ಭಾರತದ 'ನೆರೆಹೊರೆಯವರು ಮೊದಲು' ನೀತಿಯಲ್ಲಿ ಬಾಂಗ್ಲಾದೇಶ ಪ್ರಥಮ; ವಿದೇಶಾಂಗ ಕಾರ್ಯದರ್ಶಿಗಳ ಪುನರುಚ್ಚಾರ
ಪ್ರಧಾನಿ ನರೇಂದ್ರ ಮೋದಿ ಅವರ 'ನೆರೆಹೊರೆಯವರು ಮೊದಲು' ನೀತಿಯಲ್ಲಿ ಬಾಂಗ್ಲಾದೇಶ ಪ್ರಥಮ ಸ್ಥಾನದಲ್ಲಿದೆ ಎಂದು ಭಾರತ ಪುನರುಚ್ಚರಿಸಿದೆ.
Published: 22nd August 2020 09:45 PM | Last Updated: 22nd August 2020 09:45 PM | A+A A-

ಪ್ರಧಾನಿ ಮೋದಿ- ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ (ಸಂಗ್ರಹ ಚಿತ್ರ)
ಢಾಕಾ: ಪ್ರಧಾನಿ ನರೇಂದ್ರ ಮೋದಿ ಅವರ 'ನೆರೆಹೊರೆಯವರು ಮೊದಲು' ನೀತಿಯಲ್ಲಿ ಬಾಂಗ್ಲಾದೇಶ ಪ್ರಥಮ ಸ್ಥಾನದಲ್ಲಿದೆ ಎಂದು ಭಾರತ ಪುನರುಚ್ಚರಿಸಿದೆ.
ಎರಡೂ ದೇಶಗಳ ವಿದೇಶಾಂಗ ಸಚಿವರು ಜಂಟಿ ಸಲಹಾ ಆಯೋಗ ಸೃಜಿಸಲು ಒಪ್ಪಿಗೆ ಸೂಚಿಸಿದ್ದಾರೆ. ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗಾಲ ಅವರು ಇತ್ತೀಚಿಗೆ ಬಾಂಗ್ಲಾದೇಶಕ್ಕೆ ಭೇಟಿ ನೀಡಿ ಪ್ರಧಾನಿ ಮೋದಿ ಅವರ ಸಂದೇಶ ತಲುಪಿಸಿದ್ದಾರೆ. ಅಲ್ಲಿನ ರಾಯಭಾರಿ ಮಸೂದ್ ಬಿನ್ ಮೊಮೆನ್ ಅವರೊಂದಿಗೆ ನಡೆದ ಒಂದೂವರೆ ಗಂಟೆಗಳ ಸಭೆಯಲ್ಲಿ ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಒಪ್ಪಂದಗಳ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ಶೃಂಗಾಲ ಅವರು ಭಾರತದ 'ನೆರೆಹೊರೆಯವರು ಮೊದಲು' ನೀತಿಯಲ್ಲಿ ಬಾಂಗ್ಲಾದೇಶ ಮೊದಲು ಬರುತ್ತದೆ ಎಂಬ ವಿಷಯವನ್ನು ಪುನರುಚ್ಚರಿಸಿದರು. ಕೋವಿಡ್ ಸಂದರ್ಭದಲ್ಲಿ ಉಭಯ ನಾಯಕರು ಸಾಂಕ್ರಾಮಿಕದ ವಿರುದ್ಧ ಹೋರಾಡಲು ಕೈಜೋಡಿಸಬೇಕು ಎಂದು ಆಗ್ರಹಿಸಿದರು. ಇಂಡೋ-ಬಾಂಗ್ಲಾದೇಶ ಗಡಿಯಲ್ಲಿ ಹೆಚ್ಚುತ್ತಿರುವ ಸಾವಿನ ಸಂಖ್ಯೆ ಕುರಿತು ಶೃಂಗಾಲ ಆತಂಕ ವ್ಯಕ್ತಪಡಿಸಿದರು.
ಜೊತೆಗೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯರಾಗಿ ಆಯ್ಕೆಯಾಗಿದ್ದಕ್ಕೆ ಭಾರತಕ್ಕೆ ಬಾಂಗ್ಲಾ ವಿದೇಶಿ ಕಾರ್ಯದರ್ಶಿಗಳು ಅಭಿನಂದನೆ ಸಲ್ಲಿಸಿದರು.