ಅಮೆರಿಕಾದಲ್ಲಿ ಪ್ರತಿ 7ನೇ ವೈದ್ಯ ಭಾರತೀಯ, ಕೋವಿಡ್ ವಿರುದ್ಧ ಸೈನಿಕರಂತೆ ಹೋರಾಟ!  

ಅಮೆರಿಕಾದಲ್ಲಿ ಕೋವಿಡ್-19 ಗೆ ಚಿಕಿತ್ಸೆ ನೀಡುತ್ತಿರುವ ಭಾರತೀಯ ವೈದ್ಯರಿಗೆ ಗೌರವ ದೊರೆತ ಸುದ್ದಿ ಇತ್ತೀಚೆಗೆ ವೈರಲ್ ಆಗಿತ್ತು. ಈಗ ಭಾರತೀಯರು ಹೆಮ್ಮೆ ಪಡುವಂತಹ ಮತ್ತೊಂದು ಅಂಶ ಬೆಳಕಿಗೆ ಬಂದಿದೆ. 
ಅಮೆರಿಕಾದಲ್ಲಿ ಪ್ರತಿ 7 ನೇ ವೈದ್ಯ ಭಾರತೀಯ, ಕೋವಿಡ್ ವಿರುದ್ಧ ಸೈನಿಕರಂತೆ ಹೋರಾಟ!
ಅಮೆರಿಕಾದಲ್ಲಿ ಪ್ರತಿ 7 ನೇ ವೈದ್ಯ ಭಾರತೀಯ, ಕೋವಿಡ್ ವಿರುದ್ಧ ಸೈನಿಕರಂತೆ ಹೋರಾಟ!

ನ್ಯೂಯಾರ್ಕ್: ಅಮೆರಿಕಾದಲ್ಲಿ ಕೋವಿಡ್-19 ಗೆ ಚಿಕಿತ್ಸೆ ನೀಡುತ್ತಿರುವ ಭಾರತೀಯ ವೈದ್ಯರಿಗೆ ಗೌರವ ದೊರೆತ ಸುದ್ದಿ ಇತ್ತೀಚೆಗೆ ವೈರಲ್ ಆಗಿತ್ತು. ಈಗ ಭಾರತೀಯರು ಹೆಮ್ಮೆ ಪಡುವಂತಹ ಮತ್ತೊಂದು ಅಂಶ ಬೆಳಕಿಗೆ ಬಂದಿದೆ. 

ಅಮೆರಿಕಾದಲ್ಲಿ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಪೈಕಿ ಪ್ರತಿ 7 ನೇಯ ವೈದ್ಯರು ಭಾರತೀಯ ಮೂಲದವರಾಗಿದ್ದಾರೆ. ಈ ಮೂಲಕ ಅಮೆರಿಕಾದಲ್ಲಿ ಭಾರತೀಯ ಮೂಲದ ವೈದ್ಯರು ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. 
 
ಈ ಬಗ್ಗೆ ಭಾರತೀಯ ಮೂಲದ ಅಮೆರಿಕ ವೈದ್ಯರ ಸಂಘಟನೆಯ ಅಧ್ಯಕ್ಷ ಡಾ.ಸುರೇಶ್ ರೆಡ್ಡಿ ಮಾತನಾಡಿದ್ದು, ಕೋವಿಡ್-19 ವಿರುದ್ಧ ಹೋರಾಟ ನಡೆಸುತ್ತಿರುವ ಭಾರತೀಯ ಸಮುದಾಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಅಮೆರಿಕಾದಲ್ಲಿ ಕೋವಿಡ್-19 ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರ ಪೈಕಿ ಪ್ರತಿ 7 ನೇ ವೈದ್ಯ ಭಾರತೀಯರಾಗಿದ್ದು, ಸೈನಿಕರಂತೆ ಹೋರಾಡುತ್ತಿದ್ದಾರೆ ಎಂದು ಹೇಳಿದ್ದಾರೆ. 

ಇದೇ ವೇಳೆ ಕೋವಿಡ್-19 ಗೆ ಸಂಬಂಧಪಟ್ಟಂತೆ ಬೇರೆ ವಿಷಯಗಳ ಬಗ್ಗೆಯೂ ಮಾತನಾಡಿದ್ದು, ವಿಶ್ವಾದ್ಯಂತ ಇರುವ ಸರ್ಕಾರಗಳು ಲಾಕ್ ಡೌನ್ ನ್ನು ಏಕಾ ಏಕಿ ತೆರವುಗೊಳಿಸಿ ಆರ್ಥಿಕತೆಯನ್ನು ಪುನಾರಂಭ ಮಾಡುವುದಕ್ಕೆ ಸಾಧ್ಯವಿಲ್ಲ ಒಂದು ವೇಳೆ ಆ ರೀತಿ ಮಾಡಿದರೆ ಅದರಿಂದ ಉಂಟಾಗುವ ಅನಾಹುತ ದೊಡ್ಡದಿರಲಿದೆ ಎಂದು ಎಚ್ಚರಿಸಿದ್ದಾರೆ. 

ಕೊರೋನಾ ವಿರುದ್ಧದ ಹೋರಾಟ ದೀರ್ಘವಾದದ್ದು, ಅದು ಕೆಲವೇ ತಿಂಗಳುಗಳಲ್ಲಿ ಮುಗಿಯುವಂಥದ್ದಲ್ಲ 1-2 ವರ್ಷಗಳ ಕಾಲ, ಮದ್ದು ಸಿಗುವವರೆಗೂ ಹೋರಾಟ ಮುಂದುವರೆಯಲಿದೆ. ಹರಡುವಿಕೆ ನಿಯಂತ್ರಣ ಸರ್ಕಾರ ಕೈಗೊಳ್ಳುವ ಕ್ರಮಗಳು, ವೈದ್ಯರ ಶ್ರಮ, ಜೊತೆಗೆ ನಿಯಮಗಳನ್ನು ಪಾಲಿಸುವ ಜನರಿಂದ ಮಾತ್ರ ಕೋವಿಡ್-19 ರ ವಿರುದ್ಧದ ಹೋರಾಟದಲ್ಲಿ ಗೆಲುವು ಸಾಧ್ಯ ಎಂದು ಸುರೇಶ್ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com