ಕೋವಿಡ್-19: ಗರ್ಭನಿರೋಧಕಗಳ ಪೂರೈಕೆಯಲ್ಲಿ ವ್ಯತ್ಯಯ; 7 ದಶಲಕ್ಷ ಅನಪೇಕ್ಷಿತ ಗರ್ಭಧಾರಣೆ ಸಾಧ್ಯತೆ!

ಮಹಾಮಾರಿ ಕೊರೋನಾದಿಂದಾಗಿ ಜಗತ್ತಿನಾದ್ಯಂತ ಸಾವು-ನೋವುಗಳು ಸಂಭವಿಸುತ್ತಿದ್ದು ಇದರ ಮಧ್ಯೆ ಕೊರೋನಾ ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಬರೋಬ್ಬರಿ 70 ಲಕ್ಷ ಮಹಿಳೆಯರು ಗರ್ಭ ಧರಿಸಲಿದ್ದು ಈ ಮೂಲಕ ಜನಸಂಖ್ಯೆ ಮತ್ತಷ್ಟು ಸ್ಫೋಟದ ಸಾಧ್ಯತೆಯೂ ಎದುರಾಗಲಿದೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.
ಗರ್ಭಿಣಿಯರು
ಗರ್ಭಿಣಿಯರು

ವಿಶ್ವಸಂಸ್ಥೆ: ಮಹಾಮಾರಿ ಕೊರೋನಾದಿಂದಾಗಿ ಜಗತ್ತಿನಾದ್ಯಂತ ಸಾವು-ನೋವುಗಳು ಸಂಭವಿಸುತ್ತಿದ್ದು ಇದರ ಮಧ್ಯೆ ಕೊರೋನಾ ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಬರೋಬ್ಬರಿ 70 ಲಕ್ಷ ಮಹಿಳೆಯರು ಗರ್ಭ ಧರಿಸಲಿದ್ದು ಈ ಮೂಲಕ ಜನಸಂಖ್ಯೆ ಮತ್ತಷ್ಟು ಸ್ಫೋಟದ ಸಾಧ್ಯತೆಯೂ ಎದುರಾಗಲಿದೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ. 

ಮುಂಬರುವ ತಿಂಗಳಲ್ಲಿ ಜಗತ್ತಿನಾದ್ಯಂತ ಕಡಿಮೆ ಮತ್ತು ಮಧ್ಯಮ ಆದಾಯ ಇರುವ ದೇಶಗಳ ಸುಮಾರು ಏಳು ಲಕ್ಷ ಸ್ತ್ರೀಯರು ಗರ್ಭಿಣಿಯರಾಗಲಿದ್ದಾರೆ. ಇದಕ್ಕೆ ಕಾರಣ ಕೊರೋನಾ ಲಾಕ್ ಡೌನ್ ಎಂದು ವಿಶ್ವಸಂಸ್ಥೆಯ ಅಧ್ಯಯನದಲ್ಲಿ ತಿಳಿದುಬಂದಿದೆ.

ಗರ್ಭನಿರೋಧಕಗಳ ಪೂರೈಕೆಯಲ್ಲಿ ವ್ಯತ್ಯಯ ಮತ್ತು ಅದು ಸಕಾಲಕ್ಕೆ ಜನರಿಗೆ ಲಭಿಸದೇ ಇರುವ ಕಾರಣ ಮಹಿಳೆಯರು ಇಚ್ಛೆ ಇಲ್ಲದಿದ್ದರೂ ಗರ್ಭವತಿಯಾಗಲಿದ್ದಾರೆ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ(ಯುಎನ್ಎಫ್ಪಿಎ) ದತ್ತಾಂತ ಬಿಡುಗಡೆ ಮಾಡಿದೆ. 

ಲಾಕ್ ಡೌನ್ ಬಿಕ್ಕಟ್ಟಿನಿಂದಾಗಿ ಮಹಿಳೆಯರು ಕುಟುಂಬ ಯೋಜನೆ ಪಾಲಿಸಲು ಸಾಧ್ಯವಾಗುತ್ತಿಲ್ಲ. ಇದು ಜಗತ್ತಿನಾದ್ಯಂತ ಲಕ್ಷಾಂತರ ಯುವತಿಯರು ಮತ್ತು ಮಹಿಳೆಯರ ಮೇಲೆ ದುಷ್ಪರಿಣಾಮ ಬೀರಲಿದೆ. ಇದರಿಂದಾಗಿ ಅವರು ಇಷ್ಟವಿಲ್ಲದಿದ್ದರೂ ಗರ್ಭಧರಿಸುವಂತಾಗುತ್ತದೆ. 

ಲಾಕ್ ಡೌನ್ ಅವಧಿಯಲ್ಲಿ ಆಮದು ಮತ್ತು ರಫ್ತು ಸ್ಥಗಿತಗೊಂಡಿರುವುದರಿಂದ ಪುರುಷರು ಮತ್ತು ಮಹಿಳೆಯರಿಗೆ ಗರ್ಭನಿರೋಧಕಗಳು ಲಭ್ಯವಾಗುತ್ತಿಲ್ಲ. ಹೀಗಾಗಿ ಕಡಿಮೆ ಮತ್ತು ಮಧ್ಯಮ ವರಮಾನದ ದೇಶಗಳಲ್ಲಿ 47 ದಶಲಕ್ಷ ಮಹಿಳೆಯರು ಆಧುನಿಕ ಗರ್ಭನಿರೋಧಕಗಳನ್ನು ಬಳಸಲು ಸಾಧ್ಯವಾಗಿಲ್ಲ ಎಂದು ವರದಿಯಲ್ಲಿ ತಿಳಿದುಬಂದಿದೆ. 

ಇಷ್ಟೇ ಅಲ್ಲದೆ ಲಕ್ಷಾಂತರ ಮಹಿಳೆಯರು ಲಿಂಗ ತಾರತಮ್ಯ, ಕೌಟುಂಬಿಕ ದೌರ್ಜನ್ಯ, ಲೈಂಗಿಕ ಹಿಂಸಾಚಾರ ಮತ್ತು ಇತರ ಗಂಭೀರ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ ಎಂದು ಯುಎನ್ಎಫ್ಪಿಎ ಕಾರ್ಯಕಾರಿ ನಿರ್ದೇಶಕಿ ನಟಾಲಿಯಾ ಕನೇಮ್ ತಿಳಿಸಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com