ಕೋವಿಡ್-19 ವಿರುದ್ಧ ಅಮೆರಿಕಾದ ಹೋರಾಟ 'ಸೂಪರ್', ಭಾರತಕ್ಕೆ 'ಪ್ರಚಂಡ ಸಮಸ್ಯೆ' ಇದೆ: ಟ್ರಂಪ್

ದೊಡ್ಡ ರಾಷ್ಟ್ರಗಳಿಗೆ ಹೋಲಿಸಿದರೆ ಕೋವಿಡ್ 19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಅಮೆರಿಕವು "ಅತ್ಯುತ್ತಮ ರೀತಿಯಲ್ಲಿ" ಕಾರ್ಯನಿರ್ವಹಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ, ಆದರೆ ಭಾರತವು ರೋಗದ ವಿರುದ್ಧ ಹೋರಾಡುವಲ್ಲಿ "ಪ್ರಚಂಡ ಸಮಸ್ಯೆಯನ್ನು" ಎದುರಿಸುತ್ತಿದೆ ಮತ್ತು ಚೀನಾವು  "ಭಾರಿ ಪ್ರಮಾಣದಲ್ಲಿರೋಗದಿಂದ ಆವರಿಸಿಕೊಂಡಿದೆ’

Published: 04th August 2020 03:13 PM  |   Last Updated: 04th August 2020 03:13 PM   |  A+A-


Posted By : Raghavendra Adiga
Source : PTI

ವಾಷಿಂಗ್ ಟನ್: ದೊಡ್ಡ ರಾಷ್ಟ್ರಗಳಿಗೆ ಹೋಲಿಸಿದರೆ ಕೋವಿಡ್ 19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಅಮೆರಿಕವು "ಅತ್ಯುತ್ತಮ ರೀತಿಯಲ್ಲಿ" ಕಾರ್ಯನಿರ್ವಹಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ, ಆದರೆ ಭಾರತವು ರೋಗದ ವಿರುದ್ಧ ಹೋರಾಡುವಲ್ಲಿ "ಪ್ರಚಂಡ ಸಮಸ್ಯೆಯನ್ನು" ಎದುರಿಸುತ್ತಿದೆ ಮತ್ತು ಚೀನಾವು  "ಭಾರಿ ಪ್ರಮಾಣದಲ್ಲಿರೋಗದಿಂದ ಆವರಿಸಿಕೊಂಡಿದೆ’ ಎಂದು ಅವರು ಹೇಳಿದ್ದಾರೆ. 

ಭಾರತದ ಕೋವಿಡ್ 19 ರ ಪ್ರಮಾಣವು ಮಂಗಳವಾರ 18,55,745 ಕ್ಕೆ ಏರಿಕೆಯಾಗಿದ್ದು, ಒಂದು ದಿನದಲ್ಲಿ 52,050 ಜನರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಚೀನಾದಲ್ಲಿ ಮಂಗಳವಾರ 36 ಹೊಸ ಪ್ರಕರಣಗಳು ವರದಿಯಾಗಿದೆ. ಅದಕ್ಕೂ ಹಿಂದಿನ ದಿನ ಅಲ್ಲಿ 43 ಹೊಸ ಪ್ರಕರಣಗಳು ವರದಿಯಾಗಿದ್ದವು. ದೇಶದ ಕೋವಿಡ್ 19 ಪ್ರಕರಣಗಳು ಜುಲೈ 29 ರಂದು 100 ರ ಗಡಿ ದಾಟಿದ್ದು, ಮೂರು ತಿಂಗಳ ಅವಧಿಯಲ್ಲಿ ಮೊದಲ ಬಾರಿಗೆ ಮತ್ತೆ ಆ ಮಟ್ಟಕ್ಕೆ ತಲುಪುವ ಭೀತಿ ಎದುರಾಗಿದೆ. 

"ನಾವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ನಾನು ಭಾವಿಸುತ್ತೇನೆ. ನಾವು ಯಾವುದೇ ರಾಷ್ಟ್ರವನ್ನೂ ನೋಡೊದರೂ ಸೋಂಕು ಅತ್ಯಂತ ಹೆಚ್ಚಾಗಿರುವ ರಾಷ್ಟ್ರಗಳನ್ನು ನೋಡಿದಾಗಲೇ ನಮ್ಮಲ್ಲಿ ಏನಾಗುತ್ತಿದೆ ಎನ್ನುವುದು ಅರಿವಾಗಲಿದೆ. ಅದರಂತೆ, ದೊಡ್ಡ ದೇಶಗಳಿಗೆ ಹೋಲಿಸಿದರೆ, ಕೊರೋನಾ ವಿರುದ್ಧದ ಹೋರಾಟದಲ್ಲಿ ಯುಎಸ್ ಹೆಚ್ಚು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ " ಟ್ರಂಪ್ ಹೇಳಿದ್ದಾರೆ.

