ಭಾರತೀಯ ಮೂಲದ ಸಬ್ರಿನಾ ಸಿಂಗ್ ರನ್ನು ಪತ್ರಿಕಾ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿಕೊಂಡ ಕಮಲಾ ಹ್ಯಾರಿಸ್ 

ಭಾರತೀಯ ಮೂಲದ ಸಬ್ರಿನಾ ಸಿಂಗ್ ಅವರನ್ನು ತಮ್ಮ ಉಪಾಧ್ಯಕ್ಷ ಹುದ್ದೆಯ ಪ್ರಚಾರಕ್ಕೆ ಪತ್ರಿಕಾ ಕಾರ್ಯದರ್ಶಿಯಾಗಿ ಸೆನೆಟರ್ ಕಮಲಾ ಹ್ಯಾರಿಸ್ ಆಯ್ಕೆ ಮಾಡಿದ್ದರು.
ಕಮಲಾ ಹ್ಯಾರಿಸ್
ಕಮಲಾ ಹ್ಯಾರಿಸ್

ವಾಷಿಂಗ್ಟನ್: ಭಾರತೀಯ ಮೂಲದ ಸಬ್ರಿನಾ ಸಿಂಗ್ ಅವರನ್ನು ತಮ್ಮ ಉಪಾಧ್ಯಕ್ಷ ಹುದ್ದೆಯ ಪ್ರಚಾರಕ್ಕೆ ಪತ್ರಿಕಾ ಕಾರ್ಯದರ್ಶಿಯಾಗಿ ಸೆನೆಟರ್ ಕಮಲಾ ಹ್ಯಾರಿಸ್ ಆಯ್ಕೆ ಮಾಡಿದ್ದರು.

ಸಬ್ರಿನಾ ಸಿಂಗ್ ಈ ಹಿಂದೆ ಡೆಮಾಕ್ರಟಿಕ್ ಪಕ್ಷದ ಇಬ್ಬರು ಅಧ್ಯಕ್ಷೀಯ ಹುದ್ದೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ವಕ್ತಾರೆಯಾಗಿ ಕೆಲಸ ಮಾಡಿದ್ದರು. ಭಾರತೀಯ ಮೂಲದ ಮಹಿಳಾ ಉಪಾಧ್ಯಕ್ಷ ಹುದ್ದೆ ಅಭ್ಯರ್ಥಿಗೆ ಪತ್ರಿಕಾ ಕಾರ್ಯದರ್ಶಿಯಾಗಿದ್ದು ಅತೀವ ಸಂತಸ ತಂದಿದೆ ಎಂದು ಸಬ್ರಿನಾ ಸಿಂಗ್ ಟ್ವೀಟ್ ಮಾಡಿದ್ದಾರೆ. 

ಲಾಸ್ ಏಂಜಲೀಸ್  ನಿವಾಸಿಯಾಗಿರುವ ಸಬ್ರಿನಾ ಸಿಂಗ್ ಡೆಮಾಕ್ರಟಿಕ್ ನ್ಯಾಶನಲ್ ಸಮಿತಿಯ ವಕ್ತಾರೆಯಾಗಿದ್ದರು. ಇಂಡಿಯನ್ ಲೀಗ್ ಆಫ್ ಅಮೆರಿಕಾದ ಸರ್ದಾರ್ ಜೆ ಜೆ ಸಿಂಗ್ ಅವರ ಮೊಮ್ಮಗಳು ಸಬ್ರಿನಾ ಸಿಂಗ್. ಭಾರತೀಯ ಮೂಲದ ಅಮೆರಿಕನ್ನರ ಹಿತಾಸಕ್ತಿಗಾಗಿ ಕೆಲಸ ಮಾಡುವ ಸರ್ಕಾರೇತರ ಸಂಘಟನೆ ಇದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com