ಹೋರಾಟದ ಛಲ! ಕ್ಯಾನ್ಸರ್, ಕೋವಿಡ್-19 ನಿಂದ ಗೆದ್ದು ಬಂದ ನಾಲ್ಕು ವರ್ಷದ ಪೋರಿ!

ಭಾರತೀಯ ಮೂಲದ ದುಬೈನಲ್ಲಿರುವ ನಾಲ್ಕು ವರ್ಷದ ಬಾಲಕಿ ಕ್ಯಾನ್ಸರ್ ನಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಕೋವಿಡ್-19 ಸೋಂಕು ತಗುಲಿದೆ. ಇದೀಗ ಅದರಿಂದಲೂ ಗುಣಮುಖವಾಗಿದ್ದು,ಯುಎಇನಲ್ಲಿ ಕೊರೋನಾವೈರಸ್ ನಿಂದ ಗೆದ್ದು ಬಂದ ಪುಟ್ಟ ಪೋರಿ ಎನ್ನಿಸಿಕೊಂಡಿದ್ದಾಳೆ.
ಮುಖಕ್ಕೆ ಮಾಸ್ಕ್ ಧರಿಸಿರುವ ಬಾಲಕಿ
ಮುಖಕ್ಕೆ ಮಾಸ್ಕ್ ಧರಿಸಿರುವ ಬಾಲಕಿ

ದುಬೈ: ಭಾರತೀಯ ಮೂಲದ ದುಬೈನಲ್ಲಿರುವ ನಾಲ್ಕು ವರ್ಷದ ಬಾಲಕಿ ಕ್ಯಾನ್ಸರ್ ನಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಕೋವಿಡ್-19 ಸೋಂಕು ತಗುಲಿದೆ. ಇದೀಗ ಅದರಿಂದಲೂ ಗುಣಮುಖವಾಗಿದ್ದು,ಯುಎಇನಲ್ಲಿ ಕೊರೋನಾವೈರಸ್ ನಿಂದ ಗೆದ್ದು ಬಂದ ಪುಟ್ಟ ಪೋರಿ ಎನ್ನಿಸಿಕೊಂಡಿದ್ದಾಳೆ.

ಶಿವಾನಿ, ಕೋವಿಡ್-19 ವಿರುದ್ಧ ಹೋರಾಡಿ ಗೆದ್ದು ಬಂದಿರುವ ಬಾಲಕಿ. ಆರೋಗ್ಯ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿರುವ ತನ್ನ ತಾಯಿ ಮೂಲಕ ಸೋಂಕು ತಗುಲಿದ ನಂತರ ಏಪ್ರಿಲ್ 1 ರಂದು  ಅಲ್ ಫುಟ್ಟೈಮ್ ಹೆಲ್ತ್ ಹಬ್ ನಲ್ಲಿ ದಾಖಲಾಗಿದ್ದರು ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

ಶಿವಾನಿ ಹಾಗೂ ಆಕೆಯ ತಂದೆಯನ್ನು ಪರೀಕ್ಷೆಗೊಳಪಡಿಸಿದಾಗ ಯಾವುದೇ ರೋಗಲಕ್ಷಣಗಳು ಕಂಡುಬಾರದಿದ್ದರೂ ಪಾಸಿಟಿವ್ ಬಂದಿದೆ ಎಂದು ವರದಿಗಳು ತಿಳಿಸಿವೆ.

ಶಿವಾನಿ ಹಾಗೂ ಆಕೆಯ ತಾಯಿಗೆ ಒಂದೇ ರೀತಿಯ ಸೌಲಭ್ಯ ನೀಡಲಾಗುತಿತ್ತು. ಆದರೆ, ಕಿಡ್ನಿ ಕ್ಯಾನ್ಸರ್ ನಿಂದ ಬದುಕುಳಿದಿರುವ ಶಿವಾನಿಗೆ ಹೆಚ್ಚಿನ ಮುಂಜಾಗ್ರತೆ ವಹಿಸಲಾಗಿತ್ತು. ಶಿವಾನಿಯನ್ನು ಏಪ್ರಿಲ್ 20ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ 

ಕಳೆದ ವರ್ಷ ಕೆಮೊ ಥೆರಪಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿಸಿರುವ ಶಿವಾನಿಗೆ ಈಗಲೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದಾಗಿ  ವೈದ್ಯ ಡಾ. ಥೋಲ್ಫ್ಕರ್ ಅಲ್ ಬಾಜ್ ಹೇಳಿದ್ದಾರೆ.  ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರಿಂದ ಶಿವಾನಿ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿತ್ತು. ಸೋಂಕಿನಿಂದ ಆಕೆಗೆ ಯಾವುದೇ ತೊಂದರೆಯಾಗಲಿಲ್ಲ ಎಂದು ಅವರು ತಿಳಿಸಿದ್ದಾರೆ. 

ಶಿವಾನಿಗೆ ಸ್ವಾಬ್ ಪರೀಕ್ಷೆಯಲ್ಲಿ ಸತತ ಎರಡು ಬಾರಿ ನೆಗೆಟಿವ್ ಬಂದ ನಂತರ 20 ದಿನಗಳ ಕಾಲ ಚಿಕಿತ್ಸೆ ನೀಡಲಾಗಿದೆ. ಇದೀಗ 14 ದಿನಗಳ ಹೋಮ್ ಕ್ವಾರಂಟೈನಲ್ಲಿ ಇಡಲಾಗಿದೆ. ಆಕೆಯ ತಾಯಿಗೂ ಚಿಕಿತ್ಸೆ ಪೂರ್ಣಗೊಂಡಿದೆ. ಆದರೆ, ವೀಕ್ಷಣೆಯಲ್ಲಿಡಲಾಗಿದ್ದು, ಸದ್ಯದಲ್ಲಿಯೇ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com