ನಾನಿನ್ನುಇಲಿ ಹಿಡಿಯಲ್ಲ: ನಿವೃತ್ತಿಯಾದ ಯುಕೆ ವಿದೇಶಾಂಗ ಕಚೇರಿ ಬೆಕ್ಕಿಗೆ ಗೌರವಪೂರ್ವಕ ಬೀಳ್ಕೊಡುಗೆ!

ಇಲಿ ಹಿಡಿಯುವ ಕರ್ತವ್ಯ ನಿರ್ವಹಿಸುತ್ತಿದ್ದ "ಲಾರ್ಡ್ ಪಾಲ್ಮೆರಿಸ್ಟನ್ ದಿ ಚೀಫ್ ಮೌಸರ್" ಲಂಡನ್‌ನ ಯುಕೆ ವಿದೇಶಿ ಮತ್ತು ಕಾಮನ್‌ವೆಲ್ತ್ ಕಚೇರಿಯ ರಾಜತಾಂತ್ರಿಕ ಸೇವೆಯಿಂದ ನಿವೃತ್ತಿ ಆಗಿದ್ದಾನೆ.
ಲಾರ್ಡ್ ಪಾಲ್ಮೆರಿಸ್ಟನ್
ಲಾರ್ಡ್ ಪಾಲ್ಮೆರಿಸ್ಟನ್

ಲಂಡನ್: ಇಲಿ ಹಿಡಿಯುವ ಕರ್ತವ್ಯ ನಿರ್ವಹಿಸುತ್ತಿದ್ದ "ಲಾರ್ಡ್ ಪಾಲ್ಮೆರಿಸ್ಟನ್ ದಿ ಚೀಫ್ ಮೌಸರ್" ಲಂಡನ್‌ನ ಯುಕೆ ವಿದೇಶಿ ಮತ್ತು ಕಾಮನ್‌ವೆಲ್ತ್ ಕಚೇರಿಯ ರಾಜತಾಂತ್ರಿಕ ಸೇವೆಯಿಂದ ನಿವೃತ್ತಿ ಆಗಿದ್ದಾನೆ.   ಡೌನಿಂಗ್ ಸ್ಟ್ರೀಟ್ ಮೌಸ್-ಕ್ಯಾಚರ್ ಲ್ಯಾರಿಯೊಂದಿಗೆ ನಿಯಮಿತ ಬೇಟೆಗಳಿಗೆ ಹೆಸರಾಗಿದ್ದ ಲಾರ್ಡ್ ಪಾಲ್ಮೆರಿಸ್ಟನ್ ಇಂಗ್ಕಿಷ್ ಕೌಂಟಿಸೈಡ್ ನಿಂದ ನಿವೃತ್ತಿಯಾಗುತ್ತಿದ್ದಾನೆ. ಅವನೀಗ ಸಧ್ಯ  ವಿದೇಶಾಂಗ ಕಚೇರಿ ಸಿಬ್ಬಂದಿಯೊಬ್ಬರ ಮನೆಯಲ್ಲಿ ಲಾಕ್‌ಡೌನ್  ದಿನಗಳನ್ನು ಕಳೆಯುತ್ತಿದ್ದಾನೆ.  ನಾಲ್ಕು ವರ್ಷಗಳ ಸಂತೋಷದಾಯಕ ಸೇವೆಯ ನಂತ ಲಾರ್ಡ್ ಪಾಲ್ಮೆರಿಸ್ಟನ್ ನಿವೃತ್ತಿಯಾಗುತ್ತಿದ್ದಾನೆ ಎಂದು ಸರ್ ಸೈಮನ್ ಮ್ಯಾಕ್ ಡೊನಾಲ್ಡ್ ಟ್ವೀಟ್ ಮಾಡಿದ್ದಾರೆ. ಇಷ್ಟಕ್ಕೂ ಈ  "ಲಾರ್ಡ್ ಪಾಲ್ಮೆರಿಸ್ಟನ್" ಎಂದರೆ ಯಾವುದೇ ಅಧಿಕಾರಿ ಅಥವಾ ಸೇವಾ ನಿರತ ವ್ಯಕ್ತಿಯಲ್ಲ ಬದಲಿಗೆ ಅದೊಂದು ಬೆಕ್ಕಿನ ನಿವೃತ್ತಿಯ ವಿವರಣೆ! 

ಡೌನಿಂಗ್ ಸ್ಟ್ರೀಟ್ ಮೌಸ್-ಕ್ಯಾಚರ್ ಲ್ಯಾರಿ ಹಾಗೂ ಲಾರ್ಡ್ ಪಾಲ್ಮೆರಿಸ್ಟನ್ ಎರಡೂ ಬೆಕ್ಕುಗಳು ತಮ್ಮದೇ ಆದ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳನ್ನು ಹೊಂದಿವೆ ಮತ್ತು ಡೌನಿಂಗ್ ಸ್ಟ್ರೀಟ್ ಕರ್ತವ್ಯ ನಿರ್ವಹಣೆಯಲ್ಲಿ, ಸುದ್ದಿ ಛಾಯಾಗ್ರಾಹಕರಿಗೆ ಬಹಳ ಮೆಚ್ಚಿನವುಗಳಾಗಿದೆ.

"ಏಪ್ರಿಲ್ 2016 ರಲ್ಲಿ, ಪಾಲ್ಮೆರಿಸ್ಟನ್  ಎಂಬ ಬೆಕ್ಕು ಬ್ಯಾಟರ್ಸಿಯಾದಿಂದ (ಲಂಡನ್ನಲ್ಲಿ ನಾಯಿ ಹಾಗೂ ಬೆಕ್ಕುಗಳ ಆಶ್ರಯ ಮನೆ) ಕಚೇರಿಗೆ ಆಗಮಿಸಿತ್ತು. ಇಲ್ಲಿ ಆ ಬೆಕ್ಕು ಇಲಿ ಹಿಡಿಯುವುದಕ್ಕಾಗಿ ನೇಮಕವಾಗಿತ್ತು, 105,000 ಟ್ವಿಟ್ಟರ್ ಅನುಯಾಯಿಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಸಹ ಆ ಬೆಕ್ಕು ಸದ್ದು ಮಾಡಿದೆ. "" ಎಂದು ಪರ್ಮನೆಂಟ್ ಅಂಡರ್ ಸೆಕ್ರೆಟರಿ ಆಂಡ್ ಹೆಡ್ ಆಫ್ ದಿ ಡಿಪ್ಲೊಮ್ಯಾಟಿಕ್ ಸರ್ವಿಸ್ ಎಫ್‌ಸಿಒ ಸರ್ ಸೈಮನ್ ಮ್ಯಾಕ್ ಡೊನಾಲ್ಡ್ ಹೇಳಿದ್ದಾರೆ. 

ಸೆಪ್ಟೆಂಬರ್ 1 ರಿಂದ ಹೊಸ ವಿದೇಶಿ, ಕಾಮನ್ವೆಲ್ತ್ ಮತ್ತು ಅಭಿವೃದ್ಧಿ ಕಚೇರಿಯನ್ನು ರಚಿಸಲು ಇಲಾಖೆಯನ್ನು ಅಂತರರಾಷ್ಟ್ರೀಯ ಅಭಿವೃದ್ಧಿ ಇಲಾಖೆಯೊಂದಿಗೆ ವಿಲೀನಗೊಳಿಸಲಾಗಿರುವುದರಿಂದ ಎಫ್‌ಸಿಒ ಮುಖ್ಯಸ್ಥರಾಗಿ ಮ್ಯಾಕ್ ಡೊನಾಲ್ಡ್ ಅವರ ಅವಧಿ ಈ ತಿಂಗಳು ಮುಕ್ತಾಯಗೊಳ್ಳಲಿದೆ.

ಭಾರತದ ಪ್ರಸ್ತುತ ಬ್ರಿಟಿಷ್ ಹೈಕಮಿಷನರ್ ಸರ್ ಫಿಲಿಪ್ ಬಾರ್ಟನ್ ಹೊಸ ಸಚಿವಾಲಯದ ಖಾಯಂ ಅಂಡರ್-ಸೆಕ್ರೆಟರಿ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಎಫ್‌ಸಿಒದಿಂದ ಬಂದ ಬೆಕ್ಕಿನಸುದ್ದಿಯ ಬೆನ್ನಲ್ಲೇ ಪಾಲ್ಮೆರಿಸ್ಟನ್" ಟ್ವಿಟ್ಟರ್ ಖಾತೆಯು ಮ್ಯಾಕ್ ಡೊನಾಲ್ಡ್ ಹೆಸರನ್ನು ಉಲ್ಲೇಖಿಸಿ ಔಪಚಾರಿಕ ನಿವೃತ್ತಿ ಪತ್ರವನ್ನೂ ಪ್ರಕಟಿಸಿದೆ. ಪಾಲ್ಮೆರಿಸ್ಟನ್" ಅಂತೆ  ವಿದೇಶಾಂಗ ಕಚೇರಿಯ ಅಧಿಕೃತ ಸೇವೆಯ ನಾಲ್ಕು ವರ್ಷಗಳ ನಂತರ, ನಾನು ಎಲ್ಲರಿಂದ ದೂರವಾಗಿ ಹೆಚ್ಚು ಸಮಯ ಕಳೆಯಲು ಬಯಸುತ್ತೇನೆ.  ಪ್ರಪಂಚದಾದ್ಯಂತ ಕೊರೋನಾವೈರಸ್ ಹರಡುವಿಕೆಯು ನನ್ನಂತೆಯೇ ಅನೇಕರು ಮನೆಯಿಂದ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ. ನನ್ನ ರಾಜತಾಂತ್ರಿಕ ಕರಕುಶಲತೆಯು ಸಕಾರಾತ್ಮಕ ಫಲಿತಾಂಶಗಳನ್ನು ಪಡೆದಿದ್ದು ನಾನು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದದ್ದಾಗಿ ನಾನು ಹೇಳಬಲ್ಲೆ,ನಾನು ಇಲ್ಲಿ ನನ್ನ ಔಪಚಾರಿಕ ಪಾತ್ರವನ್ನು ಕೊನೆಗೊಳಿಸುತ್ತಿದ್ದರೂ, ನಾನು ಯಾವಾಗಲೂ ಯುಕೆ ಮತ್ತು ಹೊಸ ವಿದೇಶಿ, ಕಾಮನ್ವೆಲ್ತ್ ಮತ್ತು ಅಭಿವೃದ್ಧಿ ಕಚೇರಿಯ ರಾಯಭಾರಿಯಾಗಿರುತ್ತೇನೆ" ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಡೌನಿಂಗ್ ಸ್ಟ್ರೀಟ್‌ನ ಪಕ್ಕದಲ್ಲಿರುವ ಕಿಂಗ್ ಚಾರ್ಲ್ಸ್ ಸ್ಟ್ರೀಟ್‌ನಲ್ಲಿರುವ ಎಫ್‌ಸಿಒ ಕಟ್ಟಡದಲ್ಲಿ ಇಲಿಗಳನ್ನು  ನಿಭಾಯಿಸಲು ನೈರುತ್ಯ ಲಂಡನ್‌ನ ಬ್ಯಾಟರ್‌ಸಿಯಾ ಡಾಗ್ಸ್ ಮತ್ತು ಕ್ಯಾಟ್ಸ್ ಹೋಂನಲ್ಲಿ  ಆಶ್ರಯ ಪಡೆದಿದ್ದ ನೂರಾರು ಬೆಕ್ಕುಗಳಿಂದ ಲಾರ್ಡ್ ಪಾಲ್ಮೆರಿಸ್ಟನ್ ಅನ್ನು ಆಯ್ಕೆ ಮಾಡಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com