ಅಮೆರಿಕಾ: ಗರ್ಭಿಣಿ ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಭಾರತೀಯ ವ್ಯಕ್ತಿ

ಭಾರತೀಯ ಮೂಲದ 5 ತಿಂಗಳ ಗರ್ಭಿಣಿ ಕೊಲೆಯಾಗಿದ್ದು, ಆಕೆಯ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. 35 ವರ್ಷದ ಗರಿಮಾ ಕೊಠಾರಿಯ ಶವ ಆಕೆಯ ಅಪಾರ್ಟ್ ಮೆಂಟ್ ನಲ್ಲಿ  ಪತ್ತೆಯಾಗಿದ್ದು, ಆಕೆಯ ಪತಿ ಮೋಹನ್ ಮಾಲ್ ಶವ ಹಡ್ಸನ್ ನದಿಯ ದಡದಲ್ಲಿ ಪೊಲೀಸರಿಗೆ ಸಿಕ್ಕಿದೆ
ಭಾರತೀಯ ಮೂಲದ ದಂಪತಿ
ಭಾರತೀಯ ಮೂಲದ ದಂಪತಿ

ಅಮೆರಿಕಾ: ಭಾರತೀಯ ಮೂಲದ 5 ತಿಂಗಳ ಗರ್ಭಿಣಿ ಕೊಲೆಯಾಗಿದ್ದು, ಆಕೆಯ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. 

35 ವರ್ಷದ ಗರಿಮಾ ಕೊಠಾರಿಯ ಶವ ಆಕೆಯ ಅಪಾರ್ಟ್ ಮೆಂಟ್ ನಲ್ಲಿ  ಪತ್ತೆಯಾಗಿದ್ದು, ಆಕೆಯ ಪತಿ ಮೋಹನ್ ಮಾಲ್ ಶವ ಹಡ್ಸನ್ ನದಿಯ ದಡದಲ್ಲಿ ಪೊಲೀಸರಿಗೆ ಸಿಕ್ಕಿದೆ, 

ಆಕೆಯ ದೇಹದ ಮೇಲ್ಭಾಗದಲ್ಲಿ ಗಾಯದ ಗುರುತುಗಳಾಗಿವೆ ಎಂದು ಅಲ್ಲಿನ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ, ಏಪ್ರಿಲ್ 26 ರಂದು  ಇಬ್ಬರ ಶವಗಳು ಪತ್ತೆಯಾಗಿವೆ ಎಂದು ಜೆರ್ಸಿ ಪೊಲೀಸರು ತಿಳಿಸಿದ್ದಾರೆ.

ಗರಿಮಾ ಕೊಠಾರಿ ಮತ್ತು ಮೋಹನ್ ಮಾಲ್ ಇಬ್ಬರು ಅಮೆರಿಕಾದಲ್ಲಿ ಹೋಟೆಲ್ ನಡೆಸುತ್ತಿದ್ದರು, ಇಬ್ಬರ ನಡುವೆ ಯಾವುದೇ ಮನಸ್ತಾಪವಿರಲಿಲ್ಲ ಇಬ್ಬರು ಅನ್ಯೋನ್ಯವಾಗಿದ್ದರು ಎಂದು ಹೊಟೆಲ್ ಸಿಬ್ಬಂದಿ ತಿಳಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com