ನಿರಂಕುಶ ಆಡಳಿತ ನೀಡುವುದಿಲ್ಲ, ಚೀನಾ ದೇಶಕ್ಕೆ ತಕ್ಕ ಪಾಠ:  ಜೋ ಬಿಡೆನ್

ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದರೆ ನಿರಂಕುಶ ಆಡಳಿತ ನೀಡುವುದಿಲ್ಲ ಎಂದು ಡೆಮಾಕ್ರಾಟಿಕ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಜೋ ಬಿಡೆನ್ ಹೇಳಿದ್ದಾರೆ.
ಜೋ ಬಿಡೆನ್
ಜೋ ಬಿಡೆನ್

ನ್ಯೂಯಾರ್ಕ್: ತಾವು ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದರೆ ನಿರಂಕುಶ ಆಡಳಿತ ನೀಡುವುದಿಲ್ಲ ಎಂದು ಡೆಮಾಕ್ರಾಟಿಕ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಜೋ ಬಿಡೆನ್ ಹೇಳಿದ್ದಾರೆ.

77 ವರ್ಷದ ಜೋ ಬಿಡೆನ್ ಹಲವಾರು ದಶಕಗಳಿಂದ ಸೆನೆಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಬರಾಕ್ ಒಬಾಮಾ ಕಾಲದಲ್ಲಿ 8 ವರ್ಷಗಳ ಕಾಲ ಅಮೆರಿಕದ ಉಪಾಧ್ಯಕ್ಷರಾಗಿಯೂ ಕೆಲಸ ಮಾಡಿದ ಅನುಭವಿ. ಇವರು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತೀವ್ರ ಪ್ರತಿಸ್ಪರ್ಧಿಯಾಗಿದ್ದು, ಚುನಾವಣಾ ಪ್ರಚಾರ ಕಾರ್ಯಕ್ಕೆ ಚಾಣಕ್ಷತೆಯಿಂದ ಚಾಲನೆ ನೀಡಿದ್ದಾರೆ. 

ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವು ಆಯ್ಕೆಯಾದರೆ ಅಮೆರಿಕದ ಮಿತ್ರಕೂಟಗಳು, ಸ್ನೇಹಿತರೊಂದಿಗೆ ಸೇರಿ ಉತ್ತಮ ಆಡಳಿತ ನೀಡುವುದು ತಮ್ಮ ಆದ್ಯತೆಯಾಗಿದೆ. 

ಜನಪರ ಸಮಸ್ಯೆಗಳ ನಿವಾರಣೆಯತ್ತ ಗಮನ ಹರಿಸುತ್ತೇನೆ. ಅಮೆರಿಕದ ಘನತೆ ಎತ್ತಿಹಿಡಿಯುವ ಜತೆಗೆ ರಾಷ್ಟ್ರವನ್ನು ಕತ್ತಲಿನಿಂದ ಬೆಳಕಿನೆಡೆ ಮುನ್ನಡೆಸಲು ಗಮನಹರಿಸುವುದಾಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com