾಗಿದ್ದಾರೆ.

ಅಮೆರಿಕಾದಲ್ಲಿ 49,963  ಮಂದಿ ಸಾವನ್ನಪ್ಪಿದ್ದರೆ ಇಟಲಿಯಲ್ಲಿ 25,549, ಸ್ಪೇನ್ ನಲ್ಲಿ 22,157, ಫ್ರಾನ್ಸ್ ನಲ್ಲಿ  21,856 ಹಾಗೂ ಬ್ರಿಟನ್ ನಲ್ಲಿ 18,738 ಮಂದಿ ಸಾವಿಗೀಡಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com