ಕೊರೋನಾದಿಂದ ಬಚಾವಾಗಲು ವಿಷಕಾರಿ ಮಿಥೇನಾಲ್ ಸೇವನೆ: 700 ಮಂದಿ ದುರ್ಮರಣ

ಕೆಮಿಕಲ್ ಸೇವಿಸಿದರೆ ಕೊರೋನಾ ವೈರಸ್ ಗುಣಪಡಿಸಬಹುದು ಎಂಬ ಮೂಢನಂಬಿಕೆಯಿಂದ ವಿಷಕಾರಿ ಮಿಥೇನಾಲ್  ಸೇವಿಸಿದ ಸುಮಾರು 700 ಮಂದಿ ಸಾವನ್ನಪ್ಪಿರುವ ಘಟನೆ ಇರಾನ್ ನಲ್ಲಿ ನಡೆದಿದೆ.

Published: 29th April 2020 01:00 PM  |   Last Updated: 29th April 2020 01:47 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Shilpa D
Source : AFP

ತೆಹ್ರಾನ್: ಕೆಮಿಕಲ್ ಸೇವಿಸಿದರೆ ಕೊರೋನಾ ವೈರಸ್ ಗುಣಪಡಿಸಬಹುದು ಎಂಬ ಮೂಢನಂಬಿಕೆಯಿಂದ ವಿಷಕಾರಿ ಮಿಥೇನಾಲ್  ಸೇವಿಸಿದ ಸುಮಾರು 700 ಮಂದಿ ಸಾವನ್ನಪ್ಪಿರುವ ಘಟನೆ ಇರಾನ್ ನಲ್ಲಿ ನಡೆದಿದೆ. ಇರಾನ್ ನಲ್ಲಿ ಸೋಂಕಿತರ ಸಂಖ್ಯೆ 91 ಸಾವಿರ ಗಡಿ ದಾಟಿದ್ದು 5 ಸಾವಿರ ಜನರು ಮರಣ ಹೊಂದಿದ್ದಾರೆ ಎಂದು ಇರಾನ್ ಆರೋಗ್ಯ ಇಲಾಖೆ ತಿಳಿಸಿದೆ. 

ಈ ರೀತಿ ವಿಷಕಾರಿ ಆಲ್ಕೋಹಾಲ್ ಸೇವಿಸಿ ಸತ್ತಿರುವವರ ಸಂಖ್ಯೆ ಶೇ.10 ರಷ್ಟು ಹೆಚ್ಟಾಗಿದೆ ಎಂದು ಇರಾನ್ ಸರ್ಕಾರ ತಿಳಿಸಿದೆ. ನೂರಕ್ಕೂ ಹೆಚ್ಚಿನವರಲ್ಲಿ ದೃಷ್ಟಿ ಹೀನತೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿವೆ ಎಂದು ಇರಾನ್ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕಳೆದ ಫೆಬ್ರವರಿಯಿಂದ ಏಪ್ರಿಲ್ 7ರ ವರೆಗೆ ಸುಮಾರು 728 ಮಂದಿ ಬಲಿಯಾಗಿದ್ದಾರೆ. ಮಿಥೇನಾಲ್ ಎಂಬುದು ವಾಸನೆ ಇರುವುದಿಲ್ಲ. ಜೊತೆಗೆ ರುಚಿಯೂ ಇರುವುದಿಲ್ಲ, ಇದರಲ್ಲಿ ಟಾಕ್ಸಿಕ್ ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಆಲ್ಕೋಹಾಲಿಕ್ ದ್ರವಣಗಳಲ್ಲಿ ಅಕ್ರಮವಾಗಿ ಇರಾನ್ ನಲ್ಲಿ ಇದನ್ನು ಬಳಸಲಾಗುತ್ತಿದೆ.

Stay up to date on all the latest ಅಂತಾರಾಷ್ಟ್ರೀಯ news
Poll
Defence minister Rajanath Singh

101 ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ನಿರ್ಬಂಧ ಹೇರುವ ಭಾರತದ ಕ್ರಮವು, ದೇಶೀಯ ಶಸ್ತ್ರಾಸ್ತ್ರ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆಯೆ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp