ಪ್ರತಿಕಾಯಗಳು ಕೊರೋನಾ ಎರಡನೇ ಸುತ್ತಿನ ಹರಡುವಿಕೆ ತಡೆಗಟ್ಟುತ್ತವೆ ಎಂಬ ಖಾತರಿ ಇಲ್ಲ: ವಿಶ್ವ ಆರೋಗ್ಯ ಸಂಸ್ಥೆ 

ಕೋವಿಡ್-19 ರೋಗದ ಸ್ವರೂಪ ದಿನದಿಂದ ದಿನಕ್ಕೆ ಬದಲಾವಣೆಯಾಗುತ್ತಿದೆ. ಇತ್ತ ಮದ್ದನ್ನೂ ಕಂಡು ಹಿಡಿಯಲು ಸಾಧ್ಯವಾಗದೇ ಅತ್ತ ಹರಡುವಿಕೆಯನ್ನೂ ತಡೆಯಲಾಗದ ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿದೆ ಜಾಗತಿಕ ಸಮುದಾಯ. 
ಕೊರೋನಾ ವೈರಸ್
ಕೊರೋನಾ ವೈರಸ್

ನ್ಯೂಯಾರ್ಕ್: ಕೋವಿಡ್-19 ರೋಗದ ಸ್ವರೂಪ ದಿನದಿಂದ ದಿನಕ್ಕೆ ಬದಲಾವಣೆಯಾಗುತ್ತಿದೆ. ಇತ್ತ ಮದ್ದನ್ನೂ ಕಂಡು ಹಿಡಿಯಲು ಸಾಧ್ಯವಾಗದೇ ಅತ್ತ ಹರಡುವಿಕೆಯನ್ನೂ ತಡೆಯಲಾಗದ ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿದೆ ಜಾಗತಿಕ ಸಮುದಾಯ. 

ಈ ಪರಿಸ್ಥಿತಿಯ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಮತ್ತಷ್ಟು ಎಚ್ಚರಿಕೆ ನೀಡಿದ್ದು, ಒಮ್ಮೆ ಕೋವಿಡ್ ನಿಂದ ಗುಣಮುಖವಾಗಿ ವೈರಸ್ ವಿರುದ್ಧ ಹೋರಾಡಬಲ್ಲ ಪ್ರತಿಕಾಯಗಳನ್ನು ಗಳಿಸಿಕೊಂಡ ವ್ಯಕ್ತಿ ಎರಡನೇ ಸುತ್ತಿನ ಹರಡುವಿಕೆಯಿಂದ ಪಾರಾಗಬಹುದೆಂಬ ಖಾತರಿ ಇಲ್ಲ ಎಂದು ಹೇಳಿದೆ. 

ಕೋವಿಡ್ ನಿಂದ ಗುಣಮುಖರಾದವರಲ್ಲಿ ವೈರಾಣು ವಿರುದ್ಧ ಹೋರಾಟ ಮಾಡುವ ಪ್ರತಿಕಾಯಗಳಿರುತ್ತವೆ ಎಂಬುದು ಹಲವಾರು ಸಂಶೋಧನೆಗಳ ಮೂಲಕ ಸಾಬೀತಾಗಿದೆ. ಆದರೆ ಈ ಪೈಕಿ ಹಲವರಿಗೆ ಪ್ರತಿಕಾಯಗಳನ್ನು ರಕ್ತದಲ್ಲಿ ಸಮತೋಲನಗೊಳಿಸುವ ಮಟ್ಟ ಕಡಿಮೆ ಇರುತ್ತದೆ. ಹೀಗಾಗಿ ಪ್ರತಿಕಾಯಗಳು ಎರಡನೇ ಸುತ್ತಿನ ಹರಡುವಿಕೆ ತಡೆಗಟ್ಟುತ್ತವೆ ಎಂಬುದಕ್ಕೆ ಖಾತರಿ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com