74ನೇ ಸ್ವಾತಂತ್ರ್ಯ ದಿನಾಚರಣೆ: ಕರೆ ಮಾಡಿ ಪ್ರಧಾನಿ ಮೋದಿಗೆ ಶುಭ ಕೋರಿದ ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ

ಭಾರತ ದೇಶವು 74ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿರುವಂತೆಯೇ ಅತ್ತ ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಅವರು ಭಾರತೀಯರಿಗೆ ಶುಭ ಕೋರಿದ್ದಾರೆ.
ಪ್ರಧಾನಿ ಮೋದಿ-ಕೆಪಿ ಶರ್ಮಾ ಒಲಿ
ಪ್ರಧಾನಿ ಮೋದಿ-ಕೆಪಿ ಶರ್ಮಾ ಒಲಿ

ನವದೆಹಲಿ: ಭಾರತ ದೇಶವು 74ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿರುವಂತೆಯೇ ಅತ್ತ ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಅವರು ಭಾರತೀಯರಿಗೆ ಶುಭ ಕೋರಿದ್ದಾರೆ.

ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿದ ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಅವರು, 74ನೇ ಸ್ವಾತಂತ್ರ್ಯ ದಿನ ಆಚರಿಸಿಕೊಳ್ಳುತ್ತಿರುವ ಭಾರತಕ್ಕೆ ಶುಭ ಕೋರಿದರು. ಅಂತೆಯೇ ಭಾರತದ ಜನರ ಹೆಚ್ಚಿನ ಪ್ರಗತಿ ಮತ್ತು ಸಮೃದ್ಧಿಗೆ ಶುಭಾಶಯ ಕೋರುತ್ತೇನೆ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿಂದೆ ಭಾರತದೊಂದಿಗೆ ಗಡಿ ತಂಟೆ ತೆಗೆದಿದ್ದು ನೇಪಾಳ ಪ್ರಧಾನಿ ಒಲಿ, ಭಾರತದ ಭೂಭಾಗಗಳನ್ನೂ ಸೇರಿಸಿಕೊಂಡ ಹೊಸ ನಕ್ಷೆಗೆ ನೇಪಾಳ ಸಂಸತ್ತಿನ ಅನುಮೋದನೆ ಪಡೆದಿದ್ದರು. ಅಲ್ಲದೆ ಕೊರೋನಾ ಗಿಂತಲೂ ಭಾಪರತದ ವೈರಸ್ ಹೆಚ್ಚು ಅಪಾಯಕಾರಿ ಎಂದು ಹೇಳಿದ್ದರು. ಅಂತೆಯೇ ಶ್ರೀರಾಮ ಹುಟ್ಟಿದ್ದು ನೇಪಾಳದಲ್ಲಿ. ಭಾರತದಲ್ಲಿ ಅಲ್ಲಿ ಅಲ್ಲ. ಇತಿಹಾಸವನ್ನು ಭಾರತ ಹೈಜಾಕ್ ಮಾಡಿದೆ ಎಂದು ಆರೋಪಿಸಿದ್ದರು. ಆ ಮೂಲಕ ಕೆಪಿ ಶರ್ಮಾ ಒಲಿ ನೇರವಾಗಿಯೇ ಭಾರತದ ವಿರುದ್ಧ ತೊಡೆ ತಟ್ಟಿ ನಿಂತಿದ್ದರು. 

ಆದರೆ ಇಂದು 74ನೇ ಸ್ವಾತಂತ್ರ್ಯ ದಿನ ನಿಮಿತ್ತ ಭಾರತಕ್ಕೆ ಶುಭ ಕೋರಿ ಅಚ್ಚರಿ ಮೂಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com