ಈಗಿನ ಪರಿಸ್ಥಿತಿಯಲ್ಲಿ ಭಾರತದ ಜೊತೆ ಕ್ರಿಕೆಟ್ ಪಂದ್ಯ ಆಡುವುದು ಕಷ್ಟ:ಇಮ್ರಾನ್ ಖಾನ್

ಪ್ರಸ್ತುತ ಎರಡೂ ದೇಶಗಳ ಮಧ್ಯೆ ಬಿಗುವಿನ ವಾತಾವರಣ ಇರುವ ಸಂದರ್ಭದಲ್ಲಿ ಭಾರತದ ಜೊತೆ ಕ್ರಿಕೆಟ್ ಸರಣಿ ಪಂದ್ಯ ಆಡುವುದು ಕಷ್ಟ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

Published: 18th August 2020 07:50 AM  |   Last Updated: 18th August 2020 07:50 AM   |  A+A-


Imran Khan

ಇಮ್ರಾನ್ ಖಾನ್

Posted By : Sumana Upadhyaya
Source : PTI

ಕರಾಚಿ: ಪ್ರಸ್ತುತ ಎರಡೂ ದೇಶಗಳ ಮಧ್ಯೆ ಬಿಗುವಿನ ವಾತಾವರಣ ಇರುವ ಸಂದರ್ಭದಲ್ಲಿ ಭಾರತದ ಜೊತೆ ಕ್ರಿಕೆಟ್ ಸರಣಿ ಪಂದ್ಯ ಆಡುವುದು ಕಷ್ಟ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಸ್ಕೈ ಸ್ಪೋರ್ಟ್ಸ್ ಡಾಕ್ಯುಮೆಂಟರಿ ಜೊತೆ ಮಾತನಾಡುತ್ತಾ ಅವರು, ಈಗಿನ ಸನ್ನಿವೇಶದಲ್ಲಿ ದ್ವಿಪಕ್ಷೀಯ ಕ್ರಿಕೆಟ್ ಪಂದ್ಯ ಆಡುವುದು ಕಷ್ಟವಿದೆ. ಅದಕ್ಕೆ ಪೂರಕವಾದ ವಾತಾವರಣವಿಲ್ಲ, ಭಾರತದ ಈಗಿನ ಸರ್ಕಾರ ಕೂಡ ಅದಕ್ಕೆ ಪೂರಕವಾದ ವಾತಾವರಣ ನಿರ್ಮಿಸಿ ಕೊಟ್ಟಿಲ್ಲ ಎಂದಿದ್ದಾರೆ.

2008ರ ನಂತರ ಭಾರತ ಮತ್ತು ಪಾಕಿಸ್ತಾನ ಟೆಸ್ಟ್ ಪಂದ್ಯವನ್ನಾಡಿಲ್ಲ. 2008ರಲ್ಲಿ ಮುಂಬೈ ಭಯೋತ್ಪಾದಕ ದಾಳಿಯಾದ ನಂತರ 2012ರ ಚಳಿಗಾಲದಲ್ಲಿ ಭಾರತ-ಪಾಕಿಸ್ತಾನ ಬಾಲ್ ಕ್ರಿಕೆಟ್ ನ್ನು ಆಡಿದ್ದವಷ್ಟೆ. 1992ರ ವಿಶ್ವಕಪ್ ನ್ನು ಪಾಕಿಸ್ತಾನ ಗೆದ್ದ ಸಂದರ್ಭದಲ್ಲಿ ಇಮ್ರಾನ್ ಖಾನ್ ತಂಡದ ನಾಯಕರಾಗಿದ್ದರು. 1979 ಮತ್ತು 1987ರಲ್ಲಿ ಎರಡು ಸರಣಿ ಪಂದ್ಯಗಳನ್ನು ಭಾರತದ ವಿರುದ್ಧ ತಾವು ಆಡಿರುವುದಾಗಿ ಇಮ್ರಾನ್ ಖಾನ್ ನೆನಪು ಮಾಡಿಕೊಂಡರು.

Stay up to date on all the latest ಅಂತಾರಾಷ್ಟ್ರೀಯ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp