ರಾಜಕೀಯ ಅಸಂಬದ್ಧತೆ, ಹಾಸ್ಯಾಸ್ಪದ ಪ್ರತಿಪಾದನೆ: ಪಾಕಿಸ್ತಾನದ ಹೊಸ ಮ್ಯಾಪ್ ಗೆ ಭಾರತದ ತೀಕ್ಷ್ಣ ಪ್ರತಿಕ್ರಿಯೆ 

ಜಮ್ಮು-ಕಾಶ್ಮೀರದ ಆರ್ಟಿಕಲ್ 370 ರದ್ದತಿಯ ವರ್ಷಾಚರಣೆಯ ಸಂದರ್ಭದಲ್ಲಿ ಪಾಕಿಸ್ತಾನ ತನ್ನ ಹೊಸ ಭೂಪಟವನ್ನು ಬಿಡುಗಡೆ ಮಾಡಿದ್ದು, ವಿವಾದ ಉಂಟುಮಾಡಿದೆ. 
ನರೇಂದ್ರ ಮೋದಿ-ಇಮ್ರಾನ್ ಖಾನ್
ನರೇಂದ್ರ ಮೋದಿ-ಇಮ್ರಾನ್ ಖಾನ್

ನವದೆಹಲಿ/ಇಸ್ಲಾಮಾಬಾದ್: ಜಮ್ಮು-ಕಾಶ್ಮೀರದ ಆರ್ಟಿಕಲ್ 370 ರದ್ದತಿಯ ವರ್ಷಾಚರಣೆಯ ಸಂದರ್ಭದಲ್ಲಿ ಪಾಕಿಸ್ತಾನ ತನ್ನ ಹೊಸ ಭೂಪಟವನ್ನು ಬಿಡುಗಡೆ ಮಾಡಿದ್ದು, ವಿವಾದ ಉಂಟುಮಾಡಿದೆ. 

ಈ ಹೊಸ ಮ್ಯಾಪ್ ನ ಬಗ್ಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು  ಇದೊಂದು ಕಾನೂನಾತ್ಮಕವಾಗಿಯೂ ಮಾನ್ಯವಲ್ಲದ, ಅಂತಾರಾಷ್ಟ್ರೀಯವಾಗಿಯೂ ವಿಶ್ವಾಸಾರ್ಹವಲ್ಲದ ಭೂಪಟವಾಗಿದ್ದು ರಾಜಕೀಯ ಅಸಂಬದ್ಧತೆ, ಹಾಸ್ಯಾಸ್ಪದ ಪ್ರತಿಪಾದನೆಯಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. 

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಈ ಭೂಪಟ ಬಿಡುಗಡೆ ಮಾಡುತ್ತಿದ್ದಂತೆಯೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯ, "ನಾವು ಪಾಕಿಸ್ತಾನದ ಸೋಕಾಲ್ಡ್ ಹೊಸ ಭೂಪಟವನ್ನು ಗಮನಿಸಿದ್ದೇವೆ, ಅದರಲ್ಲಿ ಜಮ್ಮು-ಕಾಶ್ಮೀರ, ಲಡಾಖ್ ಹಾಗೂ ಗುಜರಾತ್ ನ ಕೆಲವು ಭಾಗಗಳನ್ನು ಪಾಕಿಸ್ತಾನದ್ದೆಂದು ತೋರಿಸಲಾಗಿದೆ. ಇದು ಹಾಸ್ಯಾಸ್ಪದ ಪ್ರತಿಪಾದನೆ ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com