ರಷ್ಯಾ: ಹೊಸ ಕೊರೋನಾ ಲಸಿಕೆಗೆ ಸೋವಿಯೆಟ್ ಉಪಗ್ರಹ 'ಸ್ಪುಟ್ನಿಕ್' ಹೆಸರು ನಾಮಕರಣ; 20 ರಾಷ್ಟ್ರಗಳಿಂದ ಬೇಡಿಕೆ!

ವಿಶ್ವದ ಮೊದಲ ಕೊರೋನಾ ಲಸಿಕೆಯನ್ನು ಘೋಷಿಸಿರುವ ರಷ್ಯಾ ಅದಕ್ಕೆ ಸೋವಿಯೆಟ್ ಉಪಗ್ರಹ ಸ್ಪುಟ್ನಿಕ್ V ನ ಹೆಸರನ್ನು ನಾಮಕರಣ ಮಾಡಿದೆ. 
ಹೊಸ ಕೊರೋನಾ ಲಸಿಕೆಗೆ ಸೋವಿಯೆಟ್ ಉಪಗ್ರಹ ಸ್ಪುಟ್ನಿಕ್ ಹೆಸರು ನಾಮಕರಣ
ಹೊಸ ಕೊರೋನಾ ಲಸಿಕೆಗೆ ಸೋವಿಯೆಟ್ ಉಪಗ್ರಹ ಸ್ಪುಟ್ನಿಕ್ ಹೆಸರು ನಾಮಕರಣ

ಮಾಸ್ಕೋ: ವಿಶ್ವದ ಮೊದಲ ಕೊರೋನಾ ಲಸಿಕೆಯನ್ನು ಘೋಷಿಸಿರುವ ರಷ್ಯಾ ಅದಕ್ಕೆ ಸೋವಿಯೆಟ್ ಉಪಗ್ರಹ ಸ್ಪುಟ್ನಿಕ್ V ನ ಹೆಸರನ್ನು ನಾಮಕರಣ ಮಾಡಿದೆ. 

ಲಸಿಕೆ ಯೋಜನೆಗೆ ನೇರ ಬಂಡವಾಳ ಹೂಡಿಕೆಯ ಮುಖ್ಯಸ್ಥರಾಗಿರುವ ಕಿರಿಲ್ ಡಿಮಿಟ್ರಿಯೆವ್ ಎಂಬುವವರು ಫೇಸ್ 3 ಟ್ರಯಲ್ ಗಳು ಬುಧವಾರದಿಂದ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ. 

ಪ್ರಾರಂಭಿಕವಾಗಿ ಒಂದು ಬಿಲಿಯನ್ ಡೋಸ್ ನಷ್ಟು ಬೇಡಿಕೆಯನ್ನು 20 ರಾಷ್ಟ್ರಗಳಿಂದ ಪಡೆದಿದ್ದೇವೆ, ರಷ್ಯಾ ವಿದೇಶಿ ಪಾಲುದಾರರೊಂದಿಗೆ 500 ಮಿಲಿಯನ್ ಡೋಸ್ ನಷ್ಟು ಲಸಿಕೆಯನ್ನು ಪ್ರತಿ ವರ್ಷ 5 ರಾಷ್ಟ್ರಗಳಲ್ಲಿ ತಯಾರಿಸಲು ಸಿದ್ಧವಿತ್ತು ಎಂದು ಕಿರಿಲ್ ಡಿಮಿಟ್ರಿಯೆವ್  

20 ರಾಷ್ಟ್ರಗಳಿಂದ ಒಂದು ಬಿಲಿಯನ್ ನಷ್ಟು  ಕೋವಿಡ್-19 ಲಸಿಕೆಗೆ ಬೇಡಿಕೆ; ಪ್ರೀ ಆರ್ಡರ್ 

ರಷ್ಯಾದ ಲಸಿಕೆ ಘೋಷಣೆಯಾಗುತ್ತಿದ್ದಂತೆಯೇ 20 ರಾಷ್ಟ್ರಗಳಿಂದ 1 ಬಿಲಿಯನ್ ಡೋಸ್ ಗಳಿಗಿಂತಲೂ ಹೆಚ್ಚು ಲಸಿಕೆಗೆ ಬೇಡಿಕೆ ಉಂಟಾಗಿದೆ ಎಂದು ರಷ್ಯಾದ ಆರ್ ಎಫ್ ಡಿಐ ಸಿಇಒ ಕಿರಿಲ್ ಡಿಮಿಟ್ರಿಯೆವ್ ಮಾಹಿತಿ ನೀಡಿದ್ದಾರೆ. 

ವಿವಿಧ ಮಾರುಕಟ್ಟೆಗಳಲ್ಲಿ ಲಸಿಕೆಯ ಅನುಮೋದನೆ ಹಾಗೂ ಉತ್ಪಾದನೆಯ ಸಾಮರ್ಥ್ಯದ ಮೇಲೆ ಎಲ್ಲವೂ ನಿರ್ಧಾರವಾಗಲಿದೆ ಎಂದು ಕಿರಿಲ್ ಡಿಮಿಟ್ರಿಯೆವ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com