"ನಾವು ಭಾರತ ಮತ್ತು ಚೀನಾವನ್ನು ಹೊರತುಪಡಿಸಿ ಮೂರನೇ ಸ್ಥಾನದಲ್ಲಿದ್ದೇವೆ ಎನ್ನುವುದನ್ನು ಮರೆಯುವಂತಿಲ್ಲ. ಚೀನಾ ಇದೀಗ ಸೋಂಕಿನ ಭಾರಿ ಸುಳಿಯಲ್ಲಿ ಸಿಲುಕಿದೆ.  ಭಾರತಕ್ಕೆ ಭಾರಿ ಸಮಸ್ಯೆ ಇದೆ. ಹಾಗೆಯೇ ಇತರೆ ರಾಷ್ಟ್ರಗಳಲ್ಲಿ ಸಹ ಸಮಸ್ಯೆಗಳು ಇದೆ. " ಶ್ನೆಯೊಂದಕ್ಕೆ ಉತ್ತರಿಸಿದ ಟ್ರಂಪ್ ಹೇಲೀದ್ದಾರ್‍ಎ.

"ಇತರೆ ರಾಷ್ಟ್ರಗಳ ಬಗೆಗಿನ ಸುದ್ದಿಗಳನ್ನು ನಾನೆಂದೂ ಓದುವುದಿಲ್ಲ. . ಇತರ ದೇಶಗಳು ಬಹಳ ದೊಡ್ಡ ಸಮಸ್ಯೆಗಳನ್ನು ಹೊಂದಿದೆ ಎಂದು ನೀವು ನೋಡುತ್ತಿದ್ದೀರಿ. ಫ್ಲೋರಿಡಾದಲ್ಲಿ ನಾವು ಎಲ್ಲಾ ಮುಗಿಯುತ್ತಿದೆ ಎನ್ನುವಾಗಲೇ ಮರಳಿ ಮತ್ತೆ ಪ್ರಾರಂಬವಾಗುತ್ತಿದೆ." 

ಸಾಂಕ್ರಾಮಿಕ ರೋಗದಿಂದ ಯುಎಸ್ ಅತಿ ಹೆಚ್ಚು ಹಾನಿಗೊಳಗಾದ ದೇಶವಾಗಿದ್ದು, 4.7 ಮಿಲಿಯನ್ ಪ್ರಕರಣಗಳು ಮತ್ತು 155,000 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಇದುವರೆಗೆ 60 ದಶಲಕ್ಷಕ್ಕೂ ಹೆಚ್ಚು ಜನರನ್ನು ಕೊರೋನಾವೈರಸ್ ಪರೀಕ್ಷೆಗೆ ಒಳಪಡಿಸಲಾಗಿದೆ  ಎಂದು ಅಮೆರಿಕ ಹೇಳಿದೆ. "ಬೇರೆ ಯಾವ ದೇಶವೂ ಅದಕ್ಕೆ ಹತ್ತಿರದಲ್ಲಿಲ್ಲ. ನಾವು 60 ಮಿಲಿಯನ್ ಜನರನ್ನು ಪರೀಕ್ಷಿಸಿದ್ದೇವೆ. ಕೆಲ ಪ್ರಕರಣದಲ್ಲಿ ನಾವು ಕ್ಷಿಪ್ರ ಫಲಿತಾಂಶ ಪಡೆಯುತ್ತಿದ್ದೇವೆ. ಐದರಿಂದ 15,  20 ನಿಮಿಷಗಳ ಪರೀಕ್ಷೆಗಳು ಅಂದರೆ ನೀವು ತಕ್ಷಣ ಫಲಿತಾಂಶಗಳನ್ನು ಪಡೆಯುತ್ತೀರಿ. ಯಾರಿಗೂ ಏನೂ ಸಮಸ್ಯೆ ಇರುವುದಿಲ್ಲ.  ನಾವು ಚೆನ್ನಾಗಿ ಮುಂದುವರಿಯುತ್ತಿದ್ದೇವೆ ಎಂದು ನಾನು ಭಾವಿಸುತ್ತೇನೆ "ಎಂದು ಅವರು ಹೇಳಿದರು. ಇದೇ ವೇಳೆ ಕೊರೋನಾ ಸಂಬಂಧ ಗಮನಾರ್ಹ ಪ್ರಗತಿಯ ಪುರಾವೆಗಳನ್ನು ಅಮೆರಿಕ ನೋಡಲಾರಂಭಿಸಿದೆ ಎಂದು ಟ್ರಂಪ್ ಹೇಳಿದ್ದಾರೆ.

