ಹೆಚ್-1ಬಿ, ಎಲ್-1 ಪ್ರಯಾಣ ವೀಸಾ ನಿರ್ಬಂಧ: ಜು.22ರ ನಿಯಮದಲ್ಲಿ ಸಡಿಲಿಕೆ ಮಾಡಿದ ಅಮೆರಿಕ ಸರ್ಕಾರ

ಭಾರತದ ಐಟಿ ವೃತ್ತಿಪರರಿಗೆ ಮತ್ತು ಆರೋಗ್ಯ ವಲಯದಲ್ಲಿ ಕೆಲಸ ಮಾಡುತ್ತಿರುವ ವಿದೇಶಿಯರಿಗೆ ಸಹಾಯವಾಗುವಂತಹ ನಿರ್ಧಾರವನ್ನು ಅಮೆರಿಕ ಸರ್ಕಾರ ಮಾಡಿದ್ದು, ಒಂದೇ ಕಡೆ ಕೆಲಸ ಮುಂದುವರಿಸುವವರಿಗಿದ್ದ ಹೆಚ್-1ಬಿ ಮತ್ತು ಎಲ್-1 ಪ್ರಯಾಣ ನಿರ್ಬಂಧದಲ್ಲಿ ವಿನಾಯ್ತಿ ನೀಡಿದೆ.

Published: 13th August 2020 10:34 AM  |   Last Updated: 13th August 2020 12:57 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : PTI

ವಾಷಿಂಗ್ಟನ್: ಭಾರತದ ಐಟಿ ವೃತ್ತಿಪರರಿಗೆ ಮತ್ತು ಆರೋಗ್ಯ ವಲಯದಲ್ಲಿ ಕೆಲಸ ಮಾಡುತ್ತಿರುವ ವಿದೇಶಿಯರಿಗೆ ಸಹಾಯವಾಗುವಂತಹ ನಿರ್ಧಾರವನ್ನು ಅಮೆರಿಕ ಸರ್ಕಾರ ಮಾಡಿದ್ದು, ಒಂದೇ ಕಡೆ ಕೆಲಸ ಮುಂದುವರಿಸುವವರಿಗಿದ್ದ ಹೆಚ್-1ಬಿ ಮತ್ತು ಎಲ್-1 ಪ್ರಯಾಣ ನಿರ್ಬಂಧದಲ್ಲಿ ವಿನಾಯ್ತಿ ನೀಡಿದೆ.

ಕಳೆದ ಜುಲೈ 22ರಂದು ಅಧ್ಯಕ್ಷರು ಹೊರಡಿಸಿದ್ದ ಸುಗ್ರೀವಾಜ್ಞೆಗೆ ಕೆಲವು ವಿನಾಯ್ತಿಯನ್ನು ನೀಡಲಾಗಿದೆ. ಕಳೆದ ಜುಲೈ 22ರಂದು ಹೊರಡಿಸಿದ್ದ ಘೋಷಣೆಯಲ್ಲಿ ಅಧ್ಯಕ್ಷ ಟ್ರಂಪ್, ವಲಸೆಯೇತರ ವೀಸಾ ವಿಭಾಗದಲ್ಲಿ ನೌಕರರು ಅಮೆರಿಕಕ್ಕೆ ಪ್ರವೇಶಿಸುವ ನಿಯಮಗಳಲ್ಲಿ ಹಲವು ನಿರ್ಬಂಧ ಹೇರಲಾಗಿತ್ತು. ಕೋವಿಡ್-19 ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟ ಹೊತ್ತಿನಲ್ಲಿ ಅಮೆರಿಕನ್ನರಿಗೆ ಉದ್ಯೋಗಕ್ಕೆ ಕುತ್ತು ಬರಬಹುದೆಂಬ ಉದ್ದೇಶದಿಂದ ಸರ್ಕಾರ ಹೆಚ್-1ಬಿ, ಎಲ್-1 ವೀಸಾಗಳಿಗೆ ನಿರ್ಬಂಧ ಹೇರಿತ್ತು. 

ಹೆಚ್-1ಬಿ ವೀಸಾ ವಲಸೆರಹಿತ ವೀಸಾವಾಗಿದ್ದು ಈ ಮೂಲಕ ಅಮೆರಿಕದ ಕಂಪೆನಿಗಳು ವಿದೇಶಿ ನೌಕರರನ್ನು ವಿಶೇಷ ಉದ್ಯೋಗಗಳಲ್ಲಿ ಕೆಲಸಕ್ಕೆ ಬರಮಾಡಿಕೊಳ್ಳಬಹುದಾಗಿದೆ. ತಾಂತ್ರಿಕ ವಿಶೇಷ ತಜ್ಞರು ಮತ್ತು ವೃತ್ತಿಯಲ್ಲಿ ವಿಶೇಷ ಪರಿಣಿತರಿಗೆ ಈ ವೀಸಾ ಸಿಗುತ್ತದೆ.ಈ ವೀಸಾ ಮೂಲಕ ಅಮೆರಿಕ ಕೆಂಪೆನಿಗಳು ಪ್ರತಿವರ್ಷ ಸಾವಿರಾರು ಭಾರತೀಯ ಮತ್ತು ಚೀನಾದ ನೌಕರರನ್ನು ಕೆಲಸಕ್ಕೆ ನೇಮಕಾತಿ ಮಾಡಿಕೊಳ್ಳುತ್ತವೆ.

ರಾಷ್ಟ್ರೀಯ ಭದ್ರತೆ ವಿಭಾಗದಲ್ಲಿ ಅಮೆರಿಕ ಸರ್ಕಾರ ಪರಿಷ್ಕೃತ ಪ್ರಯಾಣ ಸಲಹೆಯನ್ನು ನೀಡಿದ್ದು, ಅದರ ಪ್ರಕಾರ ಈಗಿರುವ ಕಂಪೆನಿ ಮತ್ತು ಮಾಲೀಕರ ಕೈಕೆಳಗೆ ಅದೇ ಉದ್ಯೋಗದಲ್ಲಿ ಹೆಚ್ -1ಬಿ ಮತ್ತು ಎಲ್-1 ವೀಸಾ ಹೊಂದಿರುವವರು ಕೆಲಸ ಮುಂದುವರಿಸಬಹುದಾಗಿದೆ. ಈಗಿರುವ ಉದ್ಯೋಗಿಗಳನ್ನು ಬದಲಾವಣೆ ಮಾಡಲು ನೋಡಿದರೆ ಆರ್ಥಿಕ ಸಂಕಷ್ಟ ಉಂಟಾಗಬಹುದು ಎಂದು ಹೇಳಲಾಗುತ್ತಿದೆ.

ಕೋವಿಡ್-19 ಸೇರಿದಂತೆ ಆರೋಗ್ಯ ವಲಯಗಳಲ್ಲಿ ಕೆಲಸ ಮಾಡುವ ಹೆಚ್-1ಬಿ ವೀಸಾ ಹೊಂದಿರುವವರು ಕಳೆದ ಜುಲೈ 22ರ ಪ್ರಯಾಣ ನಿರ್ಬಂಧದಿಂದ ವಿನಾಯ್ತಿ ಹೊಂದುತ್ತಾರೆ. 

Stay up to date on all the latest ಅಂತಾರಾಷ್ಟ್ರೀಯ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp