ಕೇರಳದ ಕೋಝಿಕ್ಕೋಡ್ ನಲ್ಲಿ ವಿಮಾನ ದುರಂತ: ದುಬೈ, ಶಾರ್ಜಾ ದೂತಾವಾಸ ಕಚೇರಿ ಸಹಾಯವಾಣಿ ಮಾಹಿತಿ ಇಲ್ಲಿದೆ

ಕೇರಳದ ಕೋಝಿಕ್ಕೋಡ್ ನಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಅಪಘಾತಕ್ಕೀಡಾಗಿ ಅನೇಕ ಮಂದಿ ಮೃತಪಟ್ಟ ಘಟನೆ ನಡೆದ ಕೂಡಲೇ ದುಬೈ ಮತ್ತು ಶಾರ್ಜಾದಲ್ಲಿರುವ ಭಾರತೀಯ ದೂತಾವಾಸ ಕಚೇರಿ ಪ್ರಯಾಣಿಕರ ಕುಟುಂಬಸ್ಥರಿಗೆ ಮಾಹಿತಿ ನೀಡಲು 5 ಸಹಾಯವಾಣಿಗಳನ್ನು ತೆರೆದಿದೆ. 

Published: 08th August 2020 08:43 AM  |   Last Updated: 08th August 2020 02:03 PM   |  A+A-


An ambulance carrying injured passengers leaves for a hospital after an Air India Express jet.

ಗಾಯಗೊಂಡವರನ್ನು ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿರುವುದು

Posted By : Sumana Upadhyaya
Source : PTI

ದುಬೈ: ಕೇರಳದ ಕೋಝಿಕ್ಕೋಡ್ ನಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಅಪಘಾತಕ್ಕೀಡಾಗಿ ಅನೇಕ ಮಂದಿ ಮೃತಪಟ್ಟ ಘಟನೆ ನಡೆದ ಕೂಡಲೇ ದುಬೈ ಮತ್ತು ಶಾರ್ಜಾದಲ್ಲಿರುವ ಭಾರತೀಯ ದೂತಾವಾಸ ಕಚೇರಿ ಪ್ರಯಾಣಿಕರ ಕುಟುಂಬಸ್ಥರಿಗೆ ಮಾಹಿತಿ ನೀಡಲು 5 ಸಹಾಯವಾಣಿಗಳನ್ನು ತೆರೆದಿದೆ. 

ದುಬೈಯಿಂದ ಕಲ್ಲಿಕೋಟೆಗೆ ಬರುತ್ತಿದ್ದ ಐಎಕ್ಸ್ 1344 ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ 191 ಮಂದಿ ಇದ್ದರು, ಅವರಲ್ಲಿ ಇಬ್ಬರು ಪೈಲಟ್ ಗಳು, ನಾಲ್ವರು ಸಿಬ್ಬಂದಿ, 10 ಮಕ್ಕಳನ್ನೂ ಒಳಗೊಂಡಿತ್ತು. ರನ್ ವೇ 10ರಲ್ಲಿ ಲ್ಯಾಂಡಿಂಗ್ ಆದ ಮೇಲೆ ಬೋಯಿಂಗ್ 737 ವಿಮಾನ ರನ್ ವೇಯ ಕೊನೆಯವರೆಗೂ ಹಾರಾಡಲು ಪ್ರಯತ್ನಿಸಿತ್ತು. ಆಗ ನಿಯಂತ್ರಣ ತಪ್ಪಿ 50 ಅಡಿ ಆಳವಾದ ಕಂದಕಕ್ಕೆ ಬಿದ್ದು ಎರಡು ಹೋಳಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಗೆ ನಾವು ಪ್ರಾರ್ಥಿಸಿಕೊಳ್ಳುತ್ತಿದ್ದೇವೆ. ನಮ್ಮ ಸಹಾಯವಾಣಿ +97156 5463903, +971543090572, +971543090571, +971543090575 ಎಂದು ದುಬೈಯಲ್ಲಿರುವ ಭಾರತೀಯ ಕೌನ್ಸಲ್ ಜನರಲ್ ಡಾ ಅಮನ್ ಪುರಿ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

ಶಾರ್ಜಾದಲ್ಲಿನ ಸಹಾಯವಾಣಿ +97165970303 ಆಗಿದೆ. 

Stay up to date on all the latest ಅಂತಾರಾಷ್ಟ್ರೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp