ಕಮಲಾ ಹ್ಯಾರಿಸ್ ಗೌರವ ಇಲ್ಲದ ಮಹಿಳೆ: ಡೊನಾಲ್ಡ್ ಟ್ರಂಪ್ ಅನುಚಿತ ಟೀಕೆ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ಯಾಲಿಫೋರ್ನಿಯಾ ಸೆನೆಟರ್ ಕಮಲಾ ಹ್ಯಾರಿಸ್ ವಿರುದ್ಧ ಮತ್ತೊಮ್ಮೆ ಅನುಚಿತ ಹೇಳಿಕೆ ನೀಡಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ಯಾಲಿಫೋರ್ನಿಯಾ ಸೆನೆಟರ್ ಕಮಲಾ ಹ್ಯಾರಿಸ್ ವಿರುದ್ಧ ಮತ್ತೊಮ್ಮೆ ಅನುಚಿತ ಹೇಳಿಕೆ ನೀಡಿದ್ದಾರೆ.

ತಮ್ಮ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್ ಎಂದು ಡೆಮಾಕ್ರಟಿಕ್ ಪಕ್ಷದ ಅದ್ಯಕ್ಷ ಸ್ಥಾನದ ಅಭ್ಯರ್ಥಿ ಜೋ ಬಿಡನ್ ಘೋಷಿಸಿದ ಕೆಲವೇ ನಿಮಿಷಗಳಲ್ಲಿ ಟ್ರಂಪ್, ಹ್ಯಾರಿಸ್ ಅವರನ್ನು “ಫೋನಿ” ಎಂದು ಬ್ರಾಂಡ್ ಮಾಡುವ ಪ್ರಚಾರ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ.

ಡೆಮಾಕ್ರಾಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಮೊದಲ ಕಪ್ಪು ಮಹಿಳೆಯಾಗಿ ಸ್ಪರ್ಧಿಸಲಿರುವ ಹ್ಯಾರಿಸ್ ಅವರ ಬಗ್ಗೆ ಟ್ರಂಪ್ ಅನುಚಿತ ಹೇಳಿಕೆ ನೀಡಿದ್ದಾರೆ.

ಕಮಲಾ ಹ್ಯಾರಿಸ್ ಅವರನ್ನು ಉಪಾಧ್ಯಕ್ಷ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದಕ್ಕೆ ಸ್ವಲ್ಪ ಆಶ್ಚರ್ಯವಾಗಿದೆ. ಅಮೆರಿಕಾ ಸೆನೆಟ್ ನಲ್ಲಿ ಅತ್ಯಂತ ಕೆಟ್ಟ, ಭಯ ಸೃಷ್ಟಿಸುವ, ಯಾವುದೇ ಗೌರವ ಇಲ್ಲದ ವ್ಯಕ್ತಿ ಹ್ಯಾರಿಸ್ ಎಂದು ಟ್ರಂಪ್ ಕಿಡಿ ಕಾರಿದ್ದಾರೆ. ವರ್ಣಭೇದ ನೀತಿಯನ್ನು ಬಿಡೆನ್ ಬೆಂಬಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಕ್ಯಾಲಿಫೋರ್ನಿಯಾದಿಂದ ಮೂರು ಬಾರಿ ಚುನಾಯಿತರಾಗಿರುವ ಕಮಲಾ ಹ್ಯಾರಿಸ್ ಅಮೆರಿಕಾ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ. ಪ್ರಸ್ತುತ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಆಕ್ರಮಣಕಾರಿ ಪ್ರಚಾರಕಿ ಎಂದು ಹೆಸರಾಗಿದ್ದಾರೆ.

ಕಮಲಾ, ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದಿಂದ ಪ್ರಚಾರ ಆರಂಭಿಸಿದ್ದರು. ಆದರೆ ಅದು ಮುಂದೆ ಹೋಗದೆ ಕಳೆದ ವರ್ಷಾಂತ್ಯ ಹೊತ್ತಿಗೆ ಅಧ್ಯಕ್ಷೀಯ ಚುನಾವಣೆ ಸ್ಪರ್ಧಾಕಣದಿಂದ ಹಿಂದೆ ಸರಿದಿದ್ದರು.

ಅಮೆರಿಕ ದೇಶದ ಎರಡನೇ ಅತ್ಯುನ್ನತ ರಾಜಕೀಯ ಪದವಿಯಾದ ಉಪಾಧ್ಯಕ್ಷ ಹುದ್ದೆಗೆ ಸ್ಪರ್ಧಿಸುತ್ತಿರುವ ಕಪ್ಪು ವರ್ಣೀಯ ನಾಲ್ಕನೇ ಆಫ್ರಿಕಾ ಅಮೆರಿಕನ್ ಮತ್ತು ಮೊದಲ ಭಾರತೀಯ ಮೂಲದ ಅಮೆರಿಕನ್ ಮಹಿಳೆ ಕಮಲಾ ಹ್ಯಾರಿಸ್ ಆಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com