ಅಂದು ಆರ್ಥಿಕ ಮಹಾಕುಸಿತ, ಇಂದು ಕೊರೋನಾ-ನಿರುದ್ಯೋಗ ಸಮಸ್ಯೆಯಿಂದ ತತ್ತರಿಸಿದ ದೊಡ್ಡಣ್ಣ ಅಮೆರಿಕಾ!

ಅಮೆರಿಕಾದಲ್ಲಿ 1930 ರ ಮಹಾ ಆರ್ಥಿಕ ಕುಸಿತದ ನಂತರದಲ್ಲಿ ಇದೇ ಮೊದಲ ಬಾರಿಗೆ ನಿರುದ್ಯೋಗ ಸಮಸ್ಯೆ ಅತ್ಯಂತ ಹೆಚ್ಚಾಗಿ ಕಾಣಿಸಿದೆ. ಕೊರೋನಾವೈರಸ್ ಹಾವಳಿಯ ಕಾರಣ ಅಮೆರಿಕಾದಲ್ಲಿ 6 ಮಂದಿಯಲ್ಲಿ ಒಬ್ಬನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಆರ್ಥಿಕ ಬಿಕ್ಕಟ್ಟಿನ ಕಾರಣ ಅಮೆರಿಕಾ ಸಂಸತ್ತು  ಸುಮಾರು 500 ಶತಕೋಟಿ ಡಾಲರ್ ವೆಚ್ಚದ ಪ್ಯಾಕೇಜ್ ಅನ್ನು ಅಂಗೀಕರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಅಮೆರಿಕಾದಲ್ಲಿ 1930 ರ ಮಹಾ ಆರ್ಥಿಕ ಕುಸಿತದ ನಂತರದಲ್ಲಿ ಇದೇ ಮೊದಲ ಬಾರಿಗೆ ನಿರುದ್ಯೋಗ ಸಮಸ್ಯೆ ಅತ್ಯಂತ ಹೆಚ್ಚಾಗಿ ಕಾಣಿಸಿದೆ. ಕೊರೋನಾವೈರಸ್ ಹಾವಳಿಯ ಕಾರಣ ಅಮೆರಿಕಾದಲ್ಲಿ 6 ಮಂದಿಯಲ್ಲಿ ಒಬ್ಬನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಆರ್ಥಿಕ ಬಿಕ್ಕಟ್ಟಿನ ಕಾರಣ ಅಮೆರಿಕಾ ಸಂಸತ್ತು  ಸುಮಾರು 500 ಶತಕೋಟಿ ಡಾಲರ್ ವೆಚ್ಚದ ಪ್ಯಾಕೇಜ್ ಅನ್ನು ಅಂಗೀಕರಿಸಿದೆ.

ಕಳೆದ ವಾರ 4.4 ಮಿಲಿಯನ್‌ಗಿಂತಲೂ ಹೆಚ್ಚು ಅಮೆರಿಕನ್ನರು ನಿರುದ್ಯೋಗ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಸರ್ಕಾರ ವರದಿ ಮಾಡಿದೆ.

ಒಟ್ಟಾರೆಯಾಗಿ, ಸರಿಸುಮಾರು 26 ಮಿಲಿಯನ್ ಜನರು- ಅಮೆರಿಕಾದ 10 ದೊಡ್ಡ ನಗರಗಳ ಜನಸಂಖ್ಯೆ- ಈ ಐದು ವಾರಗಳಲ್ಲಿ ನಿರುದ್ಯೋಗ ಸಹಾಯಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅತ್ಯಂತ ಕಠಿಣ ಸನ್ನಿವೇಶದಲ್ಲಿ ನ್ಯೂಯಾರ್ಕ್ ರಾಜ್ಯದ ಬಹುತೇಕ  2.7 ಮಿಲಿಯನ್ ನಿವಾಸಿಗಳು ವೈರಸ್ ಸೋಂಕಿಗೆ ತುತ್ತಾಗಿದ್ದಾರೆ ಎನ್ನುವುದು ತಿಳಿದುಬಂದಿದ್ದು  ಸುಮಾರು 3,000 ಜನರ ರಾಜ್ಯವ್ಯಾಪಿ ನಡೆಸಿದ ಒಂದು ಸಣ್ಣ, ಪ್ರಾಥಮಿಕ ಸಮೀಕ್ಷೆಯಲ್ಲಿ ಸುಮಾರು 14 ಶೇಕಡಾ ಜನಫ಼್ರು ಸೋಂಕಿಗೆ ಒಳಗಾಗಿದ್ದಾರೆ ಎಂದು ಕಂಡುಹಿಡಿದಿದೆ ಕೇವಲ 8.6 ಮಿಲಿಯನ್ ಜನಸಂಖ್ಯೆ ಹೊಂದಿರುವ ನ್ಯೂಯಾರ್ಕ್ ನಗರದಲ್ಲಿ, ಅಲ್ಲಿನ ಆರೋಗ್ಯ ಆಯುಕ್ತ ಆಕ್ಸಿರಿಸ್ ಬಾರ್ಬೋಟ್ ಅವರು 1 ಮಿಲಿಯನ್ ಜನರು ಸೋಂಕಿಗೆ ಒಳಗಾಗಬಹುದು ಎಂದು ಅಂದಾಜಿಸಿದ್ದಾರೆ.

ವಾಷಿಂಗ್ಟನ್‌ನಲ್ಲಿ, ಅನೇಕ  ಸಂಸದರು  ಫೇಸ್ ಮಾಸ್ಕ್ ಮತ್ತು ಬ್ಯಾಂಡನ್ನಾಗಳನ್ನು ಧರಿಸಿದ್ದರು ಮತ್ತು ಕೆಲವರು ಖಾಲಿ ಇರುವ ಸಂದರ್ಶಕರ ಗ್ಯಾಲರಿಯಲ್ಲಿ ಇತರ ಖರ್ಚು ಪ್ಯಾಕೇಜ್ ಕುರಿತು ಚರ್ಚಿಸುತ್ತಿರುವಾಗ  ಅಂತರ ಕಾಯ್ದುಕೊಂಡಿದ್ದಾರೆ.

ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳಿಗೆ ವೇತನದಾರರ, ಬಾಡಿಗೆ ಮತ್ತು ಇತರ ವೆಚ್ಚಗಳನ್ನು ಕಡಿಮೆಮಾಡಲು ನಿಧಿಯನ್ನು ಮರುಪೂರಣಗೊಳಿಸುವ ನಿಧಿಗಾಗಿ 250 ಬಿಲಿಯನ್ ಡಾಲರ್ ಗೆ ಬೇಡಿಕೆ ಇಡಲಾಗಿದೆ.ಈ ಮಸೂದೆ "ಲಕ್ಷಾಂತರ ಕಾರ್ಮಿಕರನ್ನು ವೇತನದಾರರ ಪಟ್ಟಿಯಲ್ಲಿಡಲು ಸಣ್ಣ ಉದ್ಯಮಗಳಿಗೆ ಸಹಾಯ ಮಾಡುತ್ತದೆ" ಎಂದು ಟ್ರಂಪ್ ಹೇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com