ರಾಷ್ಟ್ರವ್ಯಾಪಿ, ಸಕಾರಾತ್ಮಕ ಪ್ರಕರಣಗಳ ಸಂಖ್ಯೆ ಹಿಂದಿನ ವಾರಕ್ಕಿಂತ ಸುಮಾರು ಆರು ಪ್ರತಿಶತದಷ್ಟು ಕಡಿಮೆಯಾಗಿದೆ ಮತ್ತು ಧನಾತ್ಮಕ ಪರೀಕ್ಷಾ ದರವು ಅದೇ ಅವಧಿಯಲ್ಲಿ ಶೇಕಡಾ 8.7 ರಿಂದ 8 ಕ್ಕೆ ಇಳಿದಿದೆ. "ಪ್ರಪಂಚದಾದ್ಯಂತದ ಪ್ರಕರಣಗಳು ಮತ್ತೊಮ್ಮೆ ಹೆಚ್ಚುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಅಲ್ಲಿ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ನಾವು ಭಾವಿಸಿದ್ದೇವೆ, ಮತ್ತುಇದು ತುಂಬಾ ಕಠಿಣವಾದ ಸಮಯ  ಲಾಕ್‌ಡೌನ್‌ಗಳು ಭವಿಷ್ಯದಲ್ಲಿ ಸೋಂಕನ್ನು ತಡೆಯುವುದಿಲ್ಲ ಅಲ್ಲದೆ ಸೋಂಕು ಮತ್ತೆ ಮತ್ತೆ ಕಾಣಿಸಿಕೊಳ್ಳುವುದು ಮುಂದುವರಿಯುತ್ತದೆ. 

"ಆಸ್ಪತ್ರೆಗಳಲ್ಲಿ ಸಾಮರ್ಥ್ಯವನ್ನು ಹೆಚ್ಚಿಸಲು ಸಮಯ ಪಾಲನೆ, ರೋಗದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವುದು ಮತ್ತು ಪರಿಣಾಮಕಾರಿ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸುವುದು ಲಾಕ್‌ಡೌನ್ ಉದ್ದೇಶವಾಗಿದೆ ನಾವು ಲಸಿಕೆಗಳು ಮತ್ತು ಚಿಕಿತ್ಸಕಗಳೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಕಳೆದ ಅಲ್ಪಾವಧಿಯಲ್ಲಿ ಬಹಳ ಗಮನಾರ್ಹವಾಗಿ ಸೋಂಕು ಹೆಚ್ಚಾದ ದೇಶಗಳಾದ ಸ್ಪೇನ್, ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯಾ, ಜಪಾನ್ ಹಗೂ  ಹಾಂಗ್ ಕಾಂಗ್ ಗಳಲ್ಲಿ ಸಾಕಷ್ಟು ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ.  

"ಜಪಾನ್ ಬಹಳಷ್ಟು ಸಮಸ್ಯೆ ಎದುರಿಸುತ್ತಿದೆ. ಅಲ್ಲಿ ನಮಗಿಂತ ಆರು ಪಟ್ಟು ಹೆಚ್ಚು ಸಮಸ್ಯೆ ಇದೆ, ಆದರೆ ಅವರು ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾರೆ" ಎಂದು ಟ್ರಂಪ್ ಅಭಿಪ್ರಾಯಪಟ್ಟರು. " ಪ್ರಸ್ತುತ ಹಂತದಲ್ಲಿ, ಕಿರಿಯ ಮತ್ತು ಆರೋಗ್ಯವಂತ ಅಮೆರಿಕನ್ನರಿಗೆ ಎಚ್ಚರಿಕೆಯಿಂದ ಮುನ್ನೆಚ್ಚರಿಕೆಗಳೊಂದಿಗೆ ಕೆಲಸ ಮತ್ತು ಶಾಲೆಯನ್ನು ಪುನರಾರಂಭಿಸಲು ಅವಕಾಶ ನೀಡುವಾಗ ಹೆಚ್ಚಿನ ಅಪಾಯದಲ್ಲಿರುವವರನ್ನು ರಕ್ಷಿಸುವತ್ತ ನಾವು ಗಮನ ಹರಿಸಬೇಕು." ಇದೇ ವೇಳೆ ಟ್ರಂಪ್ ನುಡಿದರು. 

Stay up to date on all the latest ಅಂತಾರಾಷ್ಟ್ರೀಯ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp