ಅಮೆರಿಕಾ ಭಾರತದ ಜನರಿಗೆ ಯಾವಾಗಲೂ ನಂಬಿಕಸ್ತ ಸ್ನೇಹಿತ-ಶ್ವೇತ ಭವನ

ಅಮೆರಿಕಾ ಭಾರತದ ಜನರಿಗೆ ಯಾವಾಗಲೂ ನಂಬಿಕಸ್ತ ಸ್ನೇಹಿತ ಎಂದು ಹೇಳಿರುವ ಶ್ವೇತ ಭವನ, ಉಭಯ ದೇಶಗಳ ನಡುವೆ ಸದೃಢ ಒಪ್ಪಂದಕ್ಕೆ ಅಮೆರಿಕಾ ಉತ್ಸುಕವಾಗಿರುವುದಾಗಿ ಪುನರುಚ್ಚರಿಸಿದೆ.
ಪ್ರಧಾನಿ ಮೋದಿ, ಡೊನಾಲ್ಡ್ ಟ್ರಂಪ್
ಪ್ರಧಾನಿ ಮೋದಿ, ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್:  ಅಮೆರಿಕಾ ಭಾರತದ ಜನರಿಗೆ ಯಾವಾಗಲೂ ನಂಬಿಕಸ್ತ ಸ್ನೇಹಿತ ಎಂದು ಹೇಳಿರುವ ಶ್ವೇತ ಭವನ, ಉಭಯ ದೇಶಗಳ ನಡುವೆ ಸದೃಢ ಒಪ್ಪಂದಕ್ಕೆ ಅಮೆರಿಕಾ ಉತ್ಸುಕವಾಗಿರುವುದಾಗಿ ಪುನರುಚ್ಚರಿಸಿದೆ.

ಇತ್ತೀಚಿಗೆ ಸ್ವಾತಂತ್ರೋತ್ಸವ ಆಚರಿಸಿದ ಭಾರತದ ನಮ್ಮ ಸ್ನೇಹಿತರಿಗೆ ಅಭಿನಂದನೆಗಳು ಎಂದು ಶ್ವೇತ ಭವನದ ರಾಷ್ಟ್ರೀಯ ಭದ್ರತಾ ಸಮಿತಿ ಟ್ವೀಟ್ ಮಾಡಿದೆ.ಅಮೆರಿಕಾದಲ್ಲಿರುವ ಭಾರತೀಯ ಜನರು ಕೂಡಾ ಸಡಗರ, ಸಂಭ್ರಮದಿಂದ 74ನೇ ಸ್ವಾತಂತ್ರ್ಯೋತ್ಸವನ್ನು ಆಚರಿಸಿದ್ದರು.ರಾಷ್ಟ್ರೀಯ ಭದ್ರತಾ ಸಮಿತಿ ಮಾಡಿರುವ ಟ್ವೀಟ್ ನ್ನು ಸೆನೆಟರ್ ಜಾನ್ ಕಾರ್ನಿನ್ ರೀ ಟ್ವೀಟ್ ಮಾಡಿದ್ದಾರೆ.

ಭಾರತ ಜೊತೆಗೆ ಅಮೆರಿಕಾ ಸಂಬಂಧವನ್ನು ಟ್ರಂಪ್ ಆಡಳಿತ ಮೌಲೀಕರಣ ಮಾಡುತ್ತಿದ್ದು,  ಮತ್ತಷ್ಟು ಗಟ್ಟಿಗೊಳಿಸಲಾಗುತ್ತಿದೆ ಎಂದು ಈ ವಾರದ ಆರಂಭದಲ್ಲಿ ರಾಷ್ಟ್ರೀಯ ಭದ್ರತಾ ಸಮಿತಿಯ ಆಡಳಿತಾತ್ಮಕ ಅಧಿಕಾರಿಯೊಬ್ಬರು ಹೇಳಿದ್ದರು.

ಕಳೆದ ಮೂರುವರೆ ವರ್ಷಗಳಲ್ಲಿ ಪಾಲುದಾರಿಕೆಯನ್ನು ವಿಸ್ತರಿಸುವ ಮೂಲಕ ಅಮೆರಿಕಾ-ಭಾರತ ಸಂಬಂಧಕ್ಕೆ ಡೊನಾಲ್ಡ್ ಟ್ರಂಪ್ ಆದ್ಯತೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com