ಭಾರತದಿಂದ ಹಾವಿನ ವಿಷ ನಿರೋಧಕ ಲಸಿಕೆ ಆಮದು ಸ್ಥಗಿತ, ವಾಯುವ್ಯ ಪಾಕಿಸ್ತಾನದಲ್ಲಿ ಸಂಕಷ್ಟ!

ಗಡಿ ವಿವಾದದಿಂದಾಗಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹಳಸಿದ್ದು ಭಾರತದಿಂದ ಆಮದು ಸ್ಥಗಿತಗೊಂಡಿದ್ದರಿಂದ ವಾಯುವ್ಯ ಪಾಕಿಸ್ತಾನದಲ್ಲಿ ಹಾವಿನ ವಿಷ ನಿರೋಧಕ ಲಸಿಕೆಯ ಕೊರತೆ ಎದುರಾಗಿದೆ.
ಲಸಿಕೆ
ಲಸಿಕೆ

ಪೇಶಾವರ್: ಗಡಿ ವಿವಾದದಿಂದಾಗಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹಳಸಿದ್ದು ಭಾರತದಿಂದ ಆಮದು ಸ್ಥಗಿತಗೊಂಡಿದ್ದರಿಂದ ವಾಯುವ್ಯ ಪಾಕಿಸ್ತಾನದಲ್ಲಿ ಹಾವಿನ ವಿಷ ನಿರೋಧಕ ಲಸಿಕೆಯ ಕೊರತೆ ಎದುರಾಗಿದೆ. 

ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಆರೋಗ್ಯ ಸಚಿವ ತೈಮೂರ್ ಸಲೀಮ್ ಅವರು ಪ್ರಾಂತೀಯ ವಿಧಾನಸಭಾ ಅಧಿವೇಶನದ ಸಂದರ್ಭದಲ್ಲಿ ಈ ವಿಷಯ ತಿಳಿಸಿದರು.

ಜಮಾತೆ-ಇ-ಇಸ್ಲಾಮಿ ಶಾಸಕ ಹುಮೈರಾ ಖತೂನ್ ಅವರು ಪ್ರಾಂತ್ಯದ ಆಸ್ಪತ್ರೆಗಳಲ್ಲಿ ಹಾವು ವಿಷ ನಿರೋಧಕ ಲಸಿಕೆಗಳ ಕೊರತೆಯ ಬಗ್ಗೆ ಪ್ರಶ್ನಿಸಿದ್ದರು. 

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, "ಉಭಯ ದೇಶಗಳ ರಾಜತಾಂತ್ರಿಕ ಸಂಬಂಧ ಹಳಸಿದ್ದರಿಂದ ಆಮದು ಸ್ಥಗಿತಗೊಂಡಿದೆ. ಈ ಲಸಿಕೆಗಳನ್ನು ನಾವು ಭಾರತದಿಂದ ಆಮದು ಮಾಡಿಕೊಳ್ಳುತ್ತಿದ್ದೇವು ಎಂದು ಹೇಳಿದರು.

ಕಳೆದ ವರ್ಷ ಜುಲೈ 16ರ ವರೆಗೂ ಪಾಕಿಸ್ತಾನವು ಭಾರತದಿಂದ 2.5 ಬಿಲಿಯನ್ ರೂ.ಗಳ ಮೌಲ್ಯದ ರೇಬೀಸ್ ಮತ್ತು ಹಾವಿನ ವಿಷ ನಿರೋಧಕ ಲಸಿಕೆಗಳನ್ನು ಆಮದು ಮಾಡಿಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com