ಕೊರೋನಾ ಪ್ರಭಾವ: ವಿಶ್ವದೆಲ್ಲೆಡೆ ಒಂದೇ ದಿನ 4,982 ಮಂದಿ ಬಲಿ, 30 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆ

ವಿಶ್ವದೆಲ್ಲೆಡೆ ಕೊರೋನಾ ಪ್ರಭಾವ ಏರಿಕೆಯಾಗುತ್ತಲೇ ಇದ್ದು, ಕೇವಲ 24 ಗಂಟೆಗಳಲ್ಲಿ 4,982 ಮಂದಿ ಬಲಿಯಾಗಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜಿನೆವಾ: ವಿಶ್ವದೆಲ್ಲೆಡೆ ಕೊರೋನಾ ಪ್ರಭಾವ ಏರಿಕೆಯಾಗುತ್ತಲೇ ಇದ್ದು, ಕೇವಲ 24 ಗಂಟೆಗಳಲ್ಲಿ 4,982 ಮಂದಿ ಬಲಿಯಾಗಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. 

24 ಗಂಟೆಗಳಲ್ಲಿ 4,982 ಮಂದಿ ವೈರಸ್ ನಿಂದ ಸಾವನ್ನಪ್ಪಿದ್ದು, ಒಂದೇ ದಿನದಲ್ಲಿ  85,530 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದೆ. 

ಇನ್ನು ವಿಶ್ವದಾದ್ಯಂತ 30 ಲಕ್ಷ ಗಡಿಯತ್ತ ಸೋಂಕಿತರ ಸಂಖ್ಯೆ ಸಾಗುತ್ತಿದ್ದು, ಸಾವಿನ ಸಂಖ್ಯೆ 2,11,537ಕ್ಕೆ ಏರಿಕೆಯಾಗಿದೆ. ಯೂರೋಪ್ ಒಂದೇ ರಾಷ್ಟ್ರದಲ್ಲಿ 1,359,380 ಮಂದಿಯಲ್ಲಿ ಸೋಂಕು ಕಾಣಸಿಕೊಂಡಿದ್ದು, 124,525 ಡನರು ಸಾವನ್ನಪ್ಪಿದ್ದಾರೆ. ಇನ್ನು ಅಮೆರಿಕಾದಲ್ಲಿ 1,140,520 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದರೆ, 58,492 ಮಂದಿ ಸಾವನ್ನಪ್ಪಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com